Home Jobs BECIL Staff Nurse Job: BECILನಿಂದ ಸ್ಟಾಫ್‌ ನರ್ಸ್‌ ಹುದ್ದೆಗೆ ಅರ್ಜಿ ಆಹ್ವಾನ!! ವೇತನ ರೂ.30,000...

BECIL Staff Nurse Job: BECILನಿಂದ ಸ್ಟಾಫ್‌ ನರ್ಸ್‌ ಹುದ್ದೆಗೆ ಅರ್ಜಿ ಆಹ್ವಾನ!! ವೇತನ ರೂ.30,000 ; ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

BECIL Staff Nurse Job
Image Source: Nursing job alert

Hindu neighbor gifts plot of land

Hindu neighbour gifts land to Muslim journalist

BECIL Staff Nurse Job : ಇಂದಿನ ದಿನದಲ್ಲಿ ಕೆಲಸ (Job) ಸಿಗೋದು ತುಂಬಾನೆ ಕಷ್ಟ. ಸಿಕ್ಕಿದರೂ ನಾವು ಬಯಸಿದ ಕೆಲಸ ಸಿಗೋದಿಲ್ಲ. ಬಯಸಿರುವ ಕೆಲಸ ಸಿಗೋದಕ್ಕೆ ಶತಪ್ರಯತ್ನವೇ ಬೇಕು ಎಂದರೆ ತಪ್ಪಾಗಲಾರದು. ಸದ್ಯ ನಿರುದ್ಯೋಗಿಗಳಿಗೆ ಸಿಹಿಸುದ್ದಿ ಇಲ್ಲಿದೆ.

ಬ್ರಾಡ್‌ಕಾಸ್ಟ್‌ ಇಂಜಿನಿಯರಿಂಗ್ ಕನ್ಸಲ್‌ಟಂಟ್‌ ಇಂಡಿಯಾ ಲಿಮಿಟೆಡ್‌ (ಬಿಇಸಿಐಎಲ್) ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಮೇ 08, 2023 ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ (BECIL Staff Nurse Job) ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿದೆ.

ಹುದ್ದೆಯ ವಿವರ: 65 ಸ್ಟಾಫ್‌ ನರ್ಸ್‌ (Staff Nurse) ಹುದ್ದೆ ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಈ ಹುದ್ದೆಗೆ ಕೆಲವು ಅರ್ಹತಾ ಮಾನದಂಡ ಇದ್ದು, ಜಿಎನ್‌ಎಂ, ಬಿಎಸ್ಸಿ / ಎಂಎಸ್ಸಿ ನರ್ಸಿಂಗ್ ಪಾಸಾಗಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಮಾಸಿಕ ವೇತನ ರೂ.30,000. ಇರಲಿದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಅಂಕಪಟ್ಟಿ ಮತ್ತು ಕಾರ್ಯಾನುಭವದ ಆಧಾರದ ಮೇಲೆ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ:
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು www.becil.com

https://becilregistration.com
ವೆಬ್ ಸೈಟ್ ಗೆ ಭೇಟಿ ನೀಡಿ. ‘Career’ ಸೆಕ್ಷನ್‌ ಆಯ್ಕೆ ಮಾಡಿ, ಕ್ಲಿಕ್ ಮಾಡಿ. ಸ್ಟಾಫ್‌ ನರ್ಸ್‌ ಹುದ್ದೆಗಳ ಅರ್ಜಿಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ. ಮಾಹಿತಿಗಳನ್ನು ನಮೂದಿಸಿ, ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳೇನು?
• ಆಧಾರ್ ಕಾರ್ಡ್‌
• ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
• ವಿದ್ಯಾರ್ಹತೆ ದಾಖಲೆಗಳು
• ಕಾರ್ಯಾನುಭವದ ದಾಖಲೆ

ಇದನ್ನೂ ಓದಿ: Silk Saree: ಸಿಲ್ಕ್ ಸೀರೆ ವರ್ಷಾನುಗಟ್ಟಲೆ ತನ್ನ ಹೊಳಪು ಕಳೆದುಕೊಳ್ಳದಂತೆ ಮಾಡಲು ಇಲ್ಲಿದೆ ಸುಲಭ ಟ್ರಿಕ್ಸ್!