Home Jobs Highcourt: ದತ್ತು ಪುತ್ರನಿಗೂ ‘ಅನುಕಂಪದ ಆಧಾರದ ಮೇಲೆ ಉದ್ಯೋಗ’: ಹೈಕೋರ್ಟ್

Highcourt: ದತ್ತು ಪುತ್ರನಿಗೂ ‘ಅನುಕಂಪದ ಆಧಾರದ ಮೇಲೆ ಉದ್ಯೋಗ’: ಹೈಕೋರ್ಟ್

High Court

Hindu neighbor gifts plot of land

Hindu neighbour gifts land to Muslim journalist

Highcourt: ಸೇವಾವದಿಯಲ್ಲಿ ಸರ್ಕಾರಿ ಮಹಿಳಾ ಉದ್ಯೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ಮಹಿಳೆಯ ದತ್ತು ಪುತ್ರನಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕಲ್ಪಿಸುವ ಕುರಿತ ಮನವಿಯನ್ನು ಎಂಟು ವಾರದಲ್ಲಿ ಪರಿಗಣಿಸಿ ಸೂಕ್ತ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.ಚಿತ್ರದುರ್ಗದ ಜಿಲ್ಲೆಯ ಶ್ರೀರಾಂಪುರ ಹೋಬಳಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೈಮುನ್ನೀಸಾ ಎಂಬಾಕೆ ಉದ್ಯೋಗ ಮಾಡುತ್ತಿದ್ದರು. ಆಕೆಯು ಸೇವೆಯಲ್ಲಿದ್ದಾಗಲೇ ಅರ್ಜಿದಾರರನ್ನು ದತ್ತು ಪಡೆದಿದ್ದರು. ಈ ಕುರಿತು 2022ರ ಸೆಪ್ಟೆಂಬರ್‌ ವಿಲ್‌ ಸಹ ನೋಂದಣಿ ಮಾಡಿಸಿ, ಅರ್ಜಿದಾರ ತನ್ನ ಏಕ ಮಾತ್ರ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದ್ದರು. 2023ರ ಜೂ.3ರಂದು ಮೈಮುನ್ನೀಸಾ ನಿಧನ ಹೊಂದಿದ್ದರು.ಇದರಿಂದ ಚಿತ್ರದುರ್ಗ ಜಿಲ್ಲೆಯ ಆರೋಗ್ಯ ಮತ್ತು ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 2023ರ ಡಿ.2ರಂದು ಮನವಿ ಪತ್ರ ಸಲ್ಲಿಸಿದ್ದ ಅರ್ಜಿದಾರ, ತಾಯಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ತನಗೆ ಅನುಕಂಪದ ಉದ್ಯೋಗ ನೀಡುವಂತೆ ಕೋರಿದ್ದರು. ಆದರೆ, ಮೈಮುನ್ನೀಸಾ ಅವರ ಹಣಕಾಸು ಸೌಲಭ್ಯ ಪಡೆಯಲು ಅರ್ಜಿದಾರ ಅರ್ಹನಾಗಿಲ್ಲ ಎಂದು ತಿಳಿಸಿ ಆರೋಗ್ಯ ಮತ್ತು ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಹಿಂಬರಹ ನೀಡಿದ್ದರು.ಸರ್ಕಾರಿ ಉದ್ಯೋಗಿಯಾಗಿದ್ದ ತನ್ನ ತಾಯಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸುವಂತೆ ಕೋರಿ ತಾನು ಎರಡು ಬಾರಿ ಸಲ್ಲಿಸಿದ್ದ ಮನವಿ ಪತ್ರವನ್ನು ಪರಿಗಣಿಸದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಚಿತ್ರದುರ್ಗದ ಬೆಳಗೂರು ಗ್ರಾಮದ ನಿವಾಸಿ ಯೂನೀಸ್‌ ಎಂಬಾತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರಿದ್ದ ಪೀಠ, ಈ ಸೂಚನೆ ನೀಡಿದೆ. ಅಲ್ಲದೇ, ಮನವಿ ಪತ್ರ ಸಲ್ಲಿಕೆಯಾದರೆ ಅದನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಸರ್ಕಾರಿ ವಕೀಲರು ಸಹ ಸೂಕ್ತ ಕಾಲಾವಕಾಶ ನೀಡಿದರೆ ಅರ್ಜಿದಾರರ ಮನವಿ ಪರಿಗಣಿಸಿ ಆದೇಶ ಹೊರಡಿಸಲಾಗುವುದು ಎಂದು ಕೋರಿದ್ದಾರೆ. ಇದರಿಂದ ಅರ್ಜಿ ಕುರಿತಂತೆ ನ್ಯಾಯಾಲಯ ಯಾವುದೇ ಆದೇಶ ಮಾಡುತ್ತಿಲ್ಲ. ಎಂಟು ವಾರಗಳಲ್ಲಿ ಅರ್ಜಿದಾರನ ಮನವಿ ಪತ್ರ ಪರಿಗಣಿಸಿ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಬೇಕು ಎಂದು ಸೂಚಿಸಿದೆ.