Home Interesting ವಿಚ್ಚೇದನ ನೀಡಿದ ಪತ್ನಿ ಜೊತೆ ಮರು ವಿವಾಹ : 88ನೇ ಬಾರಿ ಮದುವೆಯಾದ 61ರ ವೃದ್ಧ

ವಿಚ್ಚೇದನ ನೀಡಿದ ಪತ್ನಿ ಜೊತೆ ಮರು ವಿವಾಹ : 88ನೇ ಬಾರಿ ಮದುವೆಯಾದ 61ರ ವೃದ್ಧ

Hindu neighbor gifts plot of land

Hindu neighbour gifts land to Muslim journalist

ಇಂಡೋನೇಷ್ಯಾ: ಇಲ್ಲೊಬ್ಬ ವ್ಯಕ್ತಿ ವಿಚ್ಚೇದನ ನೀಡಿದ ಪತ್ನಿ ಜೊತೆ ಮರು ವಿವಾಹವಾಗಲು ಹೊರಟಿದ್ದಾನೆ.ವಿಶೇಷತೆ ಎಂದರೆ ಇದು ಈತನ 88ನೇ ಮದುವೆ.

ಇಂಡೋನೇಷ್ಯಾದ 61 ವರ್ಷದ ಕಾನ್ ಎಂಬ ರೈತ ಮದುವೆಯಾಗಲು ಹೊರಟಿದ್ದಾನೆ. ಮೊಮ್ಮಕ್ಕಳೊಂದಿಗೆ ಆಟವಾಡುತ್ತಿರಬೇಕಾದ ಕಾನ್ ಎಂಬ ವ್ಯಕ್ತಿ 88ನೇ ಮದುವೆಯಾಗಲು ಹೊರಟಿದ್ದಾರೆ.

ಇದು ಅಚ್ಚರಿಯಾದರು ಸತ್ಯ ! ಇಂಡೋನೇಷ್ಯಾದ ಪಶ್ಚಿಮ ಜಾವಾದಲ್ಲಿ ಮಜಲೆಂಗ್ಕಾದ ಕಾನ್‌ 88ನೇ ಮದುವೆಯಾಗಲು ಸಿದ್ದರಾಗಿದ್ದಾರೆ. ವಿಶೇಷವೆಂದರೆ ಈ ಬಾರಿ ಮದುವೆಯಾಗಲಿರುವುದು ಹೊಸ ಹುಡುಗಿಯನ್ನಲ್ಲ. ಈ ಹಿಂದೆ 86ನೇ ಮದುವೆಯಾಗಿ ವಿಚ್ಚೇದನ ನೀಡಿದ ಅದೇ ಮಾಜಿ ಪತ್ನಿಯನ್ನು ಮತ್ತೊಮ್ಮೆ 88ನೇ ಪತ್ನಿಯಾಗಿ ವರಿಸಲಿದ್ದಾರೆ.

ಈ ಬಗ್ಗೆ ಮಾತನಾಡಿದ ಕಾನ್‌ ನಾನು ಮೊದಲ ಬಾರಿ ಮದುವೆ ಆದದ್ದು ನನ್ನ 14ನೇ ವರ್ಷದಲ್ಲಿ. ನನ್ನ ಹೆಂಡತಿ ನನಗಿಂತ ಎರಡು ವರ್ಷ ದೊಡ್ಡವಳಿದ್ದಳು. ನನ್ನ ವರ್ತನೆ ಅವಳಿಗೆ ಇಷ್ಟವಾಗಲಿಲ್ಲ. ಆ ಕಾರಣದಿಂದ ಅವಳು ನನ್ನಿಂದ ವಿಚ್ಚೇದನ ಪಡೆದುಕೊಂಡಳು” ಎಂದು ತಿಳಿಸಿದ್ದಾರೆ.

ಇದಾದ ಬಳಿಕ ನಾನು ಮಹಿಳೆಯರು ತನ್ನೆಡೆಗೆ ಬರಲು, ಪ್ರೀತಿಸುವಂತೆ ಮಾಡಲು ನಾನು ‘ಆಧ್ಯಾತ್ಮಿಕ’ ಜ್ಞಾನʼವನ್ನು ಪಡೆದುಕೊಂಡೆ. ಯಾವ ಹೆಂಗಸು ನನ್ನನು ನೋಡಿದರೆ ಪ್ರೀತಿಸುವಂತೆ ಆಯಿತು. ಆದರೆ ನಾನು ಮಹಿಳೆಯರಿಗೆ ಕೆಟ್ಟದ್ದನ್ನು ಬಯಸಿಲ್ಲ. ಅವರ ಭಾವನೆಯೊಂದಿಗೆ ಆಡಲು ಇಷ್ಟಪಡಲಿಲ್ಲ. ಅವರೊಂದಿಗೆ ಅನೈತಿಕತೆ ಮಾಡುವ ಬದಲು ಅವರನ್ನು ಮದುವೆಯಾಗುವುದೇ ಉತ್ತಮವೆಂದು ನಾನು ಮದುವೆಯಾಗುತ್ತ ಬಂದೆ ಎನ್ನುತ್ತಾರೆ.

ಮಾಜಿ ಪತ್ನಿಯನ್ನು ವರಿಸುವ ಬಗ್ಗೆ ಮಾತಾನಾಡುವ ಕಾನ್‌ , ನಾವು ದೂರವಾಗಿರಬಹುದು. ಆದರೆ ನಮ್ಮ ನಡುವಿನ ಪ್ರೀತಿ ಇನ್ನು ಗಟ್ಟಿಯಾಗಿಯೇ ಇದೆ ಎನ್ನುತ್ತಾರೆ.