

ನ್ಯೂಯಾರ್ಕ್: ಇ-ಕಾಮರ್ಸ್ ವಲಯದ ದೈತ್ಯ ಕಂಪನಿ ಅಮೆಜಾನ್ ಇನ್ನು ಮೂರು ತಿಂಗಳಲ್ಲಿ 16 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಎಂದು ಎಚ್ ಆರ್ ಮುಖ್ಯಸ್ಥ ಬೆತ್ ಗ್ಯಾಲೆಟ್ಟಿ ಹೇಳಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ 14 ಸಾವಿರ ಮಂದಿಯನ್ನು ವಜಾಗೊಳಿಸಲಾಗುವುದು ಎಂದು ಘೋಷಿಸಿತ್ತು. ಇದರಿಂದ ಕೆಲಸ ಕಳೆದುಕೊಳ್ಳುವವರ ಒಟ್ಟು ಸಂಖ್ಯೆ 30 ಸಾವಿರ ಮುಟ್ಟಲಿದ್ದು ಅಮೆಜಾನ್ ಇತಿಹಾಸದಲ್ಲೇ ಎಂದೂ ಕೂಡ ಇಷ್ಟು ಮಂದಿಗೆ ಗುಡ್ ಬೈ ಹೇಳಿರಲಿಲ್ಲ.
ಕೋವಿಡ್ ನಂತರದ ಕಾಲಘಟ್ಟವಾದ 2023ರಲ್ಲಿ 27 ಸಾವಿರ ಉದ್ಯೋಗಿಗಳಿಗೆ ಸೋಡಚೀಟಿ ನೀಡಲಾಗಿತ್ತು. ಅಮೆಜಾನ್ ಒಟ್ಟು 15 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.










