Home Interesting ರೂಪವಿಲ್ಲದ ಅಪರೂಪದ ಜೀವಿ ಪತ್ತೆ| ಜನರಲ್ಲಿ ಹೆಚ್ಚಿದ ಕುತೂಹಲ!

ರೂಪವಿಲ್ಲದ ಅಪರೂಪದ ಜೀವಿ ಪತ್ತೆ| ಜನರಲ್ಲಿ ಹೆಚ್ಚಿದ ಕುತೂಹಲ!

Hindu neighbor gifts plot of land

Hindu neighbour gifts land to Muslim journalist

ಪ್ರಕೃತಿ ಒಂದು ಅಚ್ಚರಿ, ಅದ್ಭುತ, ವಿಸ್ಮಯ. ಅದೆಷ್ಟೋ ಅಪರೂಪದ ಪ್ರಾಣಿಗಳು, ಜೀವಿಗಳು ಇಲ್ಲಿ ಅಡಗಿವೆ. ಅಪರೂಪದ ಜೀವಿಯೊಖದು ಕಾಣಿಸಿಕೊಂಡು ಜನರಿಗೆ ಆಶ್ಚರ್ಯ ಮೂಡಿಸಿದೆ. ತಿಳಿಯಿರಿ ಈ ಜೀವಿಯ ಬಗ್ಗೆ ಕುತೂಹಲಕಾರಿ ಮಾಹಿತಿ

ಥೈಲ್ಯಾಂಡ್ ಜೌಗು ಪ್ರದೇಶದಲ್ಲಿ  ನಿಗೂಢ ‘ಫ್ಯೂರಿ ಗ್ರೀನ್ ಹಾವು ಪತ್ತೆಯಾಗಿದೆ. ಫ್ಯೂರಿ ಗ್ರೀನ್’ ಹಾವು ಥಾಯ್ಲೆಂಡ್‌ನಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯ ಸಮೀಪದಲ್ಲಿ ಕಂಡಿದ್ದಾರೆ. ರೋಮದಿಂದ ಕೂಡಿದ ಈ ಹಸಿರು ಹಾವು ಈಶಾನ್ಯ ಥೈಲ್ಯಾಂಡ್‌ನ ಸಖೋನ್ ನಖೋನ್ ಪ್ರಾಂತ್ಯದಲ್ಲಿ ಕಂಡು ಬಂದಿದೆ. ಸುಮಾರು ಎರಡು ಅಡಿ ಉದ್ದವಿದೆ ಈ ಹಾವು.

ಈ ಜೀವಿಯ ಮೈಮೇಲಿನ ಪದರಗಳು ಕೆರಾಟಿನ್ನಿಂದ ಮಾಡಲ್ಪಟ್ಟಿದೆ ಎಂದು ವನ್ಯಜೀವಿಯ ತಜ್ಞರೊಬ್ಬರು ಹೇಳಿದ್ದಾರೆ. ವೈಲ್ಡ್‌ಲೈಫ್ ಎಆರ್‌ಸಿಯಲ್ಲಿ ಹಾವಿನ ಜಾತಿಯ ಸಂಯೋಜಕರಾಗಿರುವ ಸ್ಯಾಮ್ ಚಾಟ್‌ಫೀಲ್ಡ್, ಈ ಹಾವನ್ನು ಪಪ್ ಮುಖದ ನೀರಿನ ಹಾವು ಎಂದು ಗುರುತಿಸಿದ್ದಾರೆ. ಪಫ್ ಮುಖದ ನೀರಿನ ಹಾವುಗಳು ಸಾಮಾನ್ಯವಾಗಿ ಗಾಢ ಕಂದು ಬಣ್ಣದಿಂದ ಕಪ್ಪು ಬಣ್ಣದಲ್ಲಿರುತ್ತವೆ.

ಈ ಜಾತಿಗಳು ಥೈಲ್ಯಾಂಡ್, ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಕಾಂಬೋಡಿಯಾ, ಸಿಂಗಾಪುರ್ ಮತ್ತು ಮಲೇಷ್ಯಾದಲ್ಲಿ ಕಂಡುಬರುತ್ತವೆ ಮತ್ತು ಕೊಳಗಳು, ಜೌಗು ಪ್ರದೇಶಗಳು ಮತ್ತು ಕಾಡಿನ ತೊರೆಗಳಂತಹ ಸಿಹಿನೀರಿನ ಪ್ರದೇಶದಲ್ಲಿ ವಾಸಿಸುತ್ತವೆ. ಈ ಹಾವು ಸಣ್ಣ ಮೀನು ಅಥವಾ ಕಪ್ಪೆಗಳನ್ನು ತಿನ್ನುತ್ತವೆ. ಪಫ್ ಮುಖದ ನೀರಿನ ಹಾವುಗಳು ಸ್ವಲ್ಪ ವಿಷಕಾರಿ ಮತ್ತು ಪ್ರಾಥಮಿಕವಾಗಿ ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತವೆ ಎನ್ನಲಾಗಿದೆ.