Home Interesting ‘SORRY’ Meaning: ಎಲ್ಲರಿಗೂ Sorry Sorry ಅನ್ನುತ್ತೀರಿ, ಆದ್ರೆ ಈ Sorry ಫುಲ್ ಫಾರ್ಮ್ ಏನು?...

‘SORRY’ Meaning: ಎಲ್ಲರಿಗೂ Sorry Sorry ಅನ್ನುತ್ತೀರಿ, ಆದ್ರೆ ಈ Sorry ಫುಲ್ ಫಾರ್ಮ್ ಏನು? ಹಾಗಂದ್ರೆ ನಿಜವಾದ ಅರ್ಥವೇನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

SORRY Meaning: ಏನಾದರೂ ತಪ್ಪು ಮಾಡಿದಾಗ, ತಿಳಿಯದೆ ಏನಾದರೂ ಆನಾಹುತವಾದಾಗ ಅಷ್ಟೆಲ್ಲಾ ಯಾಕೆ ಸಣ್ಣಪುಟ್ಟ ವಿಷಯಕ್ಕೂ Sorry ಎನ್ನುವವರು ನಾವು. Sorry ಎಂದಾಕ್ಷಣ ನಮ್ಮ ತಪ್ಪು ಸರಿಹೋಯ್ತು ಎಂದು ಭೀಗುವವರು ನಾವು. ಕೆಲವೊಮ್ಮೆ ಆಗಾಗ ಸಾರಿ ಹೇಳುವವರನ್ನು ನಾವು ನೋಡುತ್ತಿರುತ್ತೇವೆ. ಹಾಗಿದ್ರೆ ಈ SORRY ಪದದ ನಿಜವಾದ ಅರ್ಥ ಏನು? ಯಾವಾಗಲೂ, ಎಲ್ಲರಿಗೂ Sorry, Sorry ಅನ್ನೋ ನಿಮಗೆ ಇದರ ಅರ್ಥ ತಿಳಿದಿದೆಯೇ? SORRY ಫುಲ್ ಫಾರ್ಮ್ ಏನು ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

ಈ Sorry ಎನ್ನುವುದು ಎಷ್ಟು ನಮ್ಮ ಬದುಕಲ್ಲಿ ರೂಢಿಯಾಗಿಧೆ, ಅದು ಎಷ್ಟು ಮಹತ್ವ ಪಡೆದುಕೊಂಡಿದೆ ಅಂದರೆ SORRY ಎಂದು ಹೇಳಿದಾಗ, ಅವನು ಸುಲಭವಾಗಿ ಇತರರ ನಂಬಿಕೆ ಮತ್ತು ವಿಶ್ವಾಸವನ್ನು ಗಳಿಸುತ್ತಾನೆ. ಆದರೆ ಹೆಚ್ಚು SORRY ಎಂದು ಹೇಳುವುದು ನಿಮ್ಮ ಮಾನಸಿಕ ದೌರ್ಬಲ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆಯಂತೆ!! ಹಾಗಿದ್ರೆ ಈ SORRY ನಿಜವಾಗಿ ಎಲ್ಲಿಂದ ಬಂತು ಎಂದು ನಮಗೆ ತಿಳಿದಿದೆಯೇ? ಇದೀಗ ಕೊಂಚ ಆದರ ಜಾಡು ಹಿಡಿದು ಹೋಗೋಣ.

sorry’ ಎಂಬ ಪದವು ‘sarig’ ಅಥವಾ ‘sorrow’ ಎಂಬ ಇಂಗ್ಲಿಷ್ ಪದದಿಂದ ಬಂದಿದೆ, ಇದರರ್ಥ ‘ಕೋಪ ಅಥವಾ ಅಸಮಾಧಾನ’. SORRY ಎಂಬುದರ ನಿಜವಾದ ಅರ್ಥವು ದುಃಖವನ್ನು ಅನುಭವಿಸುವುದು, ವಿಷಾದ ವ್ಯಕ್ತಪಡಿಸುವುದು ಅಥವಾ ನಿಮ್ಮ ತಪ್ಪಿಗಾಗಿ ದುಃಖಿಸುವುದು. SORRY ಎಂದು ಹೇಳಿದ ನಂತರ, ನಿಮ್ಮ ತಪ್ಪನ್ನು ಪುನರಾವರ್ತಿಸುವ ಸಾಧ್ಯತೆಗಳನ್ನು ಬಹಳವಾಗಿ ಕಡಿಮೆ ಮಾಡಬೇಕು.

ಅಂದಹಾಗೆ ಈ ರೀತಿಯ ಪದಗಳು ಪ್ರಾಚೀನ ಜರ್ಮನ್ ಭಾಷೆಯ ಸೈರಾಗ್ ಮತ್ತು ಆಧುನಿಕ ಜರ್ಮನ್ ಭಾಷೆಯ ಸೈರಾಗಜ್, ಇಂಡೋ ಯುರೋಪಿಯನ್ ಭಾಷೆಯ ಸಾಯಿವ್ ಮುಂತಾದ ಹಲವು ಭಾಷೆಗಳಲ್ಲಿ ಕಂಡುಬರುತ್ತವೆ. SORRY ಎಂದರೆ Someone Is Really Remembering You – ಯಾರೋ ನಿಜವಾಗಿಯೂ ನಿಮ್ಮನ್ನು ನೆನಪಿಸಿಕೊಳ್ಳುತ್ತಿದ್ದಾರೆ ಅಂತ. ಆದರೆ ಯಾವುದೇ ಭಾಷಾಶಾಸ್ತ್ರಜ್ಞರು ಇದನ್ನು ಖಚಿತಪಡಿಸಿಲ್ಲ. ಅಂತರ್ಜಾಲದಲ್ಲಿ ಅಲ್ಲಲ್ಲಿ ಕಂಡುಬರುವ ಸದ್ಯದ ಮಾಹಿತಿ ಇದು.

ಇನ್ನು ಎಡ್ವಿನ್ ಬ್ಯಾಟಿಸ್ಟೆಲ್ಲಾ, ಸದರ್ನ್ ಒರೆಗಾನ್ ವಿಶ್ವವಿದ್ಯಾನಿಲಯದ ಭಾಷಾಶಾಸ್ತ್ರದ ತಜ್ಞ ಮತ್ತು “ಸಾರಿ ಎಬೌಟ್ ದಟ್: ದಿ ಲಾಂಗ್ವೇಜ್ ಆಫ್ ಪಬ್ಲಿಕ್ ಅಪೋಲಾಜಿ” ಪುಸ್ತಕದ ಲೇಖಕ. ಅವರ ಪ್ರಕಾರ – SORRY ಎಂಬ ಪದವನ್ನು ಜನರು ವಿವಿಧ ರೀತಿಯಲ್ಲಿ ಬಳಸುತ್ತಾರೆ. ಉದಾಹರಣೆಗೆ ನೋಡುವುದಾದರೆ ಯಾರಾದರು ಏನಾದರೂ ಹೇಳುವಾಗ ನಮಗದು ಅರ್ಥವಾಗದೆ ಇದ್ದಲ್ಲಿ Sorry ಎಂದು ಹೇಳುತ್ತೇವೆ. ಅಂದರೆ ಅದು ಮತ್ತೊಮ್ಮೆ ಹೇಳಿ ಎಂದು. ಹೀಗೆ ಈ ರಿತಿಯಲ್ಲಿ ಬೇರೆ ಬೇರೆ ಸಮಯ, ಸಂದರ್ಭದಲ್ಲಿ Sorry ಪದ ಬಳಕೆಯಾಗುತ್ತದೆ. ಕೇವಲ ಪಶ್ಚಾತ್ತಾಪದ ಭಾವನೆ ಅಲ್ಲ.