Home Interesting “ಏಪ್ರಿಲ್ 26ಕ್ಕೆ ನನ್ನ ಮದುವೆ, ದಯವಿಟ್ಟು ನನ್ನನ್ನು ಓಡಿಸ್ಕೊಂಡು ಹೋಗು…” | ಹತ್ತು ರೂಪಾಯಿಯ ನೋಟಿನಲ್ಲಿ...

“ಏಪ್ರಿಲ್ 26ಕ್ಕೆ ನನ್ನ ಮದುವೆ, ದಯವಿಟ್ಟು ನನ್ನನ್ನು ಓಡಿಸ್ಕೊಂಡು ಹೋಗು…” | ಹತ್ತು ರೂಪಾಯಿಯ ನೋಟಿನಲ್ಲಿ ಪ್ರಿಯತಮೆ ಬರೆದ ಸಂದೇಶ ವೈರಲ್

Hindu neighbor gifts plot of land

Hindu neighbour gifts land to Muslim journalist

ಪ್ರೀತಿಸಿ ಎಲ್ಲರ ಒಪ್ಪಿಗೆಯನ್ನು ಪಡೆದು ಮದುವೆಯಾಗುವ ಜೋಡಿಗಳು ತುಂಬಾ ಕಡಿಮೆ. ಯಾಕೆಂದರೆ ಹಲವಷ್ಟು ಪ್ರೀತಿಗೆ ಮನೆಯವರ ಒಪ್ಪಿಗೆ ಸಿಗುವುದು ತುಂಬಾ ಕಷ್ಟ. ಅಂತಹ ಪರಿಸ್ಥಿತಿಯಲ್ಲಿ ಜೋಡಿಗೆ ಓಡಿಹೋಗುವುದೊಂದೇ ಮಾರ್ಗವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಿಲುಕಿದ ಜೋಡಿಯೊಂದು ಓಡಿ ಹೋಗಲು ಪ್ರಯತ್ನಿಸಿದ್ದು ಹೇಗೆ ಗೊತ್ತಾ ??

ಹೌದು. “ನನಗೆ ಮದುವೆ ಫಿಕ್ಸ್ ಆಗಿದೆ. ಏಪ್ರಿಲ್ 26ಕ್ಕೆ ನನ್ನ ಮದುವೆ. ದಯವಿಟ್ಟು ನನ್ನನ್ನು ಓಡಿಸಿಕೊಂಡು ಹೋಗು” ಎಂದು ನೋಟಿನ ಮೇಲೆ ಪ್ರಿಯತಮೆ ತನ್ನ ಪ್ರಿಯಕರನಿಗೆ ಸಂದೇಶ ನೀಡಿರುವುದು ಇದೀಗ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.

ಕುಸುಮ್ ಎಂಬ ಯುವತಿ ತನ್ನ ಪ್ರೇಮಿ ವಿಶಾಲ್ ಗೆ ನೋಟಿನ ಮೇಲೆ ಈ ರೀತಿ ಸಂದೇಶ ಬರೆದಿರುವ ನೋಟಿನ ಚಿತ್ರ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಏಪ್ರಿಲ್ 26ಕ್ಕೆ ನನಗೆ ಮದುವೆ ಫಿಕ್ಸ್ ಆಗಿದೆ. ನನ್ನನ್ನು ಓಡಿಸಿಕೊಂಡು ಹೋಗು, ನಾನು ನಿನ್ನ ಪ್ರೀತಿಸುತ್ತೇನೆ. ನಿಮ್ಮಕುಸುಮ್ ಎಂದು ಬರೆದಿದ್ದಾಳೆ.

ಈ ನೋಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೊಂದ ಯುವತಿಗೆ ಸಹಕರಿಸುವಂತೆ ಕೆಲವರು ವ್ಯಂಗ್ಯವಾಡಿದ್ದಾರೆ. ಈ ಪೋಸ್ಟನ್ನು ಒಬ್ಬರಿಗೊಬ್ಬರು ಟ್ಯಾಗ್ ಮಾಡುತ್ತಾ ದಯವಿಟ್ಟು ಆಕೆಯನ್ನು ಓಡಿಸಿಕೊಂಡು ಹೋಗಿ ಎಂದು ತಮಾಷೆ ಮಾಡುತ್ತಾ ಕಾಲು ಎಳೆಯುವ ಪ್ರಸಂಗಗಳು ನಡೆಯುತ್ತಿವೆ.