Home Jobs BMRCL : ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ, ಮಾಸಿಕ ಸಂಬಳ ರೂ.40 ಸಾವಿರ, ಆಸಕ್ತರು ಈ ಕೂಡಲೇ...

BMRCL : ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ, ಮಾಸಿಕ ಸಂಬಳ ರೂ.40 ಸಾವಿರ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

BMRCL, Namma Metro
Image Source : Studycafe

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (Bangalore Metro Rail Corporation Ltd.)  ತನ್ನ O ಮತ್ತು M ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗೆ (job) ಸೇರಲು ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಈ ಬಗೆಗಿನ ಮಾಹಿತಿ ಇಲ್ಲಿದೆ.

ಹುದ್ದೆಯ ವಿವರ: ನಾಲ್ಕು ಅಗ್ನಿಶಾಮಕ ನಿರೀಕ್ಷಕರು (BMRCL Fire Inspector) ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಹಾಗೇ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ವಯಸ್ಸು ಮೀರಿರಬಾರದು. ಮಾಸಿಕ ಸಂಭಾವನೆ  Rs.40,000 ಆಗಿದ್ದು, ಇದರ ಜತೆಗೆ ಅಭ್ಯರ್ಥಿಗಳಿಗೆ ಮೆಡಿಕಲ್ ಹಾಗೂ ವೈಯಕ್ತಿಕ ಆಕ್ಸಿಡೆಂಟ್ ಸಂಬಂಧಿಸಿದ ವಿಮಾ ಯೋಜನೆ ಸೌಲಭ್ಯ ಕೂಡ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು :
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-03-2023
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18-03-2023

ವಿದ್ಯಾರ್ಹತೆ :
•  ಡಿಪ್ಲೊಮಾ(diploma) ಮೆಕ್ಯಾನಿಕಲ್ ಅಂಡ್ ಫೈಯರ್ ಸೇಫ್ಟಿ ಪೂರ್ಣಗೊಳಿಸಿ, ಕನಿಷ್ಠ 5 ವರ್ಷ ಅನುಭವ ಇರಬೇಕು.
•  ಬಿಇ(B.E) / ಬಿ.ಟೆಕ್ (bTech)(ಫೈಯರ್ ಇಂಜಿನಿಯರಿಂಗ್) ಪೂರ್ಣವಾಗಿರಬೇಕು. ಇದರಲ್ಲಿ ಕನಿಷ್ಠ 2 ವರ್ಷ ಕೆಲಸದ ಅನುಭವ ಇರಬೇಕು.
•   ಬಿಇ ಮೆಕ್ಯಾನಿಕಲ್(B.E mechanical) / ಬಿಇ ಇಲೆಕ್ಟ್ರಿಕಲ್(B.E electrical) ಮಾಡಿದ್ದು, ಜೊತೆಗೆ 1 ವರ್ಷ ಫೈಯರ್ ಸೇಫ್ಟಿ ಸರ್ಟಿಫಿಕೇಟ್‌ ಕೋರ್ಸ್‌ ಅನ್ನು ಸರ್ಕಾರದಿಂದ ಅಂಗೀಕೃತ ಸಂಸ್ಥೆಗಳಿಂದ ಪಡೆದಿರಬೇಕು. ಹಾಗೆಯೇ  2 ವರ್ಷ ಕೆಲಸದ ಅನುಭವ ಇರಬೇಕು.
• ಬಿಎಸ್ಸಿ (ಫೈಯರ್ ಅಂಡ್ ಸೇಫ್ಟಿ) / ಬಿಎಸ್ಸಿ (Bsc) ಮುಗಿಸಿರಬೇಕು. ಇದರಲ್ಲಿ 3 ವರ್ಷ ಕೆಮಿಸ್ಟ್ರಿ(chemistry) ಮತ್ತು 1 ವರ್ಷದ ಫೈಯರ್ ಅಂಡ್ ಸೇಫ್ಟಿ (fire and safety)ಕೋರ್ಸ್‌ ಮಾಡಿರಬೇಕು. ಅಲ್ಲದೆ, 3 ವರ್ಷ ಕಾರ್ಯ ಮಾಡಿರಬೇಕು.

ದೈಹಿಕ ಸಾಮರ್ಥ್ಯ : ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯದ ಬಗ್ಗೆ, ಎತ್ತರ  167 ಸೆಂ.ಮೀ ಇರಬೇಕು. ತೂಕ 51 ಕೆಜಿ, ಎದೆ ಸುತ್ತಳತೆ 81 ಸೆಂ.ಮೀ ನಿಂದ 86 ಸೆಂ.ಮೀ ವರೆಗೆ ಇರಬೇಕು. ಇನ್ನು ಕಣ್ಣಿನ ದೃಷ್ಟಿ 6/6 ಆಗಿರಬೇಕು. ಈ ಎಲ್ಲಾ ಅರ್ಹತೆಗಳಿದ್ದರೆ ಅಂತಹ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಆನ್ಲೈನ್(online) ಅರ್ಜಿ ಸಲ್ಲಿಸುವುದು ಹೇಗೆ?
www.bmrc.co.in ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಿ.

ಆಫ್ಲೈನ್ (offline)ಅರ್ಜಿ ಸಲ್ಲಿಸುವುದು ಹೇಗೆ?
• ಸದರಿ ಅರ್ಜಿ ಪ್ರಿಂಟ್ ತೆಗೆದುಕೊಂಡು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸ್ಪೀಡ್‌ ಪೋಸ್ಟ್‌ ಅಥವಾ ಕೊರಿಯರ್ ಮೂಲಕ ಕೆಳಗಿನ ವಿಳಾಸಕ್ಕೆ ಕಳುಹಿಸಿ.
• ಅರ್ಜಿಯ ಲಕೋಟೆ ಮೇಲೆ ಅರ್ಜಿ ಯಾವ ಹುದ್ದೆಗೆ ಎಂದು ಬರೆದಿರಬೇಕು.

ವಿಳಾಸ : General Manager (HR)
Bangalore Metro Rail Corporation Limited
3rd Floor BMTC Complex
K.H. Road, Shanthinagar
Bengaluru-560 027.