Home Jobs Canara Bank: ಕೆನರಾಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ; ಸೆ.21 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ, ವಿವರ ಇಲ್ಲಿದೆ

Canara Bank: ಕೆನರಾಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ; ಸೆ.21 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ, ವಿವರ ಇಲ್ಲಿದೆ

Canara Bank

Hindu neighbor gifts plot of land

Hindu neighbour gifts land to Muslim journalist

Canara Bank Apprentice Recruitment 2024: ಕೆನರಾ ಬ್ಯಾಂಕ್‌ನಲ್ಲಿ ಗ್ರಾಜುಯೇಟ್‌ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.

ಸೆ.21 ರಂದು ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಅಕ್ಟೋಬರ್‌ 4,2024 ರಂದು ಕೊನೆಗೊಳ್ಳಲಿದೆ. ಕೆನರಾಬ್ಯಾಂಕ್‌ ಅಪ್ರೆಂಟಿಸ್‌ ಸ್ಟೈಫಂಡ್‌ ಅಪ್ರೆಂಟಿಸ್‌ಗಳು ಮಾಸಿಕ ರೂ.15000 ಸ್ಟೈಫಂಡ್‌ ಅನ್ನು ನೀಡಲಾಗುವುದು. ಮಾಸಿಕ ರೂ.10,500 ಅನ್ನು ಅಪ್ರೆಂಟಿಸ್‌ಗಳ ಖಾತೆಗೆ ಪಾವತಿ ಮಾಡಲಾಗುವುದು. ಹಾಗೂ ಉಳಿದ ರೂ.4500 ಗಳನ್ನು ಸ್ಟೈಫಂಡ್‌ನ ಸರಕಾರಿ ಪಾಲನ್ನು ನೇರವಾಗಿ ಡಿಬಿಟಿ ಮೋಡ್‌ ಮೂಲಕ ಅಪ್ರೆಂಟಿಸ್‌ಗಳ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು.

ಭಾರತ ಸರಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

20 ಮತ್ತು 28 ವರ್ಷಗಳ ನಡುವೆ ವಯೋಮಿತಿ ಉಳ್ಳವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಂದರೆ 1.09.1996-1.09-2004 ನಡುವೆ ಜನಿಸಿರುವವರು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳನ್ನು ಮೆರಿಟ್‌ ಆಧಾರದ ಮೇಲೆ, ಡ್ಯಾಕುಮೆಂಟ್‌ ಪರಿಶೀಲನೆ, ಮತ್ತು ಸ್ಥಳೀಯ ಭಾಷೆಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ ರೂ.500 (ಎಲ್ಲಾ ಅಭ್ಯರ್ಥಿಗಳಿಗೆ), ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ