Home Jobs IPPB( ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ) ನಿಂದ650 ಹುದ್ದೆಗಳಿಗೆ ಅರ್ಜಿ ಆಹ್ವಾನ| ಅರ್ಜಿಗೆ ಮೇ...

IPPB( ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ) ನಿಂದ
650 ಹುದ್ದೆಗಳಿಗೆ ಅರ್ಜಿ ಆಹ್ವಾನ| ಅರ್ಜಿಗೆ ಮೇ 20 ಕೊನೆ ದಿನ

Hindu neighbor gifts plot of land

Hindu neighbour gifts land to Muslim journalist

ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ಗ್ರಾಮೀಣ ಡಾಕ್ ಸೇವಕ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಹಾಕಬಹುದು.

ಹುದ್ದೆ ಹೆಸರು : ಗ್ರಾಮೀಣ ಡಾಕ್ ಸೇವಕ್
ಹುದ್ದೆ ಹೆಸರು : ಗ್ರಾಮೀಣ ಡಾಕ್ ಸೇವಕ್ ಎಕ್ಸಿಕ್ಯೂಟಿವ್
ಹುದ್ದೆಗಳ ಸಂಖ್ಯೆ : 650
ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ: 42

ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 10-05-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20-05-2022 ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 20-05-2022 ಪ್ರವೇಶ ಪತ್ರ ಬಿಡುಗಡೆ ದಿನಾಂಕ: ಪರೀಕ್ಷೆಗೆ 7,10 ದಿನ ಇರುವಾಗ ಬಿಡುಗಡೆ
ಆನ್‌ಲೈನ್ ಪರೀಕ್ಷೆ ದಿನಾಂಕ : ಜೂನ್ 2022
ಫಲಿತಾಂಶ‌ ಬಿಡುಗಡೆ ದಿನಾಂಕ: ಜೂನ್ 2022

ಮಾಸಿಕ ವೇತನ : ರೂ.30,000. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ ವೇತನ ಏರಿಕೆ, ಇನ್‌ಸೆಂಟಿವ್ ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.

ಎಲ್ಲಾ ರಾಜ್ಯಗಳಲ್ಲಿ ಇರುವ ಅಂಚೆ ಪೇಮೆಂಟ್ ಬ್ಯಾಂಕ್ ಕಚೇರಿಗಳಲ್ಲಿ ಈ ಹುದ್ದೆಗಳನ್ನು ನಿಯೋಜನೆ ಮಾಡಲಾಗುತ್ತದೆ.

ಹುದ್ದೆ ಅವಧಿ: ಮೊದಲಿಗೆ ಎರಡು ವರ್ಷದ ಅವಧಿಗೆ ಈ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ನಂತರ ಕಾರ್ಯದಕ್ಷತೆ ಆಧರಿಸಿ ಹುದ್ದೆ ಅವಧಿ ವಿಸ್ತರಣೆ ಮಾಡಲಾಗುತ್ತದೆ.

ವಯೋಮಿತಿ :  ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ವಿದ್ಯಾರ್ಹತೆ : ಕೇಂದ್ರ ಅಥವಾ ರಾಜ್ಯ ಸರ್ಕಾರದ
ಅಂಗೀಕೃತ ವಿಶ್ವವಿದ್ಯಾಲಯ / ಶಿಕ್ಷಣ ಸಂಸ್ಥೆಗಳಿಂದ ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು.

ಕಾರ್ಯಾನುಭವ : ಕನಿಷ್ಠ 2 ವರ್ಷ ಗ್ರಾಮೀಣ ಡಾಕ್ ಸೇವಕ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿರಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ? ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ ಆಯ್ಕೆ ಮಾಡುತ್ತದೆ. ಆಯಾ ರಾಜ್ಯದ ಅಧಿಕೃತ ಭಾಷೆಯ ಸಾಮರ್ಥ್ಯ ತಿಳಿಯಲು ಭಾಷಾ ಪರೀಕ್ಷೆ ನಡೆಸಲಾಗುತ್ತದೆ.

ಪರೀಕ್ಷೆ : ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ ಪ್ರವೇಶ ಪತ್ರ ನೀಡಿ, ಇಂಟಿಮೇಶನ್ ನೀಡಲಾಗುತ್ತದೆ. ಒಟ್ಟು 120 ಪ್ರಶ್ನೆಗಳನ್ನು ನೀಡಿ, 120 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೋಟಿಫಿಕೇಶನ್ ನೀಡಲಾಗಿದೆ.