Home Jobs ಅಗ್ನಿವೀರ್ ನೇಮಕಾತಿ 2022 ಉದ್ಯೋಗವಕಾಶದ ಮುಖ್ಯ ಪ್ರಕಟಣೆ

ಅಗ್ನಿವೀರ್ ನೇಮಕಾತಿ 2022 ಉದ್ಯೋಗವಕಾಶದ ಮುಖ್ಯ ಪ್ರಕಟಣೆ

Hindu neighbor gifts plot of land

Hindu neighbour gifts land to Muslim journalist

ಅಗ್ನಿವೀರ್ ನೇಮಕಾತಿ 2022ಗಾಗಿ ಭಾರತೀಯ ಸೇನೆಯು ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಇಂದಿನಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

2022-23 ನೇಮಕಾತಿ ವರ್ಷಕ್ಕೆ ಒಂದು ಬಾರಿಯ ಕ್ರಮವಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 21 ರಿಂದ 23 ವರ್ಷಗಳಿಗೆ ಹೆಚ್ಚಿಸಲಾಗಿದೆ. ಅದರಂತೆ ಕನಿಷ್ಠ ವಯಸ್ಸು 17.5 ವರ್ಷಗಳಿಂದ ಮೇಲ್ಪಟ್ಟು ಹಾಗೂ ಗರಿಷ್ಠ ವಯಸ್ಸು 23ಕ್ಕಿಂತ ಕೆಳಪಟ್ಟ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು.

• ನೇಮಕಾತಿ ಸಂಸ್ಥೆ : ಭಾರತೀಯ ವಾಯುಪಡೆ (IAF)

• ಹುದ್ದೆ ಹೆಸರು: ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್ (ಏವಿಯೇಷನ್ ​​/ ಯುದ್ದ ಸಾಮಗ್ರಿ), ಅಗ್ನಿವೀರ್ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮ್ಯಾನ್, ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ಖಾ

• ಲಿ ಹುದ್ದೆಗಳು: 3500

• ಸಂಬಳ/ ವೇತನ ಶ್ರೇಣಿ: ತಿಂಗಳಿಗೆ 30,000ರೂ. ಮತ್ತು  ಭತ್ಯೆಗಳು

• ಉದ್ಯೋಗ ಸ್ಥಳ: ಭಾರತದಲ್ಲಿ ಎಲ್ಲಿಯೂ

• ಜನರಲ್ ಡ್ಯೂಟಿ- ಕನಿಷ್ಠ 45% ಅಂಕಗಳೊಂದಿಗೆ 10ನೇ ತರಗತಿ ಉತ್ತೀರ್ಣ

• ಅಗ್ನಿವೀರ್ ಟೆಕ್ನಿಕಲ್ (ಏವಿಯೇಷನ್ ​​/ ಯುದ್ದ ಸಾಮಗ್ರಿ)- ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಶೇ.50 ಅಂಕಗಳೊಂದಿಗೆ 12ನೇ ತರಗತಿ ತೇರ್ಗಡೆ

• ಕ್ಲರ್ಕ್ / ಸ್ಟೋರ್‌ಕೀಪರ್- ಕನಿಷ್ಠ 60% ಅಂಕಗಳೊಂದಿಗೆ 12ನೇ ತರಗತಿ ಉತ್ತೀರ್ಣ ಮತ್ತು ಇಂಗ್ಲಿಷ್​ನಲ್ಲಿ ಶೇ.50ರಷ್ಟು ಅಂಕ ಪಡೆದಿರಬೇಕು

• ಟ್ರೇಡ್ಸ್‌ಮ್ಯಾನ್- 10 ನೇ ಮತ್ತು 8 ನೇ ಉತ್ತೀರ್ಣ, ಎಲ್ಲಾ ವಿಷಯದಲ್ಲಿ ಕನಿಷ್ಠ ಶೇ.33ರಷ್ಟು ಅಂಕಗಳೊಂದಿಗೆ ಉತ್ತೀರ್ಣ

ರಕ್ಷಣಾ ಸಚಿವಾಲಯದ ಅಧಿಕೃತ ವೆಬ್‌ಸೈಟ್ www.mod.gov.inಗೆ ಭೇಟಿ ಕೊಡಿ