Home Jobs NMPT Recruitment 2023: ಮಂಗಳೂರಿನಲ್ಲಿ ಉದ್ಯೋಗ ಹುಡುಕುವವರಿಗೆ ಸುವರ್ಣವಕಾಶ! ಈಗ್ಲೇ ಅಪ್ಲೈ ಮಾಡಿ, ತಿಂಗಳಿಗೆ 80ಸಾವಿರದಿಂದ...

NMPT Recruitment 2023: ಮಂಗಳೂರಿನಲ್ಲಿ ಉದ್ಯೋಗ ಹುಡುಕುವವರಿಗೆ ಸುವರ್ಣವಕಾಶ! ಈಗ್ಲೇ ಅಪ್ಲೈ ಮಾಡಿ, ತಿಂಗಳಿಗೆ 80ಸಾವಿರದಿಂದ 2 ಲಕ್ಷಕ್ಕೂ ಹೆಚ್ಚು ಸಂಬಳ!

NMPT Recruitment 2023

Hindu neighbor gifts plot of land

Hindu neighbour gifts land to Muslim journalist

NMPT Recruitment 2023: ಉದ್ಯೋಗಾಂಕ್ಷಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ. ಡಿಗ್ರಿ ಪಾಸಾಗಿರುವ ಅಭ್ಯರ್ಥಿಗಳಿಗೆ ಮಂಗಳೂರಿನಲ್ಲಿ(Mangalore) ಉದ್ಯೋಗ ಅವಕಾಶಗಳಿದ್ದು, ನವ ಮಂಗಳೂರು ಬಂದರು ಟ್ರಸ್ಟ್(New Mangalore Port Trust )ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ(NMPT Recruitment 2023) ಆಹ್ವಾನ ಮಾಡಿದೆ. ಒಟ್ಟು 1 ಸೀನಿಯರ್ ಡೆಪ್ಯುಟಿ ಟ್ರಾಫಿಕ್ ಮ್ಯಾನೇಜರ್ (Senior Deputy Traffic Manager) ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಲು ಮೇ 9 ಕೊನೆಯ ದಿನವಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ವಿವರ, ವೇತನ, ಮಾನದಂಡ, ಆಯ್ಕೆ ವಿಧಾನ ಮೊದಲಾದ ವಿವರ ತಿಳಿದಿರುವುದು ಅವಶ್ಯಕ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಸಂಸ್ಥೆ – ನವ ಮಂಗಳೂರು ಬಂದರು ಟ್ರಸ್ಟ್
ಹುದ್ದೆ – ಸೀನಿಯರ್ ಡೆಪ್ಯುಟಿ ಟ್ರಾಫಿಕ್ ಮ್ಯಾನೇಜರ್
ಒಟ್ಟು – ಹುದ್ದೆ 1
ವಿದ್ಯಾರ್ಹತೆ- ಪದವಿ
ಉದ್ಯೋಗದ ಸ್ಥಳ – ಮಂಗಳೂರು
ವೇತನ ಮಾಸಿಕ ₹ 80,000- 2,20,000

ಮಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಆಫ್​ಲೈನ್​​(Offline)​ & ಆನ್​ಲೈನ್ (Online) 2 ವಿಧಾನಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 2ಆರಂಭಿಕ ದಿನವಾಗಿದ್ದು, ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಮೇ 9, 2023 ಕೊನೆಯ ದಿನವಾಗಿದೆ. ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 24, 2023 ಕೊನೆಯ ದಿನವಾಗಿದೆ.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.
ವಿಳಾಸ ಹೀಗಿದೆ:
ನವ ಮಂಗಳೂರು ಬಂದರು ಪ್ರಾಧಿಕಾರ
ಪಣಂಬೂರು
ಮಂಗಳೂರು
ಕರ್ನಾಟಕ-575010

ನವ ಮಂಗಳೂರು ಬಂದರು ಟ್ರಸ್ಟ್ ನೇಮಕಾತಿ ಅಧಿಸೂಚನೆಯ ಅನುಸಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಮುಗಿಸಿರಬೇಕು. ನವ ಮಂಗಳೂರು ಬಂದರು ಟ್ರಸ್ಟ್ ನೇಮಕಾತಿ ಅಧಿಸೂಚನೆಯಂತೆ ಅಭ್ಯರ್ಥಿಗಳ ವಯಸ್ಸು ಗರಿಷ್ಠ 42 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ. ಈ ಹುದ್ದೆಗೆ ಮಾಸಿಕ ವೇತನ ₹ 80,000- 2,20,000 ಇರಲಿದೆ. ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಮೇ 9, 2023 ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ ಒಂದು ವೇಳೆ, ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸಿದರೆ ಮೇ 24, 2023 ಕೊನೆಯ ದಿನವಾಗಿದೆ.

 

ಇದನ್ನು ಓದಿ : Dream Interpretation: ಸ್ವಪ್ನದಲ್ಲಿ ಇವುಗಳನ್ನು ಕಂಡರೆ ನಿಮ್ಮ ಅದೃಷ್ಟ ಖುಲಾಯಿಸುವುದು ಪಕ್ಕಾ!