Home Interesting ಭಾರತದ ಫೈನಾನ್ಸ್ ಮಿನಿಸ್ಟರ್ ನಿರ್ಮಲಾ ಸೀತಾರಾಮನ್ ಅವರ ಭವಿಷ್ಯತ್ತಿನ ಫೋಟೋ ವೈರಲ್ – ಯಾರೀ ತದ್ರೂಪಿ...

ಭಾರತದ ಫೈನಾನ್ಸ್ ಮಿನಿಸ್ಟರ್ ನಿರ್ಮಲಾ ಸೀತಾರಾಮನ್ ಅವರ ಭವಿಷ್ಯತ್ತಿನ ಫೋಟೋ ವೈರಲ್ – ಯಾರೀ ತದ್ರೂಪಿ ?

Hindu neighbor gifts plot of land

Hindu neighbour gifts land to Muslim journalist

ಈ ಪ್ರಪಂಚದಲ್ಲಿ ಒಬ್ಬರ ರೀತಿ ಒಬ್ಬರು ಒಟ್ಟು 7 ಜನರು ಇರುತ್ತಾರಂತೆ. ಹಲವು ಜನರಲ್ಲಿನ ಮಧ್ಯೆ ಇರುವ ಸಾಮ್ಯತೆಯನ್ನು ನೋಡಿದಾಗ ನಮಗೆ ಹಾಗೆ ಪದೇ ಪದೇ ಅನ್ನಿಸಿ ಬಿಡುತ್ತದೆ. ಇವತ್ತು ಇಲ್ಲೊಂದು ಫೋಟೋ ಸೋಷಿಯಲ್ ಗೆಳೆಯರ ಮಧ್ಯೆ ವೈರಲ್ ಆಗಿದೆ. ಈ ಫೋಟೋ ಓರ್ವ ಖ್ಯಾತ ಮಹಿಳೆಯದ್ದು.

ವಿಶೇಷ ಏನು ಅಂದರೆ ಈ ಫೋಟೋ ಈ ಮಹಿಳೆಯ ಈಗಿನ ಫೋಟೋ ಅಲ್ಲ. ಹಾಗಾದ್ರೆ ಆಕೆ ಚಿಕ್ಕ ವಯಸ್ಸಿನಲ್ಲಿ ಇರುವಾಗ ತೆಗೆದುಕೊಂಡ ಚಿತ್ರವೇ ಎಂದು ನಿಮಗೆ ಅನ್ನಿಸಬಹುದು. ನಿಮ್ಮ ಆ ಊಹೆ ಕೂಡ ತಪ್ಪು. ಹೌದು,ಅದು ಆಕೆಯ ಈಗಿನ ಫೋಟೋವೂ ಅಲ್ಲ, ಹಿಂದೆ ತೆಗಿಸಿದ ಚಿತ್ರಪಟ ಕೂಡಾ ಅಲ್ಲ. ಬದಲಿಗೆ ಅದು ಆ ಮಹಿಳೆಯ ಭವಿಷ್ಯತ್ತಿನ ಚಿತ್ರ !

ಆ ಮಹಿಳೆ ಬೇರೆ ಯಾರೂ ಅಲ್ಲ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರದು. ಅತ್ತ ಇವತ್ತು ಭಾರತದ ಬಜೆಟ್ ಮಂಡಿಸುವುದರಲ್ಲಿ ಪಾರ್ಲಿಮೆಂಟಿನಲ್ಲಿ ಬಿಜಿಯಾಗಿದ್ದರೆ ಇತ್ತ ಆಕೆಯ ಫೋಟೋ ಒಂದು ವೈರಲ್ ಆಗುತ್ತಿದೆ.

ಫೈನಾನ್ಸ್ ಮಿನಿಸ್ಟರ್ ನಿರ್ಮಲಾ ಸೀತಾರಾಮನ್ ಅವರನ್ನೇ ಹೋಲುವ ಹಿರಿಯ ಮಹಿಳೆಯ ಫೋಟೋ ಈಗ ವೈರಲ್ ಆಗುತ್ತಿದ್ದು ಈ ಮಹಿಳೆ ಥೇಟು ನಿರ್ಮಲಾ ಮೇಡಂ ಥರವೇ ಕಾಣುತ್ತಿದ್ದಾರೆ. ಅದೇ ಮುಖ, ಆಕೆ ಉಡುವಂತದ್ದೆ ಬೂದು ಕಂದು ಬಣ್ಣದ ಸೀರೆ, ಹಿಂದಕ್ಕೆ ಬಗ್ಗಿಸಿ ಸಿಂಪಲ್ ಆಗಿ ಕಟ್ಟಿದ ಮುಡಿ ಎಲ್ಲವೂ ನಿರ್ಮಲಾ ಸೀತಾರಾಮನ್ ಅವರನ್ನೇ ಹೋಲುತ್ತಿದೆ. ಈ ಮಹಿಳೆ ಯಾರು, ಎಲ್ಲಿಯವರು ಎನ್ನುವುದು ಸದ್ಯ ತಿಳಿದು ಬಂದಿಲ್ಲ. ಆದರೆ ಹಳೆಯ ಜಾಹಿರಾತೊಂದರಲ್ಲಿ ಈಕೆಯ ಪೋಟೋ ಕಂಡುಬಂದಿದೆ.

ನಿಮಗೆ ಯಾರಿಗಾದರೂ ಮ್ಯಾಡಮ್ ಅವರ ಅಂದರೆ ನಿರ್ಮಲಾ ಸೀತಾರಾಮನ್ ಅಥವಾ ಅವರ ಕುಟುಂಬಸ್ಥರ ಪರಿಚಯ ಇದ್ದರೆ, ಈ ಪೋಸ್ಟ್ ಅನ್ನು ವಿತ್ತ ಸಚಿವರಿಗೆ ತಲುಪಿಸಿ. ದೇಶದ ಆರ್ಥಿಕ ಸ್ಥಿತಿಗತಿ ನಿಯಂತ್ರಣ ಮಾಡುವಲ್ಲಿ ರಾತ್ರಿ ಹಗಲು ದುಡಿಯುವ ಹಿರಿಯಕ್ಕನ ಮುಖದಲ್ಲಿ ಸಣ್ಣಗೆ ಮುಗುಳು ಮೂಡಿದರೂ ಅಚ್ಚರಿ ಇಲ್ಲ.