Home Interesting Viral News: ಗಂಡನಿಗಾಗಿ ಹೊಸ ಗರ್ಲ್‌ಫ್ರೆಂಡ್ ಹುಡುಕಿ ಮನೆಗೆ ಕರೆದುಕೊಂಡು ಬಂದ ಪತ್ನಿ ; ಕಾರಣ...

Viral News: ಗಂಡನಿಗಾಗಿ ಹೊಸ ಗರ್ಲ್‌ಫ್ರೆಂಡ್ ಹುಡುಕಿ ಮನೆಗೆ ಕರೆದುಕೊಂಡು ಬಂದ ಪತ್ನಿ ; ಕಾರಣ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಾ!!!

Girlfriend

Hindu neighbor gifts plot of land

Hindu neighbour gifts land to Muslim journalist

Girlfriend: ಸಂಸಾರದಲ್ಲಿ ಜಗಳಗಳು ಸಾಮಾನ್ಯ. ಕೆಲವೊಂದು ಬಾರಿ ಜಗಳ‌ ಮಿತಿ ಮೀರಿ ವಿಚ್ಛೇದನದವರೆಗೂ ತಲುಪಿಬಿಡುತ್ತದೆ. ಇನ್ನು ವಿವಾಹದ (marriage) ಹೊಸದರಲ್ಲಿ ಇರುವ ಪ್ರೀತಿ ಕೆಲವರಿಗೆ ಕಾಲಕ್ರಮೇಣ ಇರೋದಿಲ್ಲ. ಹೆಂಡತಿಯ (wife) ಮೇಲೆ ಆ ಪ್ರೀತಿ ಕಡಿಮೆಯಾಗುತ್ತಾ ಬರುತ್ತದೆ. ಕೊನೆಗೆ ಹೆಂಡತಿಯೇ ಬೇಡವೆನಿಸಿ ಕೆಲವರು ಬೇರೊಂದು ಹುಡುಗಿಯ ಹಿಂದೆ ಹೋಗೋದು ಉಂಟು. ಸದ್ಯ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ತನ್ನ ಗಂಡನನ್ನು (husband) ತನ್ನ ಬಳಿಯೇ ಇರಿಸಿಕೊಳ್ಳಲು ಈಕೆ ಏನು ಮಾಡಿದಳು ಗೊತ್ತಾ? ನೀವು ಶಾಕ್ ಆಗೋದು ಖಂಡಿತ!!!.

ತೆಹ್ಮೀನಾ ಎಂಬಾಕೆಗೆ ಬ್ರ್ಯಾಂಟ್ ಎಂಬಾತನ ಜೊತೆಗೆ ಮದುವೆಯಾಗಿ ಐದು ವರ್ಷಗಳಾಗಿವೆ. ಮದುವೆಯಾದ ಹೊಸದರಲ್ಲಿ ಇಬ್ಬರೂ ಚೆನ್ನಾಗೇ ಇದ್ದರು. ಕಾಲಕ್ರಮೇಣ ಬ್ರ್ಯಾಂಟ್ ಬದಲಾಗುತ್ತಾ ಹೋದ. ಸಂಸಾರದಲ್ಲಿ ಮೊದಲಿನ ಖುಷಿ ಇರಲಿಲ್ಲ. ತಮ್ಮ ಪ್ರೀತಿ ಅಳಿಸಬಾರದು, ತನ್ನ ಗಂಡನನ್ನು ತನ್ನ ಬಳಿಯೇ ಇರಿಸಿಕೊಳ್ಳಲು ತೆಹ್ಮೀನಾ ತನ್ನ ಗಂಡನಿಗಾಗಿ ಹೊಸ ಗೆಳತಿಯನ್ನು (girlfriend) ಹುಡುಕಿ ಮನೆಗೆ ಕರೆದುಕೊಂಡು ಬರಲು ನಿರ್ಧರಿಸಿದಳು.

ತನ್ನ ಗಂಡನ ಜೊತೆ ಇನ್ನೊಬ್ಬ ಹುಡುಗಿ ಇರೋದನ್ನು ಕಂಡರೆ ಮಹಾಯುದ್ಧವೇ ಮಾಡುವ ಹೆಂಡತಿಯರ ಪೈಕಿ, ಈಕೆ ವಿಭಿನ್ನವಾಗಿದ್ದಾಳೆ. ತನ್ನ ಮದುವೆಯನ್ನು ರಕ್ಷಿಸಲು ಈ ರೀತಿ ಮಾಡುತ್ತಿದ್ದಾಳೆ. ಗಂಡನಿಗೋಸ್ಕರ ಈಕೆ ಆನ್‌ಲೈನ್ ನಲ್ಲಿ (online) ಹುಡುಕಿ ಹೊಸ ಗೆಳತಿಯನ್ನು ಪರಿಚಯ ಮಾಡಿಕೊಂಡಿದ್ದಾಳೆ. ನಂತರ ಆಸ್ಟ್ರೇಲಿಯಾದ 29 ವರ್ಷದ ಕೈರಾ ಅವರನ್ನು ತೆಹ್ಮೀನಾ ಅವರು ಭೇಟಿಯಾಗಿದರು. ವಿಶೇಷ ಏನಂದ್ರೆ ಕೈರಾ ನೋಡೋದಿಕ್ಕೆ ಸೇಮ್ ಟು ಸೇಮ್ ತೆಹ್ಮೀನಾರನ್ನು ಹೋಲುತ್ತಿದ್ದರು. ಆಕೆಯ ಉದ್ದನೆಯ ಜಡೆಗಳು, ನಕಲಿ ಕಣ್ಣಿನ ರೆಪ್ಪೆಗಳಿಂದ ಹಿಡಿದು ಟ್ಯಾಟೂ ಮತ್ತು ತೊಟ್ಟಿರುವ ಉಡುಪುಗಳವರೆಗೆ, ಕೈರಾ ಮತ್ತು ತೆಹ್ಮೀನಾ ತುಂಬಾನೇ ಹೋಲುತ್ತಾರೆ ಮತ್ತು ಇದು ಅವರಿಬ್ಬರ ಹೊಂದಾಣಿಕೆಗೆ ಸಹಾಯವಾಯಿತು‌. ಕೈರಾ ಅವರನ್ನು ಮನೆಗೆ ಕರೆದುಕೊಂಡು ಬಂದು ಗಂಡನಿಗೆ ಸರ್ಪ್ರೈಸ್ ನೀಡಿದರು.

ಈ ಬಗ್ಗೆ “ಬ್ರ್ಯಾಂಟ್ ನನ್ನನ್ನು ಇಷ್ಟಪಡುವುದರಿಂದ ನಾನು ನನ್ನಂತೆ ಕಾಣುವ ಮಹಿಳೆಯನ್ನು ಹುಡುಕುತ್ತಿದ್ದೆ” ಎಂದು ತೆಹ್ಮೀನಾ ಹೇಳಿದರು. ಅಲ್ಲದೆ, “ನಾವು ಈಗ ಉತ್ತಮ ಸ್ನೇಹಿತರಾಗಿದ್ದೇವೆ, ಈಗ ನಮ್ಮ ಸಂಬಂಧ ಮೊದಲಿಗಿಂತಲೂ ಗಟ್ಟಿಯಾಗಿದೆ ಮತ್ತು ಜನರು ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ತೆಹ್ಮೀನಾ ಹೇಳಿದರು.

“ನನ್ನ ಜೀವನದುದ್ದಕ್ಕೂ ನನ್ನ ಗಂಡ ನನ್ನ ಜೊತೆಗೇ ಇರಬೇಕು, ಅವನು ಏನು ಬಯಸುತ್ತಾನೋ, ಯಾವುದು ಅವನಿಗೆ ಸಂತೋಷವನ್ನು ನೀಡುತ್ತದೆಯೋ ಅದನ್ನು ನಾನು ಅವನಿಗೆ ನೀಡುತ್ತೇನೆ” ಎಂದು ತೆಹ್ಮೀನಾ ಹೇಳಿದ್ದಾರೆ. ಹಾಗೇ ” ನಾನು ಮೂರನೆಯವರನ್ನು ಹುಡುಕಲು ಪ್ರಾರಂಭಿಸಿದಾಗ ನನಗೆ ಸ್ವಲ್ಪ ಮಟ್ಟಿಗೆ ಅಸುರಕ್ಷತೆಯ ಭಾವನೆ ಬಂದಿದ್ದು ನಿಜ. ಆದರೆ, ನಾನು ಬಹುಪತ್ನಿತ್ವದ ಸಂಬಂಧದಲ್ಲಿರಲು ಬಯಸುವ ಒಂದು ಕಾರಣವೆಂದರೆ ಅದು ಬ್ರ್ಯಾಂಟ್ ಅವರ ಗಮನವನ್ನು ಮನೆಯಲ್ಲಿಯೇ ಉಳಿಸುತ್ತದೆ ಅನ್ನೋದು. ಇದರಿಂದ ಬ್ರ್ಯಾಂಟ್ ಮನೆಯಲ್ಲಿಯೇ ಇರುತ್ತಾರೆ ” ಎಂದು ಅವರು ಹೇಳಿದರು.

ಇದನ್ನೂ ಓದಿ: Vinayakan: ‘ನಾನು 10 ಮಹಿಳೆಯರ ಜತೆ ಮಲಗಿದ್ದೆ, ಪರಿಚಯ ಆದವರನ್ನೆಲ್ಲಾ ಮಂಚಕ್ಕೆ ಕರೀತಿನಿ’ ಎಂದಿದ್ದ ಖ್ಯಾತ ನಟನ​ ದಾಂಪತ್ಯದಲ್ಲಿ ಬಿರುಗಾಳಿ!