Home Jobs ADA Recruitment 2023: ಮಾಸಿಕ 80,000 ರೂ. ಸಂಬಳ ಕೊಡೋ ಕೆಲಸ ಬೆಂಗಳೂರಿನಲ್ಲಿ, ಡಿಪ್ಲೋಮಾ ಮಾಡಿದವರಿಗೆ...

ADA Recruitment 2023: ಮಾಸಿಕ 80,000 ರೂ. ಸಂಬಳ ಕೊಡೋ ಕೆಲಸ ಬೆಂಗಳೂರಿನಲ್ಲಿ, ಡಿಪ್ಲೋಮಾ ಮಾಡಿದವರಿಗೆ ಅವಕಾಶ!

Hindu neighbor gifts plot of land

Hindu neighbour gifts land to Muslim journalist

ಏರೋನಾಟಿಕಲ್ ಡೆವಲಪ್​ಮೆಂಟ್ ಏಜೆನ್ಸಿ (Aeronautical Development Agency) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಉದ್ಯೊಗದ ಹುಡುಕಾಟದಲ್ಲಿರುವವರಿಗೆ ಇದು ಉತ್ತಮ ಅವಕಾಶವಾಗಿದ್ದು, ಅವಕಾಶ ಸಿಕ್ಕಾಗ ಸದುಪಯೋಗ ಪಡಿಸಿಕೊಳ್ಳುವುದು ಒಳ್ಳೆಯದು. ಅರ್ಜಿ ಸಲ್ಲಿಸಲು ನೀವು ಅರ್ಹರಾಗಿದ್ದರೆ, ಕೂಡಲೇ ಅರ್ಜಿ ಸಲ್ಲಿಸಿ. ಹುದ್ದೆಗೆ ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಹುದ್ದೆಯ ಹೆಚ್ಚಿನ ವಿವರ ಈ ಕೆಳಗಿನಂತಿದೆ.

ಹುದ್ದೆಯ ವಿವರ :
ಎಲೆಕ್ಟ್ರಿಷಿಯನ್- 2
ಡ್ರಾಟ್ಸ್​ಮ್ಯಾನ್- 2

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 15-02-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 8-3-2023

ವಿದ್ಯಾರ್ಹತೆ :
ಎಲೆಕ್ಟ್ರಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸಲು ಎಲೆಕ್ಟ್ರಿಕಲ್ ಎಂಜಿನಿಯರಿಂಗ್​ನಲ್ಲಿ ಡಿಪ್ಲೊಮಾ ಮಾಡಿರಬೇಕು. ಹಾಗೇ
ಡ್ರಾಟ್ಸ್​ಮ್ಯಾನ್ ಹುದ್ದೆಗೆ, ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಡಿಪ್ಲೊಮಾ
ಪೂರ್ಣಗೊಳಿಸಿರಬೇಕು.

ಮಾಸಿಕ ವೇತನ : ₹25,500-81,100‌.

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಉದ್ಯೋಗ ಸ್ಥಳ : ಬೆಂಗಳೂರು