Home Interesting ಅವನ್, ಅವಳ್ ಮತ್ತು ಅದ್ಯಾರ್ !? | ತ್ರಿಕೋನ ಪ್ರೇಮ ಕಥೆ- ಆದ್ರೆ 3 ಜನ...

ಅವನ್, ಅವಳ್ ಮತ್ತು ಅದ್ಯಾರ್ !? | ತ್ರಿಕೋನ ಪ್ರೇಮ ಕಥೆ- ಆದ್ರೆ 3 ಜನ ಕೂಡಾ ಫುಲ್ ಹ್ಯಾಪಿ- ಹೇಗೆ ಗೊತ್ತಾ??

Hindu neighbor gifts plot of land

Hindu neighbour gifts land to Muslim journalist

ಪ್ರೀತಿ ಪ್ರೇಮ ಕಥೆಗಳನ್ನೂ ಕೇಳಿದಾಗ ಒಂದು ನವಿರಾದ ಭಾವ ಮನಸ್ಸಿನಲ್ಲಿ ಮೂಡುವುದು ಸಹಜ. ಪ್ರೀತಿ ಅಂದರೆ ಅದರ ಬಗ್ಗೆ ಹೆಚ್ಚು ವಿವರಿಸುವುದು ಬೇಕಾಗಿಲ್ಲ. ನಮ್ಮ ಮನಸ್ಸಿನಲ್ಲಿ ಒಂದು ವ್ಯಕ್ತ ಅಥವಾ ಅವ್ಯಕ್ತ ಜೋಡಿಯ ಚಿತ್ರಣವು ಮೂಡುತ್ತದೆ. ಮನಸ್ಸು ತಿಳಿಯಾಗುತ್ತದೆ. ಹಿಂದಿನದನ್ನು ನೆನೆಸಿಕೊಂಡು ಅಥವಾ ಮುಂದಾಗುವುದನ್ನು ಊಹಿಸಿಕೊಂಡು ಗಂಟು ಕಟ್ಟಿದ ಮುಖದಲ್ಲೂ ಕೂಡಾ ಒಂದು ಹಸನಾದ ಭಾವ.

ಆದರೆ ಇದೀಗ ಇದಕ್ಕೆ ವಿರುದ್ಧವಾಗಿ ಅಚ್ಚರಿಯ ಪ್ರೀತಿಯ ಪ್ರಸಂಗ. ಅಧಿಕ ಪ್ರಸಂಗ ಅಂತ ಕೂಡಾ ಕರೆಯಬಹುದು. ಕಾರಣ, ಈ ಪ್ರೀತಿಯಲ್ಲ ಅವನು ಅವಳು ಮಾತ್ರವಲ್ಲ, ಮತ್ತೊಂದು ಕ್ಯಾರೆಕ್ಟರ್ ಕೂಡಾ ಉಂಟು. ಅವನ್ನ ಬಿಟ್, ಅವಳ್ನ ಬಿಟ್, ಅದ್ಯಾರ್ !!! ಅದು ನಾವು ನೀವು ಈ ಹಿಂದೆ ಕೆಳ್ಪಟ್ಟoತಹಾ ಟ್ರೈಯಾಂಗ್ಲ್ ಲವ್ ಸ್ಟೋರಿ ಅಲ್ಲ. ಮತ್ತೇನಿದು, ಈ ಸ್ಟೋರಿ ಓದಿ !

26 ವರ್ಷದ ಏಂಜೆಲ್ ಬೈಲಿ ಎಂಬ ಹುಡುಗಿ ಮತ್ತು 29 ವರ್ಷದ ಟೈಲರ್ ಹೆಡ್ಜಸ್ ಎಂಬ ಹುಡುಗ, ಜೂನ್ 2018ರಲ್ಲಿ ಪರಸ್ಪರ ಪರಿಚಯವಾಗಿ ನಂತರ ಡೇಟಿಂಗ್ ಪ್ರಾರಂಭಿಸಿದರು. 23 ವರ್ಷದ ಸ್ಯಾಮ್ ಎಂಬಾಕೆ ಮತ್ತು ಏಂಜೆಲ್ ಕಾಲೇಜಿನಲ್ಲಿ ಭೇಟಿಯಾದಾಗ ಒಮ್ಮೆ ಕಿಸ್ ಮಾಡಿದ್ದರು. ಉತ್ಸಾಹದಲ್ಲಿ ಇಬ್ಬರಿಗೂ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲವಂತೆ. ಹೀಗಾಗಿ ಅವರು ಕಿಸ್ ಮಾಡಿದ್ದರಂತೆ. ನಂತರ ಆಕೆ ಟೈಲರ್ ಜೊತೆ ಸಂಬಂಧ ಹೊಂದಿದ್ದಳು.

ಒಬ್ಬರಿಗೊಬ್ಬರ ಭಾವನೆಗಳು ಹೆಚ್ಚಾಗುತ್ತಿದ್ದಂತೆಯೇ ಮೂವರು ಜೊತೆಯಾಗಿರಲು ನಿರ್ಧರಿಸಿದರು. ಏಂಜೆಲ್ ಎಂಬ ಹುಡುಗಿ ಅತ್ತ 2 ಜನರ ಪ್ರೀತಿಯಲ್ಲಿ ಬಿದ್ದಿದ್ದಳು. ಒಬ್ಬಾತ ಹುಡುಗನಾಗಿ ದ್ದರೆ, ಮತ್ತೊಬ್ಬಾಕೆ ಹುಡುಗಿ. ಆಕೆ ನಿಯತ್ತಾಗಿ ತಮ್ಮ ಸಂಬಂಧದ ಬಗ್ಗೆ ಅವರಿಬ್ಬರ ಜತೆ ಕೂಡಾ ಹೇಳಿಕೊಂಡಿದ್ದಾಳೆ. ಎಲ್ಲಾರೂ ಒಪ್ಪಿಕೊಂಡಿದ್ದಾರೆ. ಹೀಗಾಗಿ ತಾವು ಒಟ್ಟಾಗಿಯೇ ಜೀವನ ನಡೆಸೋಣವೆಂದು ತೀರ್ಮಾನಿಸಿ, ತಮ್ಮ ಸಂಬಂಧ ಮುಂದುವರೆಸಲು ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಹಿಂದೆ ಮೂವರು ಪ್ರತ್ಯೇಕವಾಗಿ ಡೇಟಿಂಗ್ ಮಾಡುತ್ತಿದ್ದರು. ಆದರೆ ಈಗ ಮೂವರು ಒಟ್ಟಾಗಿ ತಮ್ಮ ಸಂಬಂಧ ಮುಂದುವರಿಸಲು ಒಮ್ಮತದ ನಿರ್ಧಾರ ಮಾಡಿಕೊಂಡಿದ್ದಾರಂತೆ. ಈಗ ಡೇಟಿಂಗ್ ಜೋರಾಗಿಯೇ ಜತೆಯಾಗಿಯೇ ನಡೆಯುತ್ತಿದೆ.

ಮೂವರು ಸಂಬಂಧ ಹೊಂದಿರುವ ಮಧ್ಯೆಯೇ ಏಂಜೆಲ್ ಮತ್ತು ಟೈಲರ್ ಮೇ ತಿಂಗಳಿನಲ್ಲಿ ಮದುವೆಯಾಗುತ್ತಿದ್ದಾರೆ. ಇದಲ್ಲದೆ ಏಂಜೆಲ್ ಅವರು ಸ್ಯಾಮ್ ಳನ್ನು ಶೀಘ‍್ರವೇ ಮದುವೆಯಾಗಲಿದ್ದಾರಂತೆ. ಟ್ರಿಪಲ್ ಲವ್ ಸ್ಟೋರಿ ಬಗ್ಗೆ ಮಾತನಾಡಿರುವ ಏಂಜೆಲ್, ‘ನಾವು ಮೂವರು ಒಟ್ಟಿಗೆ ತುಂಬಾ ಸಂತೋಷವಾಗಿದ್ದೇವೆ. ಮೊದಲು ನಾವು ಪರಸ್ಪರ ಮುಕ್ತವಾಗಿ ಮಾತನಾಡಲು ಹೆದರುತ್ತಿದ್ದೆವು, ಇಬ್ಬರ ಜೀವನದಲ್ಲಿ 3ನೇ ವ್ಯಕ್ತಿಯನ್ನು ಸೇರಿಸುವುದು ಸರಿಯಲ್ಲ. ಆದರೆ, ನಾನು ಸ್ವಾರ್ಥಿಯಾಗಿದ್ದೆ. ಆ ಇಬ್ಬರನ್ನು ದೂರ ಮಾಡಲು ನನಗೆ ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಮೂವರು ಒಟ್ಟಿಗಿರಲು ನಿರ್ಧರಿಸಿದೆವು. ಈಗ ನಾವು ಮೂವರೂ ಒಟ್ಟಿಗೆ ಡೇಟಿಂಗ್ ಹೋಗುತ್ತೇವೆ’ ಎಂದು ಹೇಳಿದ್ದಾರೆ.

ಸದ್ಯ ಒಬ್ಬ ಪುರುಷನ ಜೊತೆಗೆ ಇಬ್ಬರು ಮಹಿಳೆಯರು ಜೊತೆ ಜೊತೆಯಾಗಿ ಜೀವನ ನಡೆಸಲು ನಿರ್ಧರಿಸಿದ್ದಾರೆ. ಈ ಟ್ರಿಪಲ್ ಜೋಡಿಯ ಲವ್ ಕಹಾನಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಈ ಮೂವರು ಟೈಮ್ ಟೇಬಲ್ ಬರೆಯುವುದರಲ್ಲಿ ಬ್ಯುಸಿ. ಯಾರು ಯಾವಾಗ ಯಾರ ಜೊತೆ ಮಲಗೋದು ಎಂಬ ಪ್ಲಾನ್ ರೂಪಿಸುತ್ತಿದ್ದಾರೆ. ಆನಂತರ ಎಲ್ಲಾರೂ ಒಂದೇ ಮನೆಯಲ್ಲಿ ಪ್ರತ್ಯೇಕ ಬೆಡ್‍ರೂಂನಲ್ಲಿ ಜೀವನ ನಡೆಸಲು ತೀರ್ಮಾನಿಸಿದ್ದಾರೆ. ಹೊರಗೆ ಡೇಟಿಂಗ್ ಹೋದರೆ ಮೂವರು ಒಟ್ಟಿಗೆ ತೆರಳುತ್ತಾರಂತೆ. ಆದರೆ, ಜನರ ಏನು ಅಂದುಕೊಳ್ಳುತ್ತಾರೋ ಅನ್ನೋ ಭಯ ಈ ಟ್ರಿಪಲ್ ಜೋಡಿಗೆ ಇಲ್ಲವಂತೆ. ಬಿಂದಾಸ್..!!