Home latest CET ಯಲ್ಲಿ ಜನಿವಾರ ತೆಗೆಸಿದ ವಿದ್ಯಾರ್ಥಿಯ ರ‍್ಯಾಂಕ್ ಎಷ್ಟು ಗೊತ್ತಾ?

CET ಯಲ್ಲಿ ಜನಿವಾರ ತೆಗೆಸಿದ ವಿದ್ಯಾರ್ಥಿಯ ರ‍್ಯಾಂಕ್ ಎಷ್ಟು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

CET: ಶನಿವಾರ ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟವಾಗಿದೆ. ರಾಂಕ್ ಬಂದ ವಿದ್ಯಾರ್ಥಿಗಳ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇದರ ನಡುವೆ ಗಮನ ಸೆಳೆದಿದ್ದು ಬೀದರ್ ನಲ್ಲಿ ಜನಿವಾರ ತೆಗೆಸಿದ ವಿದ್ಯಾರ್ಥಿಯ ಫಲಿತಾಂಶ ಏನಾಗಿದೆ ಎಂಬುದು.

ಹೌದು, ಸಿಇಟಿ ಫಲಿತಾಂಶ ಬೆನ್ನಲ್ಲೇ ಈ ಬಾರಿ ಭಾರೀ ಸದ್ದು ಮಾಡಿದ್ದ ಜನಿವಾರ ತೆಗೆಸಿದ ಬ್ರಾಹ್ಮಣ ವಿದ್ಯಾರ್ಥಿ ಸುಚಿವೃತ ಕುಲಕರ್ಣಿಯ ಫಲಿತಾಂಶ ಏನಾಗಿದೆ ಎಂಬುದು ಹಲವರ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಇದೀಗ ಉತ್ತರ ಕೂಡ ಸಿಕ್ಕಿದೆ.

ಅಂದಹಾಗೆ ಫಲಿತಾಂಶ ಪ್ರಕಟಣೆ ವೇಳೆಸುಚಿವೃತ ಕುಲಕರ್ಣಿ ಫಲಿತಾಂಶವನ್ನೂ ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಈ ವಿದ್ಯಾರ್ಥಿಗೆ 2 ಲಕ್ಷದ 6 ಸಾವಿರ ರಾಂಕ್ ಬಂದಿದೆ. ಆತನ ಪೋಷಕರಿಂದ ಲಿಖಿತ ರೂಪದಲ್ಲಿ ಅಭಿಪ್ರಾಯ ಪಡೆದಿದ್ದು ಅದರ ಅನ್ವಯ ಸರಾಸರಿ ಅಂಕ ಹಂಚಿಕೆ ಮಾಡಿ ರಾಂಕ್ ನೀಡಲಾಗಿದೆ ಎಂದಿದ್ದಾರೆ.

ಇನ್ನು ಈ ಘಟನೆ ನಡೆದಿದ್ದು ಉದ್ದೇಶಪೂರ್ವಕವಾಗಿ ಅಲ್ಲ. ಸಿಬ್ಬಂದಿಯ ಎಡವಟ್ಟಿನಿಂದ ಈ ರೀತಿ ಆಗಿದೆ. ಆ ವಿದ್ಯಾರ್ಥಿಗೆ ನ್ಯಾಯ ಒದಗಿಸಿದ್ದೇವೆ. ಯಾವುದೇ ಅನ್ಯಾಯವಾಗದಂತೆ ಸರಾಸರಿ ಅಂಕಗಳ ಆಧಾರದಲ್ಲಿ ರಾಂಕ್ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Heavy Rain: ಕರ್ನಾಟಕದ 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌…! ರಾಜ್ಯದಾದ್ಯಂತ ಭಾರಿ ಮಳೆಯ ಮುನ್ಸೂಚನೆ..!