Home Interesting Headless Dog : ತಲೆಯೇ ಇಲ್ಲದ ನಾಯಿ, ಏನಿದು ಆಶ್ಚರ್ಯ? ಪ್ರಶ್ನೆಯಾಗಿಯೇ ಉಳಿದಿದೆ ಈ ಶ್ವಾನ!

Headless Dog : ತಲೆಯೇ ಇಲ್ಲದ ನಾಯಿ, ಏನಿದು ಆಶ್ಚರ್ಯ? ಪ್ರಶ್ನೆಯಾಗಿಯೇ ಉಳಿದಿದೆ ಈ ಶ್ವಾನ!

Headless Dog

Hindu neighbor gifts plot of land

Hindu neighbour gifts land to Muslim journalist

Headless Dog: ಪ್ರಪಂಚದಲ್ಲಿ ಪ್ರತಿದಿನವೂ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲ ವಿಷಯಗಳನ್ನು ನಂಬಲು ಸಹ ಸಾಧ್ಯವಾಗುವುದಿಲ್ಲ. ಆದರೆ ಕೆಲವೊಮ್ಮೆ ಅನಿವಾರ್ಯವಾಗಿ ನಂಬಲೇ ಬೇಕಾಗುತ್ತದೆ. ಸದ್ಯ ನಿಮಗಿಲ್ಲಿ ಅಚ್ಚರಿಯ ವಿಷಯವೊಂದು ಕಾದಿದೆ. ಅದೇನೆಂದು ಬನ್ನಿ ನೋಡೋಣ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ (social media )ಇತ್ತೀಚೆಗಷ್ಟೇ ತಲೆ ಇಲ್ಲದ ನಾಯಿಯ (Headless Dog) ಚಿತ್ರ ವೈರಲ್ (viral )ಆಗಿದ್ದು, ಜನರನ್ನು ಚಕಿತ ಗೊಳಿಸಿದೆ.

ಹೌದು ಇತ್ತೀಚೆಗಷ್ಟೇ ತಲೆ ಇಲ್ಲದ ನಾಯಿಯ ಚಿತ್ರ ವೈರಲ್ ಆಗಿದೆ. ಅಲ್ಲದೇ ಈ ನಾಯಿಗೆ ಒಂದು ಕಾಲು ಕೂಡ ಇಲ್ಲ. ನಿಜವಾಗಿ ವೈರಲ್ ಆಗಿರುವ ಚಿತ್ರವನ್ನು ನೋಡಿದರೆ ಈ ನಾಯಿಯ ತಲೆ ಕಡಿದು ತಲೆಗೆ ಹೊಲಿಗೆ ಹಾಕಿದಂತೆ ಕಾಣುತ್ತದೆ. ಹೀಗಿದ್ದರೂ ಅದು ಕುಳಿತು ಬದುಕುತ್ತಿದೆ. ಜನರು ತುಂಬಾ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಮತ್ತು ಈ ಚಿತ್ರವು ನಿಜವೆಂದು ಅಂದುಕೊಂಡಿದ್ದಾರೆ. ಆದರೆ ಈ ಚಿತ್ರದ ಸತ್ಯ ಬೇರೆಯೇ ಇದೆಯಂತೆ.

ಸರಿಯಾಗಿ ನೋಡಿದರೆ ನಾಯಿಗೆ ಕಾಲು ಕೂಡ ಇಲ್ಲ ಎಂದು ಗೊತ್ತಾಗಿದೆ. ಮಾಹಿತಿ ಪ್ರಕಾರ ಸತ್ಯವೆಂದರೆ ಈ ನಾಯಿಯ ಕಾಲು ಮಾತ್ರ ಕತ್ತರಿಸಲ್ಪಟ್ಟಿದೆ, ಉಳಿದಂತೆ ಸುರಕ್ಷಿತವಾಗಿದೆ. ಈ ಚಿತ್ರವನ್ನು ತೆಗೆದ ಸಮಯದಲ್ಲಿ, ನಾಯಿ ತನ್ನ ಎಡಭಾಗದಲ್ಲಿ ಬಾಗಿ ತನ್ನ ದೇಹವನ್ನು ಸ್ಕ್ರಾಚ್ ಮಾಡುತ್ತಿದೆ. ಈ ಸಮಯದಲ್ಲಿ ನಾಯಿಯ ಸಂಪೂರ್ಣ ತಲೆಯು ದೇಹದಿಂದ ಮುಚ್ಚಲ್ಪಟ್ಟಿದೆ. ಮುಂಭಾಗದಲ್ಲಿ ಗೋಚರಿಸುವ ಹೊಲಿದ ಭಾಗವು ಅದರ ಕಾಲು ಮಾತ್ರ ಎಂಬುದು ತಿಳಿದು ಬಂದಿದೆ.

ಒಟ್ಟಿನಲ್ಲಿ ಈ ಫೋಟೋ ನೋಡಿದಾಗ ಒಂದು ಬಾರಿ ನೀವು ಸಹ ಅಚ್ಚರಿ ಪಡದಿರಲು ಸಾಧ್ಯವಿಲ್ಲ.