Home Latest Health Updates Kannada Toilet Cleaning Tips: ಬಾತ್ ರೂಂ ಮತ್ತು ಟಾಯ್ಲೆಟ್ ಕ್ಲೀನ್ ಮಾಡಲು ಒಂದೇ ಅಸ್ತ್ರ ಇಲ್ಲಿದೆ!...

Toilet Cleaning Tips: ಬಾತ್ ರೂಂ ಮತ್ತು ಟಾಯ್ಲೆಟ್ ಕ್ಲೀನ್ ಮಾಡಲು ಒಂದೇ ಅಸ್ತ್ರ ಇಲ್ಲಿದೆ! ಟ್ರೈ ಮಾಡಿ ನೋಡಿ!

Toilet cleaning Tips

Hindu neighbor gifts plot of land

Hindu neighbour gifts land to Muslim journalist

Toilet Cleaning Tips: ಬಾತ್ ರೂಂ ಮತ್ತು ಟಾಯ್ಲೆಟ್ ಇವೆರಡನ್ನು ಕ್ಲೀನ್ ಇಟ್ಟುಕೊಳ್ಳುವುದು ಆರೋಗ್ಯಕ್ಕೆ ಬಹಳ ಮುಖ್ಯ. ಆದ್ರೆ ಪದೇ ಪದೇ ಟಾಯ್ಲೆಟ್ ಕ್ಲೀನ್ (Toilet Cleaning Tips) ಮಾಡುವುದು ದೊಡ್ಡ ಸಮಸ್ಯೆ ಅಂದುಕೊಂಡಲ್ಲಿ ನಿಮ್ಮ ಅಭಿಪ್ರಾಯ ತಪ್ಪು. ಅದರಲ್ಲೂ ಟಾಯ್ಲೆಟ್ ಸ್ವಚ್ಚವಾಗಿಡಲು ಮಾರುಕಟ್ಟೆಯಲ್ಲಿ ದುಬಾರಿ ಲಿಕ್ವಿಡ್ ಗಳು ಬಳಸುವ ಬದಲಿಗೆ ನಿಮಗೆ ಇಲ್ಲಿ ಸುಲಭ ಉಪಾಯ ತಿಳಿಸಲಾಗಿದೆ. ಹೌದು, ದಿನನಿತ್ಯ ಟಾಯ್ಲೆಟ್ ಉಪಯೋಗಿಸುವಾಗ ನೀವು ಇದೊಂದು ಕೆಲಸ ಮಾಡಿದರೆ ಸಾಕು.

ಹೌದು, ಬಾತ್ ರೂಂ ಮತ್ತು ಟಾಯ್ಲೆಟ್ ಕ್ಲೀನ್ ಮಾಡಲು ಒಂದೇ ಅಸ್ತ್ರ ಇಲ್ಲಿದೆ! ಟ್ರೈ ಮಾಡಿ ನೋಡಿ! 

ಮುಖ್ಯವಾಗಿ ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ವಸ್ತುವಿದ್ದು, ಇದು ಬೆಳ್ಳುಳ್ಳಿಗೆ ಪರಿಮಳವನ್ನು ನೀಡುತ್ತದೆ. ಈ ಅಂಶವು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಇದರಿಂದ ಬಾತ್ ರೂಂ ಕ್ಲೀನ್ ಮಾಡಬಹುದು.

ನೀವು ಶೌಚಾಲಯವನ್ನು ಸ್ವಚ್ಛಗೊಳಿಸಲು ಬೆಳ್ಳುಳ್ಳಿಯನ್ನು ಎರಡು ರೀತಿಯಲ್ಲಿ ಬಳಸಬಹುದು. ಮೊದಲನೇಯದಾಗಿ ರಾತ್ರಿ ಬಾತ್ ರೂಮಿನಲ್ಲಿ ಬೆಳ್ಳುಳ್ಳಿ ಎಸಳು ಹಾಕಿ. ಅದನ್ನು ರಾತ್ರಿಯಿಡೀ ನೆನೆಯಲು ಬಿಡಿ. ಅದರಲ್ಲೂ ಬಾತ್ ರೂಂ ಒದ್ದೆ ಇದ್ದರೆ ಹೆಚ್ಚು ಪ್ರಯೋಜನ ನೀಡುತ್ತದೆ. ಅಲ್ಲದೇ, ಅದನ್ನು ಹಾಗೆಯೇ ಬೆಳಗಿನ ತನಕ ಬಿಟ್ಟರೆ ದುರ್ವಾಸನೆ ದೂರವಾಗುವುದಲ್ಲದೇ, ಬ್ಯಾಕ್ಟೀರಿಯಾಗಳೂ ಮಾಯವಾಗುತ್ತದೆ.

ಮುಖ್ಯವಾಗಿ ರಾತ್ರಿ ಹೊತ್ತು ಜನರು ಬಾತ್ರೂಮ್ ಬಳಸುವುದು ಕಡಿಮೆ. ಹಾಗಾಗಿ ಬೆಳ್ಳುಳ್ಳಿ ವಾಸನೆ ಬರುವ ಕಾರಣರುವುದರಿಂದ ಈ ಕೆಲಸವನ್ನು ರಾತ್ರಿ ಹೊತ್ತು ಮಾತ್ರ ಮಾಡಬೇಕು. ನಂತರ ಬೆಳಗ್ಗೆದ್ದು ಕಮೋಡ್ ಅನ್ನು ಫ್ಲಶ್ ಮಾಡಿದರೆ ಕೆಲಸ ಮುಗಿದಂತೆ.