Home latest ಮಂಗಳೂರು :ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ತಂಡಗಳ ನಡುವೆ ಮಾರಾಮಾರಿ!! ಆರೋಪಿಗಳ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೇಯೂ...

ಮಂಗಳೂರು :ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ತಂಡಗಳ ನಡುವೆ ಮಾರಾಮಾರಿ!! ಆರೋಪಿಗಳ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೇಯೂ ಹಲ್ಲೆಗೆ ಯತ್ನ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು:ಹಾಸ್ಟೆಲ್ ನಲ್ಲಿ ವಾಸ್ತವ್ಯವಿದ್ದ ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ತಡರಾತ್ರಿ ಮಾರಮಾರಿ ನಡೆದಿದ್ದು, ಘಟನೆಯ ಸಂಬಂಧ ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೇಯೂ ಕಲ್ಲುತೂರಾಟ ನಡೆಸಿ ಹಲ್ಲೆಗೆ ಮುಂದಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಘಟನೆ ವಿವರ: ಮಂಗಳೂರಿನ ಹೆಸರಾಂತ ಯೇನಪೋಯ ಕಾಲೇಜಿನ ವಿದ್ಯಾರ್ಥಿ ಬಣಗಳ ನಡುವೆ ನಿನ್ನೆ ತಡರಾತ್ರಿ ಹಾಸ್ಟೆಲ್ ನಲ್ಲಿ ಹಲ್ಲೆ ನಡೆದಿದೆ. ವೈಯಕ್ತಿಕ ಕಾರಣ ತಂಡವೊಂದು ವಿದ್ಯಾರ್ಥಿಯೋರ್ವನ ಮೇಲೆ ಹಲ್ಲೆ ನಡೆಸಿದ್ದು, ಇದಾದ ಬಳಿಕ ಪ್ರತೀಕಾರವಾಗಿ ಮತ್ತೊಂದು ತಂಡ ಬಂದು ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ.

ಪ್ರಕರಣದ ಸಂಬಂಧ ಪ್ರಕರಣ ದಾಖಲಾಗಿ ಆರೋಪಿಗಳನ್ನು ಬಂಧಿಸಲು ಹಾಸ್ಟೆಲ್ ಗೆ ತೆರಳಿದ್ದ ಪೊಲೀಸರ ಮೇಲೇಯೂ ಆರೋಪಿಗಳು ಕಲ್ಲು ಎಸೆದು ಹಲ್ಲೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಆರೋಪಿಗಳ ಬಂಧನವಾಗಿದ್ದು, ಬಂಧಿತರನ್ನು ಆದಿತ್ಯ, ಕೆನ್ ಜಾನ್ಸನ್, ಮಹಮ್ಮದ್ ಅಬ್ದುಲ್ ಜಾಹಿದ್, ವಿಮಲ್, ಫಹದ್, ಅಬುತಹರ್, ಮಹಮ್ಮದ್ ನಾಸಿಫ್, ಆದರ್ಶ್ ಎಂದು ಗುರುತಿಸಲಾಗಿದ್ದು, ಒಟ್ಟು 16 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.