Home daily horoscope Seven Horse Picture: ಮನೆಯ ಈ ದಿಕ್ಕಿನಲ್ಲಿ ಕುದುರೆ ಫೋಟೋ ತೂಗುಹಾಕಬೇಡಿ, ಕೆಡುಕು ಖಂಡಿತ!!

Seven Horse Picture: ಮನೆಯ ಈ ದಿಕ್ಕಿನಲ್ಲಿ ಕುದುರೆ ಫೋಟೋ ತೂಗುಹಾಕಬೇಡಿ, ಕೆಡುಕು ಖಂಡಿತ!!

Seven Horse Picture
Image source: MagicBricks

Hindu neighbor gifts plot of land

Hindu neighbour gifts land to Muslim journalist

Seven Horse Picture: ವಾಸ್ತು (Vastu) ಪ್ರಕಾರ, ಮನೆಯಲ್ಲಿನ ಪ್ರತಿಯೊಂದು ವಸ್ತುವಿಗೂ ಅದರದೇ ಆದ ದಿಕ್ಕು, ಸ್ಥಾನಗಳಿವೆ. ಮನೆ ಕಟ್ಟಬೇಕಾದರೆ, ಬಾಗಿಲು ಯಾವ ದಿಕ್ಕಿಗಿರಬೇಕು. ಕಿಟಕಿ, ದೇವರ ಕೋಣೆ (Pooja room) ಇವೆಲ್ಲವನ್ನೂ ವಾಸ್ತು ಪ್ರಕಾರವೇ ಮಾಡಲಾಗುತ್ತದೆ. ಅಂತೆಯೇ ಮನೆಯಲ್ಲಿ ಕುದುರೆ ಫೋಟೋ ತೂಗುಹಾಕಬೇಕಾದರೆ ಈ ವಿಚಾರ ತಿಳಿದಿರಲಿ. ವಾಸ್ತುಪ್ರಕಾರ, ಮನೆಯ ಕೆಲವೊಂದು ದಿಕ್ಕಿನಲ್ಲಿ ಮಾತ್ರ ಕುದುರೆ ಫೋಟೋ ಹಾಕಬಹುದು.

ಮನೆ (House) ಸುಂದರವಾಗಿ ಕಾಣಬೇಕು. ಹಾಗೂ ಕಲೆಯ (Art) ಮೇಲೆ ಆಸಕ್ತಿ ಇರುವವರು ಮನೆತುಂಬಾ ಚಿತ್ರಗಳನ್ನು ತೂಗುಹಾಕಿರುತ್ತಾರೆ. ಆಕರ್ಷಣೀಯವಾದ ಪೈಂಟಿಂಗ್ ಗಳು (Painting) ಇರುತ್ತವೆ. ಹಾಗೆಯೇ ನಿಮ್ಮ ಮನೆಯಲ್ಲಿ 7 ಕುದುರೆಯ ಚಿತ್ರ (Seven Horse Picture) , ಪೈಂಟಿಂಗ್ ಇದ್ದರೆ ಅದನ್ನು ಸರಿಯಾದ ದಿಕ್ಕಿನಲ್ಲಿ ಅಳವಡಿಸಿ. ಮನೆಯ ಈ ದಿಕ್ಕಿನಲ್ಲಿ ಅಥವಾ ಸ್ಥಳದಲ್ಲಿ ಕುದುರೆ ಫೋಟೋ ಹಾಕ್ಬೇಡಿ. ಯಾಕೆ ಅಂತೀರಾ?? ದುರಾದೃಷ್ಟ ವಕ್ಕರಿಸುತ್ತದೆ.

ವಾಸ್ತು ಪ್ರಕಾರ (Vastu), ಮನೆಯಲ್ಲಿ ಏಳು ಕುದುರೆ ಓಡುವ (Seven Horse Running Photo) ಚಿತ್ರ ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕುದುರೆಗಳು ಸಾಧನೆ, ಶಕ್ತಿ, ಪ್ರಗತಿ ಮತ್ತು ಶಾಂತಿಯನ್ನು ಪ್ರತಿನಿಧಿಸುತ್ತವೆ. ಕುದುರೆಯ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಧನಾತ್ಮಕತೆ (Positivity) ನೆಲೆಸುತ್ತದೆ. ನಕಾರಾತ್ಮಕತೆ ದೂರವಾಗುತ್ತದೆ. ಆದರೆ, ಇದನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು ಅಷ್ಟೇ!!.

ವಾಸ್ತು ಪ್ರಕಾರ, 7 ಕುದುರೆಗಳ ಚಿತ್ರವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ಇದರಿಂದ ಯಶಸ್ಸು ಲಭಿಸುತ್ತದೆ. ಪೂರ್ವ ದಿಕ್ಕಿನಲ್ಲೂ ಇಡಬಹುದು. ಇದರಿಂದ ವೃತ್ತಿ ಜೀವನದಲ್ಲಿ ಒಳಿತಾಗುತ್ತದೆ.
ಉತ್ತರ ದಿಕ್ಕು ಕೂಡ ಶುಭ ಸೂಚಕವೇ ಆಗಿದೆ. ಈ ದಿಕ್ಕು ಸಮೃದ್ಧಿಯ ಸಂಕೇತವಾಗಿದೆ.

ಈ 7 ಕುದುರೆಗಳ ಫೋಟೋ ಎಲ್ಲಿ ಇಡಬಾರದು ಗೊತ್ತಾ? ಮಲಗುವ ಕೋಣೆ, ದೇವಸ್ಥಾನ, ಅಧ್ಯಯನ ಕೊಠಡಿ, ವಾಶ್‌ರೂಮ್, ಕಿಟಕಿ ಅಥವಾ ಮುಖ್ಯ ದ್ವಾರದ ಯಾವುದೇ ಗೋಡೆಯ ಮೇಲೆ ತೂಗು ಹಾಕಬಾರದು. ಆದರೆ, ಲಿವಿಂಗ್ ರೂಮ್ ನಲ್ಲಿ ಇಡಬಹುದು. ಇದು ಉತ್ತಮ ಸ್ಥಳವಾಗಿದೆ.

 

ಇದನ್ನು ಓದಿ: Southern Railway Recruitment 2023 : ಪಿಯುಸಿ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ : ಒಟ್ಟು ಹುದ್ದೆ-24, ಅರ್ಜಿ ಸಲ್ಲಿಸಲು ಕೊನೆ ದಿನ-ಮೇ.8