Home Jobs DHFWS Recruitment 2022 | ಒಟ್ಟು ಹುದ್ದೆ-119, ಅರ್ಜಿ ಸಲ್ಲಿಸಲು ಕೊನೆ ದಿನ-ನ.17

DHFWS Recruitment 2022 | ಒಟ್ಟು ಹುದ್ದೆ-119, ಅರ್ಜಿ ಸಲ್ಲಿಸಲು ಕೊನೆ ದಿನ-ನ.17

Hindu neighbor gifts plot of land

Hindu neighbour gifts land to Muslim journalist

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾವೇರಿಯಲ್ಲಿ (DHFWS)ಉದ್ಯೋಗವಕಾಶವಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಂಸ್ಥೆಯ ಹೆಸರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾವೇರಿ (DHFWS)
ಹುದ್ದೆಗಳ ಸಂಖ್ಯೆ: 119
ಉದ್ಯೋಗ ಸ್ಥಳ: ಹಾವೇರಿ – ಕರ್ನಾಟಕ
ಹುದ್ದೆಯ ಹೆಸರು: ದಾದಿಯರು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ
ವೇತನ: : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾವೇರಿ (DHFWS) ನಿಯಮಗಳ ಪ್ರಕಾರ

ಖಾಲಿ ಇರುವ ಹುದ್ದೆಗಳ ಸಂಖ್ಯೆಯ ವಿವರ:

ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ- 17
ದಾದಿಯರು -82
ಆಶಾ ಮೇಲ್ವಿಚಾರಕರು -5
ಆಯುಷ್ ವೈದ್ಯಕೀಯ ಅಧಿಕಾರಿ- 3
ನೇತ್ರ ಸಹಾಯಕ/ಫಾರ್ಮಸಿಸ್ಟ್ (RBSK) -2
ಡಯಟ್ ಕೌನ್ಸಿಲರ್ -1
ಸಿವಿಲ್ ಇಂಜಿನಿಯರ್ -1
ಬಯೋಮೆಡಿಕಲ್ ಇಂಜಿನಿಯರ್- 1
ಪಂಚಕರ್ಮ ಚಿಕಿತ್ಸಕ -1
ಪುರುಷ ಆರೋಗ್ಯ ಕಾರ್ಯಕರ್ತ (NUHM) ಫಾರ್ಮಾಸಿಸ್ಟ್- 1
ದಂತ ನೈರ್ಮಲ್ಯ ತಜ್ಞರು- 1
ದಂತ ತಂತ್ರಜ್ಞ -1
ಆಡಿಯೊಮೆಟ್ರಿಕ್ ಸಹಾಯಕ -1
ಶ್ರವಣ ದೋಷ ಮಕ್ಕಳಿಗೆ ಬೋಧಕರು- 1
ಇಎನ್ಟಿ ತಜ್ಞರು -1

ವಿದ್ಯಾರ್ಹತೆ ವಿವರ:
ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ: ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಿರಬೇಕು.
ದಾದಿಯರು: ಜಿಎನ್‌ ಎಮ್ ತರಬೇತಿ ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಿರಬೇಕು.
ಆಶಾ ಮೇಲ್ವಿಚಾರಕರು: GNM/INM/B.Sc ನರ್ಸಿಂಗ್, ಸಾರ್ವಜನಿಕ ಆರೋಗ್ಯದಲ್ಲಿ ಡಿಪ್ಲೊಮಾ, ಪದವಿ, ಸಮಾಜಕಾರ್ಯ/ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
ಆಯುಷ್ ವೈದ್ಯಕೀಯ ಅಧಿಕಾರಿ: ಬಿಎಎಂಎಸ್, ಎಂಬಿಬಿಎಸ್ ಪೂರ್ಣಗೊಳಿಸಿರಬೇಕು.
ನೇತ್ರ ಸಹಾಯಕ/ಫಾರ್ಮಸಿಸ್ಟ್ (RBSK): ಸರ್ಕಾರಿ ಆಸ್ಪತ್ರೆಯಲ್ಲಿ ನೇತ್ರ ಸಹಾಯಕರಾಗಿ ಡಿಪ್ಲೊಮಾ, B.Pharm, NPCB ತರಬೇತಿಯನ್ನು ಪಡೆದುಕೊಂಡಿರಬೇಕು
ಡಯಟ್ ಕೌನ್ಸಿಲರ್: B.Sc, B.A in Nutrition/Home Science
ಸಿವಿಲ್ ಇಂಜಿನಿಯರ್: ಸಿವಿಲ್/ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ನಲ್ಲಿ ಬಿ.ಇ ಅಥವಾ ಬಿ.ಟೆಕ್ ಪೂರ್ಣಗೊಳಿಸಿರಬೇಕು.
ಬಯೋಮೆಡಿಕಲ್ ಇಂಜಿನಿಯರ್: ಬಯೋಮೆಡಿಕಲ್ ಇಂಜಿನಿಯರ್/ಮೆಡಿಕಲ್ ಎಲೆಕ್ಟ್ರಾನಿಕ್ಸ್/ಬಯೋಮೆಡಿಕಲ್ ಇನ್‌ಸ್ಟ್ರುಮೆಂಟೇಶನ್‌ನಲ್ಲಿ B.E ಅಥವಾ B.Tech, ಬಯೋಮೆಡಿಕಲ್ ಪೂರ್ಣಗೊಳಿಸಿರಬೇಕು.
ಇನ್‌ಸ್ಟ್ರುಮೆಂಟೇಶನ್‌ನಲ್ಲಿ M.Sc ಪೂರ್ಣಗೊಳಿಸಿರಬೇಕು.
ಪಂಚಕರ್ಮ ಚಿಕಿತ್ಸಕ: ಯೋಗ ಮತ್ತು ಹರ್ಬಲ್ ಮೆಡಿಸಿನ್‌ನಲ್ಲಿ B.Sc, ಮಸಾಜಿಸ್ಟ್ ತರಬೇತಿ, ಜನರಲ್ ನರ್ಸಿಂಗ್ ಕೋರ್ಸ್, ಡಿಪ್ಲೊಮಾ, B.Sc ನರ್ಸಿಂಗ್‌ ಮಾಡಿರಬೇಕು
ಪುರುಷ ಆರೋಗ್ಯ ಕಾರ್ಯಕರ್ತ (NUHM) ಫಾರ್ಮಾಸಿಸ್ಟ್: SSLC, ಡಿಪ್ಲೊಮಾ ಇನ್ ಹೆಲ್ತ್ ಇನ್ಸ್‌ಪೆಕ್ಟರ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತರಬೇತಿಯನ್ನು ಪಡೆದಿರಬೇಕು
ಡೆಂಟಲ್ ಹೈಜೀನಿಸ್ಟ್: ಪಿಯುಸಿ, ಡಿಪ್ಲೊಮಾ ಇನ್ ಡೆಂಟಲ್ ಹೈಜೀನಿಸ್ಟ್ ಪೂರ್ಣಗೊಳಿಸಿರಬೇಕು.
ಡೆಂಟಲ್ ಟೆಕ್ನಿಷಿಯನ್: ಪಿಯುಸಿ ಸೈನ್ಸ್, ಡೆಂಟಲ್ ಟೆಕ್ನಿಷಿಯನ್ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
ಆಡಿಯೊಮೆಟ್ರಿಕ್ ಸಹಾಯಕ: ಡಿಪ್ಲೊಮಾ, DHLS ಪೂರ್ಣಗೊಳಿಸಿರಬೇಕು.
ಶ್ರವಣ ದೋಷ ಮಕ್ಕಳಿಗೆ ಬೋಧಕರು: ಡಿಪ್ಲೊಮಾ, ಕಿವುಡ ಮತ್ತು ಶ್ರವಣ ನ್ಯೂನತೆ ಇರುವವರ ತರಬೇತಿಯನ್ನು ಪಡೆದಿರಬೇಕು
ENT ಸ್ಪೆಷಲಿಸ್ಟ್: ಡಿಪ್ಲೊಮಾ, ENT ನಲ್ಲಿ M.S ಮಾಡಿರಬೇಕು

ವಯೋಮಿತಿ ಸಡಿಲಿಕೆ ವಿವರ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಹಾವೇರಿ ನಿಯಮಾವಳಿ ಪ್ರಕಾರ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾವೇರಿಯಲ್ಲಿ (DHFWS) ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ಮಾಹಿತಿ:
ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ರಾಷ್ಟ್ರೀಯ ಆರೋಗ್ಯ ಅಭಿಯಾನ ಬಿ ಬ್ಲಾಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಅಧಿಕಾರಿಗಳ ಕಚೇರಿ ಆವರಣ, ಜಿಲ್ಲಾ ಆಡಳಿತ ಭವನ, ದೇವಗಿರಿ, ಹಾವೇರಿ 581110 ಈ ಅಡ್ರೆಸ್‌ ಗೆ ರಿಜಿಸ್ಟರ್‌ ಪೋಸ್ಟ್‌ ಮೂಲಕ ಅಥವಾ ಸ್ಪೀಡ್‌ ಪೋಸ್ಟ್ ಮೂಲಕ ಅರ್ಜಿಯನ್ನು ನವೆಂಬರ್ 17‌ 2022 ರ ಮೊದಲು ಕಳುಹಿಸಬೇಕು .

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07-11-2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-11-2022