Home Jobs KPSCಯಿಂದ ಅಧಿಸೂಚನೆ! 230 ವಾಣಿಜ್ಯ ತೆರಿಗೆ ಇಲಾಖೆ ಹುದ್ದೆಯ ಅರ್ಜಿ ಸಲ್ಲಿಕೆ ಕುರಿತು ಮಹತ್ವದ ಮಾಹಿತಿ!

KPSCಯಿಂದ ಅಧಿಸೂಚನೆ! 230 ವಾಣಿಜ್ಯ ತೆರಿಗೆ ಇಲಾಖೆ ಹುದ್ದೆಯ ಅರ್ಜಿ ಸಲ್ಲಿಕೆ ಕುರಿತು ಮಹತ್ವದ ಮಾಹಿತಿ!

KPSC CTI Job

Hindu neighbor gifts plot of land

Hindu neighbour gifts land to Muslim journalist

KPSC CTI Job: ವಾಣಿಜ್ಯ ತೆರಿಗೆಗಳ ಇಲಾಖೆಯ ವಾಣಿಜ್ಯ ತೆರಿಗೆ ಪರಿವೀಕ್ಷಕರ ಅರ್ಜಿಗೆ ನೀಡಿದ್ದ ಕೊನೆ ದಿನಾಂಕವನ್ನು ಒಂದು ತಿಂಗಳು ಮುಂದೂಡಿ, ಇದೀಗ ಕೆಪಿಎಸ್‌ಸಿ ಪ್ರಕಟಣೆ (KPSC CTI Job) ಹೊರಡಿಸಿದೆ. ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದ್ದು ಸುವರ್ಣ ಅವಕಾಶ ನೀಡಲಾಗಿದೆ.

ಹೌದು, ಸೆಪ್ಟೆಂಬರ್ 1 ರಂದು ಅಧಿಸೂಚಿಸಿ, ಅರ್ಜಿ ಆಹ್ವಾನಿಸಿದ್ದ ವಾಣಿಜ್ಯ ತೆರಿಗೆ ಪರಿವೀಕ್ಷಕರು (ವಾಣಿಜ್ಯ ತೆರಿಗೆ ಇಲಾಖೆ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಇದೀಗ ಆನ್‌ಲೈನ್‌ ಅರ್ಜಿಗೆ ಒಂದು ತಿಂಗಳು ಅವಧಿ ವಿಸ್ತರಣೆ ಮಾಡಿದ್ದು, ಜೊತೆಗೆ ಪರೀಕ್ಷೆಗೆ ಪರಿಷ್ಕೃತ ದಿನಾಂಕಗಳನ್ನು ಬಿಡುಗಡೆ ಮಾಡಿದೆ. ಸದ್ಯ ಅಭ್ಯರ್ಥಿಗಳು ಹೊಸ ವೇಳಾಪಟ್ಟಿಯಂತೆ ಅರ್ಜಿ ಸಲ್ಲಿಸಬಹುದು. ಹಾಗೂ ಇನ್ನು ಅರ್ಜಿ ಸಲ್ಲಿಸದವರು ಅಗತ್ಯ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಲು ಸುವರ್ಣ ಅವಕಾಶ ನೀಡಲಾಗಿದೆ.

ನೇಮಕಾತಿ ಪ್ರಾಧಿಕಾರ: ಕರ್ನಾಟಕ ಲೋಕಸೇವಾ ಆಯೋಗ
ಉದ್ಯೋಗ ಇಲಾಖೆ : ವಾಣಿಜ್ಯ ತೆರಿಗೆ ಇಲಾಖೆ
ಹುದ್ದೆ ಹೆಸರು : ವಾಣಿಜ್ಯ ತೆರಿಗೆ ಪರಿವೀಕ್ಷಕರು
ಹುದ್ದೆಗಳ ಸಂಖ್ಯೆ : 230 (ಗ್ರೂಪ್‌ ಸಿ, ಉಳಿಕೆ ಮೂಲ ವೃಂದ), 15 (HK).
ವೇತನ ಶ್ರೇಣಿ : ರೂ.33,450-62,600.
ಶೈಕ್ಷಣಿಕ : ಅರ್ಥಶಾಸ್ತ್ರ / ಗಣಿತ ವಿಷಯ ಇರುವ ಪದವಿ ಅಥವಾ ಕಾಮರ್ಸ್‌ ಪದವಿ ಉತ್ತೀರ್ಣರಾಗಿರಬೇಕು.

ಪ್ರಮುಖ ದಿನಾಂಕಗಳು:
ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 01-09-2023
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ 230 (RPC Posts) : 31-10-2023
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ 15 (HK Posts) : 30-10-2023

ಪರೀಕ್ಷಾ ದಿನಾಂಕಗಳು: 230 (RPC Posts):
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ದಿನಾಂಕ : 20-01-2024
ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ : 21-01-2024

ಪರೀಕ್ಷಾ ದಿನಾಂಕಗಳು: 15 (HK Posts):
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ದಿನಾಂಕ : 06-01-2024
ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ : 07-01-2024.

ವಯಸ್ಸಿನ ಅರ್ಹತೆ:
ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಇನ್ನು ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಆಗಿರಬೇಕು. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ. ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ.

ಅಪ್ಲಿಕೇಶನ್‌ ಹಾಕುವ ವಿಧಾನ:
1ನೇ ಹಂತ : ಪ್ರೊಫೈಲ್ ಕ್ರಿಯೇಟ್‌ / ಅಪ್‌ಡೇಟ್‌
2ನೇ ಹಂತ : ಅಪ್ಲಿಕೇಶನ್ ಸಬ್‌ಮಿಷನ್
3ನೇ ಹಂತ : ಅಪ್ಲಿಕೇಶನ್‌ ಶುಲ್ಕ ಪಾವತಿ ಮಾಡುವುದು.

ಆನ್‌ಲೈನ್‌ ಅರ್ಜಿ ಸಲ್ಲಿಕೆ ಕ್ರಮಗಳು :
ಕೆಪಿಎಸ್‌ಸಿ ಅಫೀಶಿಯಲ್ ವೆಬ್‌ಸೈಟ್‌ www.kpsc.kar.nic.in ಗೆ ಭೇಟಿ ನೀಡಿ. ಮೊದಲ ಹಂತದಲ್ಲಿ ತಮ್ಮ ವಿವರ, ಶೈಕ್ಷಣಿಕ ಅರ್ಹತೆ ವಿವರ ಮತ್ತು ಇತರೆ ವಿವರಗಳನ್ನು ಭರ್ತಿ ಮಾಡಿ. ಎರಡನೇ ಹಂತವಾಗಿ ಇಲಾಖೆ ಕೇಳಲಾದ ಇತರೆ ಹೆಚ್ಚಿನ ವಿವರ ನೀಡಿ ಅರ್ಜಿ ಅನ್ನು ಸಬ್‌ಮಿಟ್‌ ಮಾಡಿ. ಮೂರನೇ ಹಂತದಲ್ಲಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕು.

ಅರ್ಜಿ ಶುಲ್ಕ ವಿವರ:
ಸಾಮಾನ್ಯ ಅರ್ಹತಾ ಅಭ್ಯರ್ಥಿಗಳಿಗೆ ರೂ.600.
ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ರೂ.300.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50
ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕದ ಜೊತೆಗೆ ಎಲ್ಲಾ ಅಭ್ಯರ್ಥಿಗಳು ಪ್ರೋಸೆಸಿಂಗ್ ಚಾರ್ಜ್‌ ರೂ.35 ಪಾವತಿಸಬೇಕು.
ಆನ್‌ಲೈನ್‌ ಮೂಲಕ (ಡೆಬಿಟ್‌ ಕಾರ್ಡ್‌, ಕ್ರೆಡಿಟ್ ಕಾರ್ಡ್‌, ನೆಟ್‌ ಬ್ಯಾಂಕಿಂಗ್ ಬಳಸಿ) ಶುಲ್ಕ ಪಾವತಿಸಬಹುದು.

ಇದನ್ನೂ ಓದಿ: ಲೈಂಗಿಕ ಸಮ್ಮತಿಗೆ ವಯಸ್ಸಿನ ಮಿತಿ ಕಡಿತ ?! ಕೇಂದ್ರಕ್ಕೆ ಕಾನೂನು ಆಯೋಗ ಹೇಳಿದ್ದೇನು ?!