Home Interesting ಹುಡುಗರು ಮತ್ತು ಹುಡುಗಿಯರು – ಈ ಇಬ್ರಲ್ಲಿ ಯಾರು ಹೆಚ್ಚು ಮೋಸ ಮಾಡ್ತಾರೆ? ಯುವಕನ ಉತ್ತರ...

ಹುಡುಗರು ಮತ್ತು ಹುಡುಗಿಯರು – ಈ ಇಬ್ರಲ್ಲಿ ಯಾರು ಹೆಚ್ಚು ಮೋಸ ಮಾಡ್ತಾರೆ? ಯುವಕನ ಉತ್ತರ ಭರ್ಜರಿ ವೈರಲ್​

who cheats more

Hindu neighbor gifts plot of land

Hindu neighbour gifts land to Muslim journalist

who cheats more: ಯಾರು ಹೆಚ್ಚು ಅಂತ ಯಾರನ್ನಾದರೂ ಕೇಳಿದರೆ, ನಾನೇ ನಾವೇ ಅಂತ ಉತ್ತರ ಬರೋದು ಸಹಜ. ಅದೇ ಮೋಸದಲ್ಲಿ ಯಾರು ಹೆಚ್ಚು ಅಂತ ಪ್ರಶ್ನೆ ಕೇಳಿದರೆ ? ಸಂಬಂಧದಲ್ಲಿ ಪುರುಷರು-ಮಹಿಳೆಯರು ಇಬ್ಬರಲ್ಲಿ ಯಾರು ಹೆಚ್ಚು ವಂಚನೆ(who cheats more) ಮಾಡುತ್ತಾರೆ? ಇದು ಆಗಾಗ ಅಲ್ಲಿಲ್ಲಿ ಕೇಳಲ್ಪಡುವ ಸಾಮಾನ್ಯ ಪ್ರಶ್ನೆಯಾಗಿದೆ. ಕೆಲವರ ಪ್ರಕಾರ ಮಹಿಳೆಗಿಂತ ಪುರುಷರೇ ಹೆಚ್ಚು ಮಾಡುತ್ತಾರೆ, ಆದರೆ ಇನ್ನು ಕೆಲವರ ಪ್ರಕಾರ ಮಹಿಳೆಯರೇ ಹೆಚ್ಚು ಮೋಸ ಮಾಡುತ್ತಾರೆ. ವಾದ ವಿವಾದ ಅಭಿಪ್ರಾಯ ಭೇದ ಸಾಗಿದೆ. ಸಾಮಾಜಿಕ ಜಾಲತಾಣ ವೇದಿಕೆಯಲ್ಲೂ ಇದು ಬಹು ಚರ್ಚಿತ ವಿಷಯ. ಯೂಟ್ಯೂಬ್​ -ಇನ್​ಸ್ಟಾಗ್ರಾಂ – ರೀಲ್​ಗಳಲ್ಲೂ ಯಾರು ಮೇಲು ಎಂಬ ವಿಚಾರಕ್ಕೆ ನಡೆಯುವ ಕಿತ್ತಾಟವನ್ನು ಕಂಡೇ ಇರ್ತೀರಿ ನೀವೆಲ್ಲ. ಇದೀಗ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪಾಕಿಸ್ತಾನಿ ಯುವತಿಯೊಬ್ಬಳು ಪಾಕ್​ ಬೀದಿಗೆ ಇಳಿದು ಪ್ರಯತ್ನ ಪಟ್ಟಿದ್ದಾಳೆ. ಸಕತ್ ಉತ್ತರಗಳೇ ಆಕೆಗೆ ಲಭ್ಯ ಆಗಿದೆ.

ಇದನ್ನು @the_royal_sisodiya ಹೆಸರಿನ ಇನ್​​​ಸ್ಟಾಗ್ರಾಂ ಪೇಜ್​ನಲ್ಲಿ ವಿಡಿಯೋ ಅಪ್​ಲೋಡ್​ ಆಗಿದ್ದು, ಅದೀಗ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈಗಾಗಲೇ 20 ಮಿಲಿಯನ್​ಗೂ ಹೆಚ್ಚು ಮಂದಿ ಈ ವಿಡಿಯೋ ವೀಕ್ಷಣೆ ಮಾಡಿದ್ದ ಅದು ಜಾಲತಾಣದಲ್ಲಿ ಟ್ರೆಂಡಿಂಗ್ ಸೃಷ್ಟಿಸಿದೆ.

” ಪುರುಷ ಅಥವಾ ಮಹಿಳೆ ಇಬ್ಬರಲ್ಲಿ ಯಾರು ಹೆಚ್ಚು ಮೋಸ ಮಾಡುತ್ತಾರೆ ಹೇಳಿ ?” ಎಂದು ಆ ಪಾಕಿಸ್ಥಾನಿ ಯುವತಿಯು ಯುವಕನಿಗೆ ಪ್ರಶ್ನೆ ಕೇಳುತ್ತಾನೆ. ಈ ಪ್ರಶ್ನೆಗೆ ಸ್ವಲ್ಪವೂ ಯೋಚಿಸಿದೆ ” ಮಹಿಳೆಯರು ” ಎಂದು ಯುವಕ ಹೇಳುತ್ತಾನೆ. ಇದಕ್ಕೆ ಯುವತಿ ಅದು ಹೇಗೆ ಎಂದು ಮರು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಯುವಕ ಉತ್ತರಿಸಿ, ” ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ನಾನು ಪ್ರಪಂಚದಲ್ಲಿ ನಡೆಯುತ್ತಿರುವುದರ ಬಗ್ಗೆ ಹೇಳುತ್ತಿದ್ದೇನೆ. ನಿಮ್ಮಲ್ಲಿ ಐಫೋನ್, ರೋಲೆಕ್ಸ್ ಮತ್ತು ಕಾರು ಇದ್ದರೆ ಯಾವ ಹುಡುಗಿಯೂ ವಿಶ್ವಾಸದ್ರೋಹಿ ಆಗಲ್ಲ. ಒಂದು ವೇಳೆ ಅವ್ಯಾವುವೂ ನಿಮ್ಮ ಬಳಿ ಇಲ್ಲದಿದ್ದರೆ, ಪ್ರತಿ ಹುಡುಗಿಯೂ ಕೂಡಾ ವಿಶ್ವಾಸದ್ರೋಹಿ ಆಗ್ತಾಳೆ ” ಎಂದಿದ್ದಾನೆ ಆ ಯುವಕ .

ಆ ಯುವತಿ ಮತ್ತೆ ಯುವಕನನ್ನು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ವಿವರಣೆ ನೀಡಿದ ಹುಡುಗ, ‘ಈಗಿನ ಟ್ರೆಂಡ್​ ಇರುವುದೇ ಹಾಗೆ. ಸೈಕಲ್​ ಬರುವ ಹುಡುಗನ ಪ್ರೇಯಸಿಯನ್ನು ಸ್ಕೂಟರ್​ನಲ್ಲಿ ಬಂದವನು ಮರಳು ಮಾಡಿಕೊಂಡು ಹೊಗುತ್ತಾನೆ. ಸ್ಕೂಟರ್​ ಬಾಯ್​ ಪ್ರೇಯಸಿಯನ್ನು ಕಾರು ಮಾಲೀಕ ಪಟಾಯಿಸಿ ಬಿಡುತ್ತಾನೆ ‘ ಎಂದು ಈ ಯುವಕ ಉತ್ತರಿಸಿದ್ದಾನೆ. ಈ ಉತ್ತರ ಕೇಳುತ್ತಿದ್ದಂತೆ ಯುವತಿ ಸೇರಿದಂತೆ ಸುತ್ತಲೂ ಇದ್ದ ಜನರು ಮನಸಾರೆ ನಕ್ಕಿದ್ದಾರೆ.

ಮತ್ತೆ ನಗುತ್ತಲೇ ಯುವತಿ ಹುಡುಗನನ್ನು ಕಿಚಾಯಿಸಿ ಕೇಳಿದ್ದಾಳೆ : ನಿಮ್ಮ ಬಳಿ ಏನಿದೆ ಎಂದು ಆಕೆ ಕೇಳಿದ್ದಾಳೆ. ಆಗ ಯುವಕನು ನನ್ನ ಬಳಿ ಹೋಂಡಾ ವಾಹನವಿದೆ. ಆದ್ರೆ ನಾನು ಯಾರನ್ನೂ ಲವ್​ ಮಾಡುತ್ತಿಲ್ಲ ಎಂದಿದ್ದಾನೆ. ಇದೀಗ ಪಾಕಿಸ್ತಾನದ ಯುವಕ ನೀಡಿರುವ​ ಉತ್ತರವು ಸೋಷಿಯಲ್ ವಿಡಿಯೋದಲ್ಲಿ ಭಾರೀ ವೈರಲ್ ಆಗಿದೆ. ಪೋಸ್ಟ್ ಗೆ ಭಾರೀ ಸಂಖ್ಯೆಯ ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ ಓದುಗರು.