Home Jobs Canara Bank Recruitment 2023: ಕೆನರಾ ಬ್ಯಾಂಕ್​​ನಲ್ಲಿ ಉದ್ಯೋಗವಕಾಶ ; ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ!

Canara Bank Recruitment 2023: ಕೆನರಾ ಬ್ಯಾಂಕ್​​ನಲ್ಲಿ ಉದ್ಯೋಗವಕಾಶ ; ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ!

Canara Bank Recruitment 2023
Image Source: studycafe

Hindu neighbor gifts plot of land

Hindu neighbour gifts land to Muslim journalist

Canara Bank Recruitment 2023: ಇಂದಿನ ದಿನದಲ್ಲಿ ಕೆಲಸ (Job) ಸಿಗೋದು ತುಂಬಾನೆ ಕಷ್ಟ. ವಿದ್ಯಾವಂತರೇ ಕೆಲಸಕ್ಕಾಗಿ ಪರದಾಡುತ್ತಿದ್ದಾರೆ. ಇನ್ನು ಕೆಲಸ ಸಿಕ್ಕಿದರೂ ಬಯಸಿದ ಕೆಲಸ ಸಿಗೋದಿಲ್ಲ. ಬಯಸಿರುವ ಕೆಲಸ ಸಿಗೋದಕ್ಕೆ ಶತಪ್ರಯತ್ನವೇ ಬೇಕು ಎಂದರೆ ತಪ್ಪಾಗಲಾರದು. ಸದ್ಯ ನಿರುದ್ಯೋಗಿಗಳಿಗೆ ಸಿಹಿಸುದ್ದಿ ಇಲ್ಲಿದೆ.

ಹೌದು, ಬ್ಯಾಂಕ್ ಹುದ್ದೆ (bank job) ಬಯಸುವವರಿಗೆ ಸಿಹಿಸುದ್ದಿ ಇಲ್ಲಿದೆ. ಕೆನರಾ ಬ್ಯಾಂಕ್​​ನಲ್ಲಿ (canara bank) ಉದ್ಯೋಗವಕಾಶವಿದೆ. ಇಲ್ಲಿ ಫೈನಾನ್ಸಿಯಲ್ ಲಿಟರಸಿ ಕೌನ್ಸೆಲರ್ ಹುದ್ದೆ ಖಾಲಿ ಇದ್ದು, ಅರ್ಜಿ ಆಹ್ವಾನಿಸಲಾಗಿದೆ (Canara Bank Recruitment 2023). ಆಸಕ್ತ ಅರ್ಹ ಅಭ್ಯರ್ಥಿಗಳು ಆಫ್​ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ವಿವರ:-
ಹುದ್ದೆಯ ಹೆಸರು: ಫೈನಾನ್ಸಿಯಲ್ ಲಿಟರಸಿ ಕೌನ್ಸೆಲರ್
ವಿದ್ಯಾರ್ಹತೆ : ಪದವಿ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 24/05/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 29, 2023

ವಯೋಮಿತಿ: ಗರಿಷ್ಠ 62 ವರ್ಷ
ಉದ್ಯೋಗ ಸ್ಥಳ : ಬೆಂಗಳೂರು

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ.

ವಿಳಾಸ: ವ್ಯವಸ್ಥಾಪಕರು
ಕೆನರಾ ಬ್ಯಾಂಕ್
ಕೃಷಿ ಹಣಕಾಸು ಆದ್ಯತೆ
ವಲಯ ವಿಭಾಗ
#333, ಮಾತೃ ಆರ್ಕೇಡ್
2ನೇ ಮಹಡಿ, ಬಿಬಿ ರಸ್ತೆ
ದೇವನಹಳ್ಳಿ ಪಟ್ಟಣ-562110
ಬೆಂಗಳೂರು ಗ್ರಾಮಾಂತರ ಜಿಲ್ಲೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 22230215, 8749085391

 

ಇದನ್ನು ಓದಿ: CM Ibrahim: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಎಂ ಇಬ್ರಾಹಿಂ ರಾಜೀನಾಮೆ