Home Latest Health Updates Kannada Fridge : ಮನೆಯ ಫ್ರಿಜ್ಡ್ ನಲ್ಲಿ ಯಾವಾಗಲೂ ಐಸ್ ಕಟ್ಟುತ್ತಾ? ಜಸ್ಟ್ ಈ ಟಿಪ್ಸ್ ಫಾಲೋ...

Fridge : ಮನೆಯ ಫ್ರಿಜ್ಡ್ ನಲ್ಲಿ ಯಾವಾಗಲೂ ಐಸ್ ಕಟ್ಟುತ್ತಾ? ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ, ತಡೆಯಿರಿ

Hindu neighbor gifts plot of land

Hindu neighbour gifts land to Muslim journalist

Fridge : ಇಂದು ಎಲ್ಲರ ಮನೆಯಲ್ಲಿ ಫ್ರಿಜ್ಡ್ ಇರುವುದು ಸಾಮಾನ್ಯ. ಈ ಫ್ರಿಡ್ಜ್ ಅನ್ನು ಹೇಗಾದ್ರು ಮೈನ್ಟೈನ್ ಮಾಡಬಹುದು. ಆದರೆ ಇದರಲ್ಲಿ ಐಸ್ ಕಟ್ಟುವುದು ಅನೇಕರಿಗೆ ದೊಡ್ಡ ತಲೆನೇವಾಗಿ ಪರಿಣಮಿಸುತ್ತದೆ. ಇನ್ನು ಮುಂದೆ ನೀವು ಚಿಂತಿಸಬೇಕಾಗಿಲ್ಲ. ಈ ಟಿಪ್ಸ್ ಫಾಲೋ ಮಾಡಿದರೆ ನಿಮ್ಮ ಮನೆಯ ಫ್ರಿಡ್ಜ್ ನಲ್ಲಿ ಯಾವ ರೀತಿಯ ಐಸ್ ಕೂಡ ಸಂಗ್ರಹ ಆಗುವುದಿಲ್ಲ.

ಹೌದು, ಫ್ರೀಜರ್‌ನಲ್ಲಿರುವ ನೀರು ಹೆಪ್ಪುಗಟ್ಟಿ ಮಂಜುಗಡ್ಡೆಯಾಗಿ ಬದಲಾಗುತ್ತದೆ. ಗಮನಿಸದೆ ಬಿಟ್ಟರೆ, ಫ್ರೀಜರ್ ಬಾಗಿಲು ತೆರೆಯಲು ಮತ್ತು ಮುಚ್ಚಲು ಸಹ ಕಷ್ಟವಾಗುತ್ತದೆ. ಅದಾದ ನಂತರ, ರೆಫ್ರಿಜರೇಟರ್‌ನ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ನಾವು ನಿಮಗೆ ನೀಡುತ್ತಿರುವ ಸಲಹೆಯನ್ನು ತಪ್ಪದೇ ಫಾಲೋ ಮಾಡಿದರೆ ನೀವು ಫ್ರಿಡ್ಜ್ ನಲ್ಲಿ ಐಸ್ ಕಟ್ಟುವುದನ್ನು ತಪ್ಪಿಸಬಹುದು.

ಮೊದಲ ಸಲಹೆ…

ಮೊದಲು, ರೆಫ್ರಿಜರೇಟರ್ ಅನ್ನು ಆಫ್ ಮಾಡಿ. ನಂತರ ರೆಫ್ರಿಜರೇಟರ್ ಅನ್ನು ನೀರು ಸೋರಿಕೆಯಾಗದ ಸ್ಥಳಕ್ಕೆ ಸರಿಸಿ. ಈಗ ಬಿಸಿನೀರು ತೆಗೆದುಕೊಳ್ಳಿ. ಫ್ರೀಜರ್‌ನಲ್ಲಿ ಒಂದು ಕಪ್ ನೀರು ಸುರಿಯಿರಿ. ಮಂಜುಗಡ್ಡೆ ಕರಗುತ್ತದೆ.

ಎರಡನೇ ಸಲಹೆ…

ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಸುರಿಯಿರಿ, ಅದನ್ನು ಫ್ರೀಜರ್‌ನಲ್ಲಿ ಇರಿಸಿ ಮತ್ತು ಸ್ವಲ್ಪ ಸಮಯದವರೆಗೆ ಅಲ್ಲಿಯೇ ಬಿಡಿ. ಫ್ರೀಜರ್ ಬಾಗಿಲು ಮುಚ್ಚಿ. ಸ್ವಲ್ಪ ಸಮಯದ ನಂತರ ಮಂಜುಗಡ್ಡೆ ಕರಗುತ್ತದೆ.

ಮೂರನೇ ಸಲಹೆ…

ನಿಮ್ಮ ಮನೆಯಲ್ಲಿ ಹೇರ್ ಡ್ರೈಯರ್ ಇದ್ದರೆ, ಫ್ರೀಜರ್‌ನಲ್ಲಿರುವ ಐಸ್ ಅನ್ನು ಸುಲಭವಾಗಿ ಕರಗಿಸಬಹುದು. ಫ್ರೀಜರ್ ಬಾಗಿಲು ತೆರೆಯಿರಿ ಮತ್ತು ಹೇರ್ ಡ್ರೈಯರ್ ಅನ್ನು ಆನ್ ಮಾಡಿ. ಬಿಸಿ ಗಾಳಿ ಬೀಸುತ್ತದೆ ಮತ್ತು ಮಂಜುಗಡ್ಡೆ ಕರಗುತ್ತದೆ.