Home Jobs DA: ‘ರಾಜ್ಯ ಸರ್ಕಾರಿ’ ನೌಕರರಿಗೆ ತುಟ್ಟಿಭತ್ಯೆ ಶೇ. 58 ಕ್ಕೆ ಏರಿಸಲು ಸರ್ಕಾರದಿಂದ ಆದೇಶ

DA: ‘ರಾಜ್ಯ ಸರ್ಕಾರಿ’ ನೌಕರರಿಗೆ ತುಟ್ಟಿಭತ್ಯೆ ಶೇ. 58 ಕ್ಕೆ ಏರಿಸಲು ಸರ್ಕಾರದಿಂದ ಆದೇಶ

Earn Money

Hindu neighbor gifts plot of land

Hindu neighbour gifts land to Muslim journalist

DA: 2016ರ ಪರಿಷ್ಕೃತ ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳಲ್ಲಿನ ಬೋಧಕ ಮತ್ತು ತತ್ಸಮಾನ ವೃಂದದ ಸಿಬ್ಬಂದಿಗಳಿಗೆ ತುಟ್ಟಿಭತ್ಯೆಯ ದರಗಳನ್ನು ಪರಿಷ್ಕರಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

2016ರ ಪರಿಷ್ಕೃತ ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳಲ್ಲಿನ ಬೋಧಕ ಮತ್ತು ತತ್ಸಮಾನ ವೃಂದದ ಸಿಬ್ಬಂದಿಗಳ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡ 55 ರಿಂದ ಶೇಕಡ 58ಕ್ಕೆ 1ನೇ ಜುಲೈ 2025 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲು ಸರ್ಕಾರವು ನಿರ್ಧರಿಸಿದೆ.

3. ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳು, ಸರ್ಕಾರಿ/ಅನುದಾನಿತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಪೂರ್ಣಕಾಲಿಕ ನೌಕರರಿಗೆ ಈ ಆದೇಶಗಳು ಅನ್ವಯಿಸುತ್ತವೆ.

4. ವೇತನ ಎಂದು ಪರಿಗಣಿಸಲ್ಪಡದ ಯಾವುದೇ ಉಪಲಬ್ಧಗಳನ್ನು ಮೂಲ ವೇತನಕ್ಕೆ ಸೇರಿಸತಕ್ಕದ್ದಲ್ಲ.

5. ಈ ಆದೇಶದ ಮೇರೆಗೆ ಮಂಜೂರಾಗಿರುವ ತುಟ್ಟಿಭತ್ಯೆಯನ್ನು ಮುಂದಿನ ಆದೇಶದವರೆಗೆ ನಗದಾಗಿ ಪಾವತಿ ಮಾಡುವುದು.

6. ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳ ನಿವೃತ್ತ ನೌಕರರಿಗೆ ಈ ಆದೇಶಗಳು ಅನ್ವಯಿಸುವುದಿಲ್ಲ.

7. ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು 2025ರ ಅಕ್ಟೋಬರ್ ಮಾಹೆಯ ವೇತನ ಬಟವಾಡೆಗೂ ಮೊದಲು ಪಾವತಿ ಮಾಡತಕ್ಕದ್ದಲ್ಲ.

8. ತುಟ್ಟಿಭತ್ಯೆಯ ಕಾರಣದಿಂದ ಸಂದಾಯ ಮಾಡಬೇಕಾಗಿರುವ ಐವತ್ತು ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸತಕ್ಕದ್ದು ಮತ್ತು ಐವತ್ತು ಪೈಸೆಗಿಂತ ಕಡಿಮೆ ಇರುವ ಭಿನ್ನಾಂಕಗಳನ್ನು ಕಡೆಗಣಿಸತಕ್ಕದ್ದು.

9. ತುಟ್ಟಿಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸುವುದು ಮತ್ತು ಯಾವುದೇ ಉದ್ದೇಶಕ್ಕಾಗಿ ಇದನ್ನು ವೇತನ ಎಂದು ಪರಿಗಣಿಸಲಾಗುವುದಿಲ್ಲ.