Home Latest Health Updates Kannada Whatsapp Feature: ವಾಟ್ಸಪ್ ಬ್ಯುಸಿನೆಸ್ ನಿಂದ ಹೊಸ ಫೀಚರ್ ; ಸಣ್ಣ ವ್ಯಾಪಾರಿಗಳಿಗೆ ದೊಡ್ಡ ಅವಕಾಶ...

Whatsapp Feature: ವಾಟ್ಸಪ್ ಬ್ಯುಸಿನೆಸ್ ನಿಂದ ಹೊಸ ಫೀಚರ್ ; ಸಣ್ಣ ವ್ಯಾಪಾರಿಗಳಿಗೆ ದೊಡ್ಡ ಅವಕಾಶ !

Whatsapp Feature
image source: The economic Times

Hindu neighbor gifts plot of land

Hindu neighbour gifts land to Muslim journalist

WhatsApp Feature: ಇಂದಿನ ದಿನದಲ್ಲಿ ವಾಟ್ಸಪ್ ಬಳಸೋರು ಹೇರಳವಾಗಿದ್ದಾರೆ. ಇತ್ತೀಚೆಗೆ ವಾಟ್ಸಾಪ್ ಕೂಡ ಹೊಸ ಹೊಸ ವೈಶಿಷ್ಟ್ಯದೊಂದಿಗೆ ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿದೆ. ಇದೀಗ ಮತ್ತೊಂದು ಫೀಚರ್ (WhatsApp Feature) ವಾಟ್ಸಪ್ ಬತ್ತಳಿಕೆಗೆ ಬಂದಿದೆ. ಹೌದು, ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಮಂಗಳವಾರ ವಾಟ್ಸಪ್ ನ‌ ಹೊಸ ಫೀಚರ್ ಪರಿಚಯಿಸಿದ್ದಾರೆ.

ವಾಟ್ಸಾಪ್ ಬ್ಯುಸಿನೆಸ್ ಅಪ್ಲಿಕೇಶನ್‌ನಲ್ಲಿ ಗ್ರಾಹಕರಿಗೆ ವೈಯಕ್ತೀಕರಿಸಿದ ಸಂದೇಶಗಳನ್ನು ಕಳುಹಿಸುವ ಸಾಮರ್ಥ್ಯ ಸೇರಿದಂತೆ ಮುಂಬರುವ ಹೊಸ ವೈಶಿಷ್ಟ್ಯಗಳನ್ನು ಮಾರ್ಕ್ ಜುಕರ್‌ಬರ್ಗ್ ಪ್ರಕಟಿಸಿದ್ದಾರೆ. ಇದರಿಂದ ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ.

ಸಣ್ಣ ವ್ಯಾಪಾರಗಳಿಗೆ ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್ ಜಾಹೀರಾತನ್ನು ನೇರವಾಗಿ ವಾಟ್ಸಪ್ ಬ್ಯುಸಿನೆಸ್ ಅಪ್ಲಿಕೇಶನ್‌ನಲ್ಲಿ ರಚಿಸಲು, ಖರೀದಿಸಲು ಮತ್ತು ಪ್ರಕಟಿಸಲು ಸಾಧ್ಯವಾಗಲಿದೆ. ಈ ಫೀಚರ್ ನಲ್ಲಿ ಅಪಾಯಿಂಟ್‌ಮೆಂಟ್ ನೋಟಿಫಿಕೇಶನ್, ಹುಟ್ಟುಹಬ್ಬದ ಶುಭಾಶಯಗಳ ಸಂದೇಶಗಳನ್ನು ಗ್ರಾಹಕರಿಗೆ ಕಳುಹಿಸುವ ಆಯ್ಕೆಯನ್ನು ಹೊಂದಿರುತ್ತವೆ.

ಯಾವುದೇ ಫೇಸ್ಬುಕ್ ಖಾತೆಯ ಬೇಕಿಲ್ಲ. ವ್ಯವಹಾರಗಳನ್ನು ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಇಮೇಲ್ ವಿಳಾಸ ಮತ್ತು ಪಾವತಿಯ ವಿಧಾನವಾಗಿದೆ. ಜನರು ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದಾಗ, ವಾಟ್ಸಪ್ ಚಾಟ್ ಓಪನ್ ಆಗುತ್ತದೆ. ಇಲ್ಲಿ ಗ್ರಾಹಕರು ಪ್ರಶ್ನೆಗಳನ್ನು ಕೇಳಬಹುದು, ಉತ್ಪನ್ನಗಳನ್ನು ಬ್ರೌಸ್ ಮಾಡಬಹುದು ಮತ್ತು ಖರೀದಿ ಮಾಡಬಹುದಾಗಿದೆ.