Home Business Small Business Idea : ನೀವು ಕೇವಲ 5 ಸಾವಿರ ಹೂಡಿಕೆ ಮಾಡಿ ಹೆಚ್ಚಿನ ಆದಾಯ...

Small Business Idea : ನೀವು ಕೇವಲ 5 ಸಾವಿರ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಗಳಿಸಬಹುದು ! ಅಂಚೆ ಇಲಾಖೆಯಿಂದ ಹೊಸ ಅವಕಾಶ

Hindu neighbor gifts plot of land

Hindu neighbour gifts land to Muslim journalist

ಯಾವುದೇ ಉದ್ಯಮ ಸ್ಥಾಪಿಸಲು ಮೊದಲು ಬಂಡವಾಳ ಬೇಕಾಗುತ್ತದೆ. ಬಂಡವಾಳ ಬೇಕಾದರೆ ಮೊದಲು ಹೂಡಿಕೆ ಮಾಡಬೇಕಾಗುತ್ತದೆ. ಇದೀಗ ಕಡಿಮೆ ಹೂಡಿಕೆಯೊಂದಿಗೆ ಭರ್ಜರಿ ಆದಾಯ ಗಳಿಸಬಲ್ಲ ಕಿರು ಉದ್ಯಮ ಸ್ಥಾಪಿಸಲು ಭಾರತೀಯ ಅಂಚೆ ಇಲಾಖೆ ಒಂದು ಅವಕಾಶ ಒದಗಿಸಿದೆ.

ಹೌದು ಅಂಚೆ ಇಲಾಖೆಯ ಫ್ರಾಂಚೈಸ್​ ಸ್ಕೀಮ್​ ಮೂಲಕ ಕಡಿಮೆ ಹೂಡಿಕೆಯೊಂದಿಗೆ ಉತ್ತಮ ಆದಾಯ, ಲಾಭ ಗಳಿಸಬಹುದಾಗಿದೆ. ಈ ಯೋಜನೆಗೆ ಕನಿಷ್ಠ 5,000 ರೂ. ಹೂಡಿಕೆ ಮಾಡಬೇಕಾಗುತ್ತದೆ.

ಸದ್ಯ ದೇಶದಲ್ಲಿರುವ ಅಂಚೆ ಕಚೇರಿಗಳ ಸಂಖ್ಯೆ ಕಡಿಮೆ ಇದ್ದ ಕಾರಣದಿಂದಾಗಿ ಸರ್ಕಾರ ಫ್ರಾಂಚೈಸ್​ಗಳ ಮೂಲಕ ಅಂಚೆ ಕಚೇರಿಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಸಾರ್ವಜನಿಕರೂ ಫ್ರಾಂಚೈಸ್ ತೆರೆಯಬಹುದಾಗಿದೆ. ಆ ಮೂಲಕ ಆದಾಯ ಗಳಿಸಬಹುದಾಗಿದೆ. ನೀವು ಇದ್ದ ಕಡೆಯೇ ಮನೆಯ ಸಮೀಪವೇ ಫ್ರಾಂಚೈಸ್ ತೆರೆಯುವ ಮೂಲಕ ಊರಿನಲ್ಲೇ ಇದ್ದುಕೊಂಡು ಆದಾಯ ಗಳಿಸಬಹುದಾಗಿದೆ.

ಅಂಚೆ ಇಲಾಖೆ ಎರಡು ರೀತಿಯ ಪ್ರಾಂಚೈಸ್​ಗೆ​​ ಅವಕಾಶ ನೀಡುತ್ತದೆ:

  • ಫ್ರಾಂಚೈಸ್ಡ್ ಔಟ್​ಲೆಟ್ : ಔಟ್​ಲೆಟ್ ಫ್ರಾಂಚೈಸ್​​ ಅಡಿಯಲ್ಲಿ ಅಂಚೆ ಕಚೇರಿ ಇಲ್ಲದ ಕಡೆಗಳಲ್ಲಿ ಕಚೇರಿ ತೆರೆಯಬಹುದು.
  • ಫ್ರಾಂಚೈಸೀ ಆಫ್​ ಪೋಸ್ಟಲ್ ಏಜೆಂಟ್ಸ್: ಪೋಸ್ಟಲ್​ ಏಜೆಂಟ್​ಗಳಾದರೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಸ್ಟೇಷನರಿ ಮತ್ತು ಅಂಚೆ ಸ್ಟಾಂಪ್​ಗಳ ವಿತರಣೆ ಮಾಡಬೇಕಾಗುತ್ತದೆ.

ಈ ಪೈಕಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬಹುದು.

ಅಂಚೆ ಕಚೇರಿ ಫ್ರಾಂಚೈಸ್​ಗೆ ಅರ್ಜಿ ಸಲ್ಲಿಸುವ ಕ್ರಮ :

ಇಂಡಿಯಾ ಪೋಸ್ಟ್ ವೆಬ್​ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನಂತರ ಅರ್ಜಿಯನ್ನು ಡೌನ್​ಲೋಡ್ ಮಾಡಿ ಭರ್ತಿ ಮಾಡಿ ಸಲ್ಲಿಸಬೇಕು. ಷರತ್ತುಗಳು ಮತ್ತು ನಿಬಂಧನೆಗಳನ್ನು ಸರಿಯಾಗಿ ಗಮನಿಸಿಕೊಳ್ಳಿ. ಈ ಯೋಜನೆಯಡಿ ಫ್ರಾಂಚೈಸ್​ ತೆರೆಯಲು ಹೆಚ್ಚಿನ ಅರ್ಹತೆಗಳೇನೂ ಬೇಕಾಗಿಲ್ಲ. ಇಲಾಖೆ ಹೇಳಿರುವ ಷರತ್ತುಗಳು ಮತ್ತು ನಿಬಂಧನೆಗಳನ್ನು ಪೂರೈಸಿದರೆ ಸಾಕು. 18 ವರ್ಷ ಮೇಲ್ಪಟ್ಟವರಾಗಿರಬೇಕು. ಫ್ರಾಂಚೈಸ್​ಗೆ ಅರ್ಜಿ ಸಲ್ಲಿಸುವವರ ಕುಟುಂಬದವರು ಯಾರೂ ಅಂಚೆ ಕಚೇರಿಯ ಉದ್ಯೋಗಿ ಆಗಿರಬಾರದು.

ಅಂಚೆ ಕಚೇರಿ ಫ್ರಾಂಚೈಸ್ ತೆರೆಯಲು 5,000 ರೂ. ಬಧ್ರತಾ ಠೇವಣಿ ಇಡಬೇಕಾಗುತ್ತದೆ. ಉಳಿದಂತೆ ಸ್ಟೇಷನರಿ ವಸ್ತುಗಳ ಖರೀದಿ ಇತ್ಯಾದಿಗಳಿಗೆ ತುಸು ಖರ್ಚಾಗಬಹುದು. ಫ್ರಾಂಚೈಸ್​ಗಾಗಿ ಕನಿಷ್ಠ 200 ಚದರ ಅಡಿಯ ಕಚೇರಿ ಸ್ಥಳ ಬೇಕಾಗುತ್ತದೆ.

ಅಂಚೆ ಫ್ರಾಂಚೈಸ್​ ಮೂಲಕ ನೀಡುವ ಸೇವೆಗಳಿಗೆ ದೊರೆಯುವ ಕಮಿಷನ್ ದರ ವಿವರ ಹೀಗಿದೆ:

  • ಬುಕಿಂಗ್ ರಿಜಿಸ್ಟರ್ಡ್ ಆರ್ಟಿಕಲ್ಸ್ – 3 ರೂ.
  • ಬುಕಿಂಗ್ ಸ್ಪೀಡ್​ ಪೋಸ್ಟ್ ಆರ್ಟಿಕಲ್ಸ್ – 5 ರೂ.
  • ಮನಿ ಆರ್ಡರ್ ಬುಕಿಂಗ್ (100 – 200 ರೂ.ವರೆಗೆ) – 3.50 ರೂ.
  • ಮನಿ ಆರ್ಡರ್ ಬುಕಿಂಗ್ (200 ರೂ. ಮೇಲ್ಪಟ್ಟ) – 5 ರೂ.
  • ತಿಂಗಳಿಗೆ 1,000 ರೂ.ಗಿಂತ ಹೆಚ್ಚು ಮೊತ್ತದ ಸ್ಪೀಡ್ ಮತ್ತು ರಿಜಿಸ್ಟರ್ಡ್ ಪೋಸ್ಟ್ ಮಾಡಿದರೆ – ಶೇ 20ರಷ್ಟು ಹೆಚ್ಚುವರಿ ಕಮಿಷನ್
  • ಚಿಲ್ಲರೆ ಸೇವೆಗಳಿಗೆ – ಗಳಿಸಿದ ಆದಾಯಕ್ಕೆ ಶೇ 40ರ ಕಮಿಷನ್.

ಒಟ್ಟಿನಲ್ಲಿ ಅಂಚೆ ಕಚೇರಿ ಫ್ರಾಂಚೈಸ್​ನಿಂದ ನಿಗದಿತ ಆದಾಯ ಎಂಬುದು ಇಲ್ಲವಾದರೂ ತಾವು ನೀಡಿದ ಸೇವೆಗಳಿಗೆ ಅನುಗುಣವಾಗಿ ಕಮಿಷನ್ ದೊರೆಯುತ್ತದೆ. ಹೆಚ್ಚೆಚ್ಚು ಸೇವೆಗಳನ್ನು ನೀಡಿದಷ್ಟೂ ಕಮಿಷನ್ ಹೆಚ್ಚು ದೊರೆಯುತ್ತದೆ. ಈ ಮೇಲಿನಂತೆ ಕಡಿಮೆ ಹೂಡಿಕೆಯೊಂದಿಗೆ ಸ್ವ ಉದ್ಯಮ ಸ್ಥಾಪಿಸಬಹುದಾಗಿದೆ. ಇದೊಂದು ಭಾರತೀಯ ಅಂಚೆ ಇಲಾಖೆ ನೀಡಿರುವ ಉತ್ತಮ ಅವಕಾಶವಾಗಿದೆ.