Home Jobs ನಿರುದ್ಯೋಗಿ ಯುವಕರಿಗೆ ಆತ್ಮ ನಿರ್ಭರರಾಗಲು ಇಲ್ಲಿದೆ ಉಚಿತ ತರಬೇತಿ ಕಾರ್ಯಕ್ರಮ !!| ಅರ್ಜಿ ಸಲ್ಲಿಸಲು ಜೂನ್...

ನಿರುದ್ಯೋಗಿ ಯುವಕರಿಗೆ ಆತ್ಮ ನಿರ್ಭರರಾಗಲು ಇಲ್ಲಿದೆ ಉಚಿತ ತರಬೇತಿ ಕಾರ್ಯಕ್ರಮ !!| ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನ

Hindu neighbor gifts plot of land

Hindu neighbour gifts land to Muslim journalist

ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ 10 ದಿನಗಳ ಫಾಸ್ಟ್ ಫುಡ್, 13 ದಿನಗಳ ಸಿಸಿ ಟಿವಿ ಕ್ಯಾಮೆರಾ ದುರಸ್ತಿ ಹಾಗೂ 30 ದಿನಗಳ ಕಂಪ್ಯೂಟರ್ ಟ್ಯಾಲಿಯ ಉಚಿತ ತರಬೇತಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ(ರಿ) ವತಿಯಿಂದ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು 18 ರಿಂದ 45 ವರ್ಷದೊಳಗಿರಬೇಕು. ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ಪೋಸ್ಟಲ್ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಈಗ ಮಾಡುತ್ತಿರುವ ಕೆಲಸದ ಇತ್ಯಾದಿ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಜೂನ್ 15 ರೊಳಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ಈ ವಿಳಾಸಕ್ಕೆ ಸಲ್ಲಿಸಬೇಕು.

ತರಬೇತಿಯು ಜೂನ್ ತಿಂಗಳಲ್ಲೆ ಪ್ರಾರಂಭವಾಗುತ್ತಿದ್ದು, ಈ ಸಮಯದಲ್ಲಿ ಊಟ, ವಸತಿ ಉಚಿತವಾಗಿರುತ್ತದೆ. ತರಬೇತಿ ಅವಧಿಯಲ್ಲಿ ಕೌಶಲ್ಯ, ಸಾಫ್ಟ್ ಸ್ಕಿಲ್, ಯೋಗ ತರಬೇತಿ, ಬ್ಯಾಂಕಿಂಗ್, ಸರ್ಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಬಗೆಗಿನ ಮಾಹಿತಿಯನ್ನು ನೀಡಲಾಗವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08284-295307, 220807, 9483485489, 9482188780, 8951819260, 9844796998, 8197022501 ಗೆ ಸಂಪರ್ಕಿಸಬಹುದು ಎಂದು ಆರ್‌ಸೆಟ್ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.