Home Jobs Karnataka Water Resources Department Recruitment 2023: ಜಲಸಂಪನ್ಮೂಲ ಇಲಾಖೆಯಲ್ಲಿ ವಿವಿಧ ಹುದ್ದೆ;ಅರ್ಜಿ ಆಹ್ವಾನ

Karnataka Water Resources Department Recruitment 2023: ಜಲಸಂಪನ್ಮೂಲ ಇಲಾಖೆಯಲ್ಲಿ ವಿವಿಧ ಹುದ್ದೆ;ಅರ್ಜಿ ಆಹ್ವಾನ

Karnataka Water Resources Department Recruitment 2023

Hindu neighbor gifts plot of land

Hindu neighbour gifts land to Muslim journalist

Government job : ಇಂದಿನ ಕಾಲದಲ್ಲಿ ಸರಕಾರಿ ಹುದ್ದೆಗಳನ್ನು (Government job) ಅಲಂಕರಿಸುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಹುದ್ದೆ (Job)ಪಡೆಯಲು ನಾನಾ ರೀತಿಯ ಹರಸಾಹಸ ಪಟ್ಟು ಕಂಗಾಲಾಗಿದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ ಸಿಹಿ ಸುದ್ದಿ. ಹೌದು!! ಉದ್ಯೋಗಾಂಕ್ಷಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ. ನೀವೇನಾದರೂ ಬೆಂಗಳೂರಿನಲ್ಲಿ ನೌಕರಿಗಾಗಿ ಹುಡುಕಾಟ ನಡೆಸುತ್ತಿದ್ದರೆ ನಿಮಗಿದು ಸುವರ್ಣ ಅವಕಾಶ!!

ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯಲ್ಲಿ ( Karnataka Water Resources Department)ಖಾಲಿಯಿರುವ ಒಟ್ಟು 400 ಅಸಿಸ್ಟೆಂಟ್ ಎಂಜಿನಿಯರ್, ಜೂನಿಯರ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸುತ್ತಿದ್ದು, ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬಹುದು.

ಹುದ್ದೆಗಳು
ಜೂನಿಯರ್ ಎಂಜಿನಿಯರ್- 300
ಹಾಯಕ ಎಂಜಿನಿಯರ್- 100
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ(Karnataka Water Resources Department Recruitment 2023)400 ಸಹಾಯಕ ಇಂಜಿನಿಯರ್, ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳು ಸದ್ಯದಲ್ಲೇ ಪೂರ್ಣವಾಗಲಿದೆ. ಇದರ ಜೊತೆಗೆ ನೇಮಕಗೊಂಡ ಎಂಜಿನಿಯರ್‌ಗಳಿಗೆ ಕೆಇಆರ್‌ಎಸ್, ಮೈಸೂರು ಅಥವಾ ಧಾರವಾಡ ವಾಲ್ಮಿ ಸಂಸ್ಥೆಯಲ್ಲಿ ತರಬೇತಿ ಕೂಡ ನೀಡಲಾಗುತ್ತದೆ.

ಸದ್ಯ, ಇಲಾಖೆಯಲ್ಲಿ 1000 ಎಂಜಿನಿಯರ್ ಹುದ್ದೆಗಳು ಖಾಲಿಯಿದ್ದು, ಹಣಕಾಸು ಇಲಾಖೆಯು ಈ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನ ಕೈಗೊಂಡಿದೆ. ಹೀಗಾಗಿ, ಈ ಹುದ್ದೆಗಳ ಅಧಿಸೂಚನೆಯನ್ನು ಅತೀ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುತ್ತದೆ.ಅರ್ಹ ಅಭ್ಯರ್ಥಿಗಳ ವಿದ್ಯಾರ್ಹತೆ ಹಾಗೂ ವಯೋಮಿತಿ ಮಾಹಿತಿ ಸದ್ಯಕ್ಕೆ ಪ್ರಕಟವಾಗಿಲ್ಲ. ಆದರೆ, ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ.

ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಜಲಸಂಪನ್ಮೂಲ ಇಲಾಖೆಯ ಅಧಿಕೃತ ವೆಬ್​ಸೈಟ್​ ಗೆ ಭೇಟಿ ನೀಡಬಹುದು. ಇನ್ನು ಅರ್ಹ ಅಭ್ಯರ್ಥಿಗಳಿಗೆ ಲಿಖಿತ ರೂಪದಲ್ಲಿ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ಇರಲಿದೆ.