Home Jobs Mangaluru: ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಪತ್ರಕರ್ತರಿಂದ ಅರ್ಜಿ ಆಹ್ವಾನ

Mangaluru: ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಪತ್ರಕರ್ತರಿಂದ ಅರ್ಜಿ ಆಹ್ವಾನ

Mangaluru

Hindu neighbor gifts plot of land

Hindu neighbour gifts land to Muslim journalist

Mangaluru : ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದ ಮೂಡಿಸುವ ವರದಿಗಾರಿಕೆಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದಿಂದ `ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿ ನೀಡಲಾಲಾಗುತ್ತಿದ್ದು 2023ನೇ ಸಾಲಿನ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: Mangaluru: 2 ದ್ವಿಚಕ್ರ ವಾಹನಗಳ ನಡುವೆ ಅಪಘಾತ ,ಓರ್ವ ಸಾವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರು, ದೃಶ್ಯ ಮಾಧ್ಯಮ ದ ವರದಿಗಾರರು ಅರ್ಜಿ ಸಲ್ಲಿಸಬಹುದು. ಪ್ರಶಸ್ತಿ 5,001 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳ ಗೊಂಡಿದೆ.

ಇದನ್ನೂ ಓದಿ: POK: ಕೆಲವರು ಮಾಡಿದ ತಪ್ಪಿನಿಂದ ಪಿಓಕೆ ಮೇಲೆ ಹಿಡಿತ ಕಳೆದುಕೊಂಡೆವು : ನೆಹರು ವಿರುದ್ಧ ಎಸ್ ಜೈಶಂಕರ್ ಪರೋಕ್ಷ ಟೀಕೆ

ಪ್ರಶಸ್ತಿಗೆ 2023ರ ಜ.1ರಿಂದ ಡಿ.31ರವರೆಗಿನ ವರದಿಗಳನ್ನು ಪರಿಗಣಿಸಲಾಗುವುದು. ಪ್ರಶಸ್ತಿಗಾಗಿ ಅರ್ಜಿಸಲ್ಲಿಸುವವರು ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ನಾಲ್ಕು ಪ್ರತಿಗಳನ್ನು (ಒಂದು ಮೂಲಪ್ರತಿ ಕಡ್ಡಾಯ) ಸಲ್ಲಿಸಬೇಕು.

ದೃಶ್ಯ ಮಾಧ್ಯಮದ ವರದಿಗಾರರು ಸಿ.ಡಿ. ಯೊಂದಿಗೆ ಪ್ರಕಟವಾದ ದಿನಾಂಕದ ಕುರಿತಂತೆ ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು.

ಅರ್ಜಿಗಳನ್ನು ಕಳುಹಿಸಲು 2024 ಮೇ 31 ಕೊನೆಯ ದಿನಾಂಕ.

ಅರ್ಜಿ ಸಲ್ಲಿಸಬೇಕಾದ ವಿಳಾಸ: 

ಪ್ರಧಾನ ಕಾರ್ಯದರ್ಶಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾ ಭವನ, ಲೇಡಿಹಿಲ್ ಉರ್ವ ಮಾರ್ಕೆಟ್ ರಸ್ತೆ, ಮಂಗಳೂರು-6 ಇಲ್ಲಿಗೆ ಕಳುಹಿಸುವಂತೆ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.