Home Latest Health Updates Kannada Girls Life Style: ಹುಡುಗಿಯರು ಒಬ್ಬರೇ ಇದ್ದಾಗ ಏನೇನು ಮಾಡ್ತಾರೆ ?

Girls Life Style: ಹುಡುಗಿಯರು ಒಬ್ಬರೇ ಇದ್ದಾಗ ಏನೇನು ಮಾಡ್ತಾರೆ ?

Girls Life Style

Hindu neighbor gifts plot of land

Hindu neighbour gifts land to Muslim journalist

Girls Life Style: ಮನುಷ್ಯ ಸಂಗ ಜೀವಿ ಆದ್ದರಿಂದ ಎಲ್ಲರೊಂದಿಗೂ ಇರಲು ಬಯಸುತ್ತಾನೆ. ತನ್ನ ಸ್ನೇಹಿತರೊಂದಿಗೆ, ಸಂಬಂಧಿಕರೊಂದಿಗೆ, ಬಂಧು-ಬಳಗದೊಂದಿಗೆ ಇರುವುದೆಂದರೆ ಆತನಿಗೆ ಬಹಳಷ್ಟು ಖುಷಿ. ಇದರ ಹೊರತಾಗಿಯೂ ಕೆಲವರು ಹುಡುಗ- ಹುಡುಗಿಯರು(Boys-Girls) ಒಬ್ಬಂಟಿಯಾಗಿರಲು ಇಷ್ಟಪಡುತ್ತಾರೆ. ಆಗಾಗ ಈ ವಿಚಾರಗಳು ಕೂಡ ಚರ್ಚೆಯಾಗುತ್ತಿರುತ್ತದೆ. ಹಾಗಿದ್ರೆ ಒಂಟಿಯಾಗಿದ್ದು ಇವರು ಮಾಡೋದೇನು?

ಹುಡುಗರು ಒಂಟಿಯಾಗಿದ್ದಾಗ ಏನು ಮಾಡ್ತಾರೆ ಅಂತಾ ವಿಶೇಷವಾಗಿ ಹೇಳ್ಬೇಕಾಗಿಲ್ಲ. ಯಾಕೆಂದ್ರೆ ಹುಡುಗರ ಸಂಗಾತಿ ಟಿವಿ ಇಲ್ಲವೆ ಮೊಬೈಲ್. ಇವರೆಡರಲ್ಲಿ ಅವರು ಮುಳುಗಿಲ್ಲ ಎಂದಾದ್ರೆ ಮನೆಗೆ ಬೀಗ ಜಡಿದು ಸ್ನೇಹಿತರ ಜೊತೆ ಸುತ್ತಾಡಲು ಹೋಗಿರ್ತಾರೆ. ಆದರೆ ಹುಡುಗಿಯರು ಒಂಟಿಯಾಗಿರುವಾಗ ಏನು ಮಾಡುತ್ತಾರೆ(Girls Life Style)ಎಂಬುದು ಹಲವರ ಕುತೂಹಲ. ಹಾಗಿದ್ರೆ ಅವರು ಏನು ಮಾಡುತ್ತಾರೆ ಅಂತ ತಿಳಿಯೋಣ.

ಒಂಟಿಯಾಗಿದ್ದಾಗ ಹುಡುಗಿಯರು ಏನು ಮಾಡುತ್ತಾರೆ?

• ಹುಡುಗಿಯರಿಗೆ ಶಾರ್ಟ್ (Shorts) ನಲ್ಲಿ ಇರೋದು ಇಷ್ಟ. ಈಗಿನ ದಿನಗಳಲ್ಲಿ ಯಾರಿರಲಿ ಬಿಡಲಿ ಹುಡುಗಿಯರು ಶಾರ್ಟ್ಸ್ ಧರಿಸ್ತಾರೆ ನಿಜ. ಹಾಗಂತ ಎಲ್ದರೂ ಶಾರ್ಟ್ಸ್ ಧರಿಸಲ್ಲ. ಅವರ ಮನೆಯ ವಾತಾವರಣದ ಮೇಲೆ ಅವಲಂಬಿತವಾಗಿರುತ್ತೆ.

• ಹುಡುಗಿಯರು ಒಂಟಿಯಾಗಿರುವಾಗ ತಮ್ಮ ಸೌಂದರ್ಯದ ಕಡೆ ಹೆಚ್ಚು ಗಮನಹರಿಸುತ್ತಾರೆ. ಸೌಂದರ್ಯ (Beauty) ಕ್ಕೆ ಹೆಚ್ಚು ಆದ್ಯತೆ ನೀಡುವ ಹುಡುಗಿಯರು ಮಿನಿ ಫೇಶಿಯಲ್ ಪೆರೇಡ್ ಮಾಡ್ತಾರೆ. ಅವರ ಈ ಫ್ಯಾಷನ್ (fashion) ಪರೇಡ್‌ನಲ್ಲಿ ಮೇಕಪ್, ಚರ್ಮದ ಆರೈಕೆ, ಉಗುರು, ಕೂದಲಿನ ಆರೈಕೆ ಸೇರಿರುತ್ತದೆ.

• ಒಂಟಿಯಾಗಿರೋ ಹುಡುಗಿಯರು ಬಟ್ಟೆ ಮೇಲೆ ಪ್ರಯೋಗ ನಡೆಸುತ್ತಾರೆ. ಅಂದರೆ ಹಳೆ ಬಟ್ಟೆಗಳನ್ನು ಹೊಸದು ಮಾಡೋದು ಹೇಗೆ, ಎಷ್ಟೋ ದಿನಗಳ ಹಿಂದೆ ಖರೀದಿ ಮಾಡಿದ್ದ ಡ್ರೆಸ್ ಈಗ್ಲೂ ಫಿಟ್ ಆಗುತ್ತಾ ಎಂದು ಅವರು ನೋಡ್ತಾರೆ. ಕನ್ನಡಿ ಮುಂದೆ ನಿಂತು ತಮ್ಮ ಸೌಂದರ್ಯ ನೋಡಿಕೊಳ್ಳುತ್ತಾರೆ. ಫೋಟೋ, ವಿಡಿಯೋ ಮಾಡೋದ್ರಲ್ಲೂ ಬ್ಯುಸಿಯಾಗ್ತಾರೆ.

• ಒಂಟಿಯಾಗಿರಲಿ ಇಲ್ಲದಿರಲಿ ಹುಡುಗಿಯರು ಮಾಡುವ ಅತ್ಯಂತ ವಿಶೇಷ ಮತ್ತು ಸಾಮಾನ್ಯವಾದ ಕೆಲಸವೆಂದರೆ ತಮ್ಮ ಮಾಜಿ ಗೆಳೆಯನ ಪ್ರೊಫೈಲ್(ex boy friend profile) ಅನ್ನು ಆಗಾಗ್ಗೆ ನೋಡುವುದು ಮತ್ತು ಅವನು ಈಗ ಯಾರೊಂದಿಗೆ ಡೇಟಿಂಗ್ ಮಾಡುತ್ತಿರಬಹುದು ಎಂದು ಯೋಚಿಸುವುದು. ಅವನು ಏನು ಮಾಡುತ್ತಿದ್ದಾನೆ, ಎಲ್ಲಿಗೆ ಹೋಗುತ್ತಿದ್ದಾನೆ, ಯಾರೊಂದಿಗೆ ಇದ್ದಾನೆ ಎಂದು ಗಮನಿಸುವುದು ಇತ್ಯಾದಿ.

• ಹುಡುಗಿಯರು ಒಂಟಿಯಾಗಿದ್ದಾಗ ಟಿವಿ ನೋಡೋ ಅವಕಾಶವನ್ನು ತಪ್ಪಿಸಿಕೊಳ್ಳೋದಿಲ್ಲ. ಸಾರ್ವಜನಿಕವಾಗಿ ಅಥವಾ ಕುಟುಂಬಸ್ಥರ ಮುಂದೆ ವೀಕ್ಷಣೆ ಮಾಡಲು ಸಾಧ್ಯವಾಗದ ಸಿನಿಮಾ, ಸಿರೀಸ್ ನೋಡಲು ಹುಡುಗಿಯರು ಇಷ್ಟಪಡ್ತಾರೆ. ಜೊತೆಗೆ ಅವರು ತಮ್ಮ ಭಾವನೆಗಳೊಂದಿಗೆಯೇ ಮಾತನಾಡುತ್ತಾರೆ.