

Lion and Dog: ಇತ್ತೀಚೆಗೆ ಕಾಡಿನ ಪ್ರಾಣಿಗಳು ನಾಡಿಗೆ ಬರುವ ಪ್ರಕರಣ ಹೆಚ್ಚಾಗಿದೆ. ಹೌದು, ಕಳೆದ ಕೆಲವು ದಿನಗಳ ಹಿಂದೆ ಆನೆ ನಾಡಿಗೆ ಬಂದಿದ್ದು, ನಂತರ ಅದನ್ನು ಸುರಕ್ಷಿತವಾಗಿ ಹಿಡಿಯಲಾಯಿತು. ಇದೀಗ ಕಾಡಿನ ರಾಜನೆಂದೇ ಕರೆಯಲ್ಪಡುವ ಸಿಂಹ (Lion and Dog) ನಾಡಿಗೆ ಬಂದಿದ್ದಾನೆ.
ಸಿಂಹ ಕಂಡರೆ ಯಾರಿಗೆ ಭಯವಿಲ್ಲ ಹೇಳಿ. ಸಿಂಹ, ಹುಲಿ (tiger) ನಾಡಿಗೆ ಬಂದರೆ ಜನರು ಮಾರುದ್ಧ ದೂರ ಓಡುತ್ತಾರೆ. ಅಲ್ಲದೆ, ಹುಲಿ ನಾಡಿಗೆ ಬಂದು ಹಲವು ಜನರನ್ನು ಬಲಿ ತೆಗೆದುಕೊಂಡಿರುವ ಪ್ರಕರಣ ಬೇಕಾದಷ್ಟಿವೆ. ಆದರೆ, ಇದೀಗ ಕಾಡಿನಲ್ಲಿ ರಾಜಾರೋಷವಾಗಿ, ಯಾರ ಭಯವಿಲ್ಲದೆ ತಿರುಗುವ ಸಿಂಹ ನಾಡಿಗೆ ಬಂದಿದೆ. ಮುಂದೇನಾಯ್ತು ಗೊತ್ತಾ?
ತಡರಾತ್ರಿ ಕಾಡಿನಿಂದ ಊರಿಗೆ ಬಂದ ಸಿಂಹ, ಊರಿನ ಬೀದಿಯಲ್ಲಿ ರಾಜಾರೋಷವಾಗಿ ಓಡಾಡುತ್ತಿತ್ತು. ಇದನ್ನು ಕಂಡ ನಾಯಿಗಳ (dog) ಗುಂಪು ಸಿಂಹವನ್ನು (Lion and Dog) ಅಟ್ಟಾಡಿಸಿ ಓಡಿಸಿದೆ. ಸದ್ಯ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಿಂಹವು ತಡರಾತ್ರಿ ಗುಜರಾತ್ ನ (Gujarati) ಗಿರ್ ಸೋಮನಾಥ್ ಗ್ರಾಮಕ್ಕೆ ಬಂದಿದ್ದು, ಅದು ರಸ್ತೆಯಲ್ಲಿ ತಿರುಗಾಡುತ್ತಿತ್ತು. ಈ ವೇಳೆ ಒಂದೆರಡು ನಾಯಿಗಳು ಸಿಂಹದ ಹಿಂದೆಯೇ ಹೋಗಲಾಂಭಿಸಿದವು. ಜೋರಾಗಿ ಬೊಗಳಲಾರಂಭಿಸಿದವು. ಈ ವೇಳೆಗೆ ಉಳಿದ ನಾಯಿಗಳು ಸ್ಥಳಕ್ಕೆ ಬಂದವು. ಅಲ್ಲಿಗೆ ದೊಡ್ಡ ನಾಯಿಗಳು ಗುಂಪೇ ಸೇರಿತು. ನಂತರ ಇವೆಲ್ಲಾ ಸೇರಿ “ಕಾಡಿನ ರಾಜ” ನನ್ನು ಬೆನ್ನಟ್ಟಿ ಓಡಿಸಿವೆ. ನಾಯಿಗಳ ಆಕ್ರಮಣಕ್ಕೆ ಸಿಂಹ ಹೆದರಿ ಓಡಿ ಹೋಗಿ, ಕಾಡು ಸೇರಿದೆ.
ಈ ವಿಡಿಯೋವನ್ನು ಐಎಫ್ ಎಸ್ (IFS) ಅಧಿಕಾರಿ ಸುರೇಂದ್ರ ಮೆಹ್ರಾ ಅವರು ಟ್ವೀಟರ್ ನಲ್ಲಿ (Twitter) ಶೇರ್ ಮಾಡಿದ್ದು, ವಿಡಿಯೋದಲ್ಲಿ ಭೂ ಗಡಿ ಪ್ರದೇಶದ ಬಗ್ಗೆ ಉಲ್ಲೇಖಿಸಿದ್ದು, ಪ್ರಾಣಿಗಳು ಕೂಡಾ ತಮ್ಮ ಪ್ರದೇಶವನ್ನು ಹೇಗೆ ರಕ್ಷಿಸಿಕೊಳ್ಳುತ್ತಿವೆ ಎಂಬುದಾಗಿ ತಿಳಿಸಿದೆ. ವಿಡಿಯೋ ವೀಕ್ಷಿಸಿದ ಜನರು ವಿಭಿನ್ನ ಕಾಮೆಂಟ್ ಮಾಡಿದ್ದಾರೆ.













