Home Interesting Weird Job: ಅಬ್ಬಬ್ಬಾ!! ನಾಯಿ ನೋಡಿಕೊಳ್ಳುವ ಉದ್ಯೋಗವೂ ಇದೆ ; ವಾರ್ಷಿಕ 1 ಕೋಟಿ...

Weird Job: ಅಬ್ಬಬ್ಬಾ!! ನಾಯಿ ನೋಡಿಕೊಳ್ಳುವ ಉದ್ಯೋಗವೂ ಇದೆ ; ವಾರ್ಷಿಕ 1 ಕೋಟಿ ರೂ. ವೇತನ ! ಏನೆಲ್ಲಾ ಸೌಲಭ್ಯಗಳು ಇದೆ ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

Weird Job: ಟೀಚರ್ ಕೆಲಸ, ಕಂಪನಿ ಉದ್ಯೋಗ, ನೌಕಾಪಡೆಯಲ್ಲಿ ಉದ್ಯೋಗ ಇವೆಲ್ಲಾ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಇಂತಹ ಉದ್ಯೋಗ ಕೇಳಿಯೂ ಇದ್ದೀರಾ ಕೆಲವರು ಮಾಡಿಯೂ ಇರುತ್ತಾರೆ. ಆದರೆ, ನಾಯಿ ನೋಡಿಕೊಳ್ಳುವ ಕೆಲಸವೂ (Weird Job) ಇದೆ ಎಂದರೆ ಆಶ್ಚರ್ಯ. ಅದಕ್ಕೆಂದೇ ಕೋಟಿಗಟ್ಟಲೆ ಹಣ ಕೊಡುತ್ತಾರೆ ಎಂದರೆ ಇನ್ನೂ ಆಶ್ಚರ್ಯ.

ಹೌದು, ಇಲ್ಲೊಬ್ಬ ಶ್ರೀಮಂತ ಶ್ವಾನಪ್ರೇಮಿ ತನ್ನ ಮುದ್ದಾದ ನಾಯಿಗಳನ್ನು ನೋಡಿಕೊಳ್ಳಲು ಕೋಟ್ಯಂತರ ಸಂಬಳ ನೀಡಿ ಉದ್ಯೋಗಿಯನ್ನು ನೇಮಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ನಲ್ಲಿ ನಾಯಿಯನ್ನು ನೋಡಿಕೊಳ್ಳುವ ಉದ್ಯೋಗ ಇದೆ. ಜಾರ್ಜ್ ರಾಲ್ಫ್-ಡನ್, ಕೆನ್ಸಿಂಗ್ಟನ್‌ನ ಫೇರ್‌ಫ್ಯಾಕ್ಸ್ ಮೂಲದ ನೇಮಕಾತಿ ಏಜೆನ್ಸಿ ಈ ಉದ್ಯೋಗಕ್ಕಾಗಿ ಜಾಹೀರಾತು ನೀಡಿದೆ.

ಈ ಕೋಟ್ಯಾಧಿಪತಿಯ ಮನೆಯಲ್ಲಿ 2 ನಾಯಿಗಳಿವೆ. ಈ ನಾಯಿಗಳನ್ನು ನೋಡಿಕೊಳ್ಳುವುದಕ್ಕೆ ಜನವಿಲ್ಲ. ಹಾಗಾಗಿ ಅರ್ಜಿ ಆಹ್ವಾನಿಸಿದ್ದಾರೆ. ಹೌದು, ಈ ಕೆಲಸಕ್ಕೆ ಸೇರಿದವರು ದಿನವಿಡೀ ನಾಯಿಗಳನ್ನು ನೋಡಿಕೊಳ್ಳಬೇಕು. ಇದಕ್ಕಾಗಿ ವಾರ್ಷಿಕ ಒಂದು ಕೋಟಿ ರೂಪಾಯಿ ವೇತನ ನೀಡುವುದಾಗಿ ಹೇಳಿದ್ದಾರೆ.

6 ವಾರಗಳ ರಜೆ, ಅಂದರೆ ಪ್ರತಿ ವರ್ಷವೂ 42 ದಿನಗಳ ರಜೆ ಸಿಗುತ್ತದೆ. ಅಷ್ಟೇ ಅಲ್ಲ ನಾಯಿಗಳೊಂದಿಗೆ ಐಷಾರಾಮಿ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸಲು ಅವಕಾಶ ಸಿಗುತ್ತದೆ . ಉತ್ತಮ ವಸತಿ ಮತ್ತು ಊಟದ ವ್ಯವಸ್ಥೆ ಇದೆ. ಉತ್ತಮ ದರ್ಜೆಯಲ್ಲಿ ವಾಸಿಸುವ ಅವಕಾಶ ಇದೆಲ್ಲವೂ ನಾಯಿಯನ್ನು ನೋಡಿಕೊಳ್ಳುವವರ ಪಾಲಾಗಲಿದೆ‌.

ನಾಯಿಗಳಿಗೆ ಸರಿಯಾದ ಸಮಯಕ್ಕೆ ಆಹಾರ ನೀಡುವುದು . ನಾಯಿಗಳನ್ನು ಸಮಯಕ್ಕೆ ಸರಿಯಾಗಿ ವೈದ್ಯರ ಬಳಿಗೆ ಕರೆದೊಯ್ಯಬೇಕು. ನಾಯಿಗಳ ಎಲ್ಲಾ ಅಗತ್ಯಗಳನ್ನು ಪೂರೈಸಬೇಕು.
ಮುಖ್ಯವಾಗಿ ಶ್ವಾನಪ್ರಿಯರಾಗಿರಬೇಕು. ನಾಯಿ ಕಂಡರೆ ಮಾರುದ್ದ ಓಡುವವರಲ್ಲ. ಉದೋಗಿಗೆ ನಾಯಿಗಳ ಬಗ್ಗೆ ತಿಳಿದಿರಬೇಕು. ನಾಯಿಗಳು ತಿನ್ನುವ ಆಹಾರ ಮತ್ತು ಪಾನೀಯಗಳ ಬಗ್ಗೆ ಸ್ಪಷ್ಟವಾಗಿ ಗೊತ್ತಿರಬೇಕು. ನೀವು ಅಪ್ಲೈ ಮಾಡುತ್ತೀರಾ ಎಂದಾದರೆ ಮಾಡಬಹುದು. ಕೈ ತುಂಬಾ ಸಂಬಳದ ಜೊತೆಗೆ ಹಲವು ಉತ್ತಮ ಅವಕಾಶಗಳಿವೆ.