Home Interesting Mobile Update : ತಡರಾತ್ರಿ ಮೊಬೈಲ್ ಸ್ಕ್ರೀನ್ ನಲ್ಲಿ ವಿಚಿತ್ರ ಬದಲಾವಣೆ- ಬಳಕೆದಾರರಲ್ಲಿ ಗೊಂದಲ, ಏನಿದು...

Mobile Update : ತಡರಾತ್ರಿ ಮೊಬೈಲ್ ಸ್ಕ್ರೀನ್ ನಲ್ಲಿ ವಿಚಿತ್ರ ಬದಲಾವಣೆ- ಬಳಕೆದಾರರಲ್ಲಿ ಗೊಂದಲ, ಏನಿದು ಸಡನ್ ಚೇಂಜಸ್?

Hindu neighbor gifts plot of land

Hindu neighbour gifts land to Muslim journalist

 

Mobile Update : ತಡರಾತ್ರಿ ವೇಳೆ ಮೊಬೈಲ್ ಫೋನ್ ಗಳಲ್ಲಿ ಅಥವಾ ಸ್ಕ್ರೀನ್ ಮೇಲೆ ಕೆಲವು ವಿಚಿತ್ರ ಬದಲಾವಣೆಗಳು ಸಂಭವಿಸಿವೆ. ಇದರಿಂದ ಅನೇಕ ಮೊಬೈಲ್ ಬಳಕೆದಾರರು ಗೊಂದಲಕ್ಕೆ ಒಳಗಾಗಿದ್ದಾರೆ.

ಯಸ್, ನೀವು ಕರೆ ಮಾಡಿದಾಗ ದೊಡ್ಡ ಅಕ್ಷರಗಳಲ್ಲಿ ಬರುತ್ತಿದೆಯೇ.? ಮತ್ತು ಕಾಲ್, ವಿಡಿಯೋ ಕಾಲ್, ರೆಕಾರ್ಡ್, ಹೋಲ್ಡ್, ಆಡ್ ಮೈ ಕ್ಯಾಮೆರಾ, ಸ್ಪ್ಯಾಮ್, ಎಲ್ಲಾ ಕರೆಗಳು, ಮಿಸ್ಡ್ ಕಾಲ್‌’ಗಳಂತಹ ಎಲ್ಲಾ ಡೇಟಾವನ್ನ ಪರದೆಯ ಮೇಲೆ ಪಡೆಯುತ್ತಿದ್ದೀರಾ.? ಇದು ಸ್ಕ್ಯಾಮ್ ಎಂದು ಚಿಂತೆಪಡುತ್ತಿದ್ದೀರಾ? ಡೋಂಟ್ ವರಿ. ಇದೆಲ್ಲವೂ ನವೀಕರಣದ ಭಾಗವಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಹೌದು, ಅನೇಕ ಬ್ರ್ಯಾಂಡ್‌’ಗಳು ಆಪರೇಟಿಂಗ್ ಸಿಸ್ಟಮ್‌ಗಳು ಮತ್ತು Google ಸ್ಟಾಕ್ ಆಂಡ್ರಾಯ್ಡ್ ಆಧರಿಸಿ ಹೊಸ ವೈಶಿಷ್ಟ್ಯಗಳನ್ನ ಪರಿಚಯಿಸುತ್ತಿವೆ. ಈ ಬದಲಾವಣೆಗಳು ವಿಶೇಷವಾಗಿ OnePlus, Realme, Moto ಮತ್ತು Oppo ಫೋನ್‌’ಗಳಲ್ಲಿ ಗೋಚರಿಸುತ್ತವೆ. ಈ ಬದಲಾವಣೆಗಳು ಬಳಕೆದಾರರ ಅನುಭವವನ್ನು ಮತ್ತಷ್ಟು ಸರಳಗೊಳಿಸುವ ಮತ್ತು ಕರೆ ಮಾಡುವ ಇಂಟರ್ಫೇಸ್ ಸುಧಾರಿಸುವ ಗುರಿಯನ್ನು ಹೊಂದಿವೆ. ಹಾಗಿದ್ದರೆ ಯಾವ ಮೊಬೈಲ್ ನಲ್ಲಿ ಯಾವ ರೀತಿಯ ಬದಲಾವಣೆಗಳು ಆಗಿದೆ ಎಂದು ನೋಡೋಣ ಬನ್ನಿ.

Realme : Realme UI 3.0 ಮತ್ತು 4.0 ನಂತಹ ಆವೃತ್ತಿಗಳಲ್ಲಿ Google Phone ಅಪ್ಲಿಕೇಶನ್ ಅನ್ನು ಸಂಯೋಜಿಸಿದೆ. ಕೆಲವು ಸರಣಿಗಳು ತಮ್ಮದೇ ಆದ ಡಯಲರ್‌ಗೆ ಸ್ಪ್ಯಾಮ್ ಪತ್ತೆ ವೈಶಿಷ್ಟ್ಯವನ್ನು ಸೇರಿಸಿವೆ.

OnePlus : Google Phone ಅಪ್ಲಿಕೇಶನ್ ಪೂರ್ವನಿಯೋಜಿತವಾಗಿ OxygenOS 12, 13 ರಲ್ಲಿ ಬರುತ್ತದೆ. ಇದು ಸೈಡ್ ಸ್ಲೈಡ್ ಮತ್ತು ಸ್ಪ್ಯಾಮ್ ಫಿಲ್ಟರಿಂಗ್ ವೈಶಿಷ್ಟ್ಯಗಳನ್ನು ಸೇರಿಸಿದೆ.

Moto : Motorola ಸ್ಟಾಕ್ ಆಂಡ್ರಾಯ್ಡ್‌ಗೆ ಹತ್ತಿರವಿರುವ ಇಂಟರ್ಫೇಸ್ ಅನ್ನು ನೀಡುತ್ತದೆ. ಆದ್ದರಿಂದ ಬಳಕೆದಾರರು Google Phone ಅಪ್ಲಿಕೇಶನ್‌’ನಲ್ಲಿ ಹೊಸ ವೈಶಿಷ್ಟ್ಯಗಳನ್ನ ಅನುಭವಿಸುತ್ತಿದ್ದಾರೆ.

Oppo : ColorOS 12, 13 ಸ್ಪ್ಯಾಮ್ ಪತ್ತೆ ಮತ್ತು ಸೈಡ್ ಸ್ಲೈಡ್ ವೈಶಿಷ್ಟ್ಯಗಳನ್ನ Google Phone ಅಪ್ಲಿಕೇಶನ್ ಅಥವಾ ತನ್ನದೇ ಆದ ಡಯಲರ್‌’ನಲ್ಲಿ ಲಭ್ಯವಾಗುವಂತೆ ಮಾಡಿದೆ.