Home Interesting 17 ಗಂಟೆಗಳಲ್ಲಿ 67 ಪಬ್ ಗಳಲ್ಲಿ ನಿರಂತರ ಕುಡಿದ ಭೂಪ, ಗಿನ್ನೆಸ್ ದಾಖಲೆಗೆ ಎಂಟ್ರಿ !

17 ಗಂಟೆಗಳಲ್ಲಿ 67 ಪಬ್ ಗಳಲ್ಲಿ ನಿರಂತರ ಕುಡಿದ ಭೂಪ, ಗಿನ್ನೆಸ್ ದಾಖಲೆಗೆ ಎಂಟ್ರಿ !

Hindu neighbor gifts plot of land

Hindu neighbour gifts land to Muslim journalist

‘ ಕುಡಿದು ಕುಡಿದು ಹಾಳಾಗಬೇಡ, ಏನಾದರೂ ಸಾಧನೆ ಮಾಡು’ ಅಂತ ಹಿರಿಯರು ಕುಡಿಯೋ ಅಭ್ಯಾಸ ಇರೋರಿಗೆ ಬುದ್ಧಿ ಹೇಳುವುದಿದೆ. ಆದರೆ ವ್ಯಕ್ತಿಯೊಬ್ಬ ಕುಡಿದು ಹಾಳಾಗುವ ಬದಲು, ಅದನ್ನೇ ಒಂದು ಸಾಧನೆಯನ್ನಾಗಿ ಮಾಡಿದರೆ….ಯಸ್, ಇರೋ ಬರೋ ಮದ್ಯವನ್ನೆಲ್ಲ ಕುಡಿದು ವ್ಯಕ್ತಿಯೊಬ್ಬ ಗಿನ್ನೆಸ್ ದಾಖಲೆಯಂತಹ ಕಷ್ಟಕರ ಸಾಧನೆಯನ್ನು ಸಾಧಿಸಿದ್ದಾನೆ. ಗಿನ್ನೆಸ್ ಮಾಡಲು ಇಂತಹದ್ದೇ ಸಂಗತಿ ಬೇಕೆಂದಿಲ್ಲ ಎಂಬುದಕ್ಕೆ ಇಲ್ಲೊಬ್ಬ ವಿಭಿನ್ನ ಸಾಧನೆ ಮಾಡಿ ತೋರಿಸಿದ್ದಾನೆ.

ಅದೇನೆಂದರೆ, ಆತ ಮೂಗು ಮಟ್ಟ ಕುಡಿದದ್ದು. ಆತ ಸುಮಾರು 17 ಗಂಟೆಗಳಲ್ಲಿ 67 ಪಬ್ ಗಳಿಗೆ ಹೋಗಿ‌ ಕಂಠ ತುಂಬಿ, ಇನ್ನೊಂದಷ್ಟು ಮದ್ಯ ಮೂಗಿನಿಂದ ಬರುವಷ್ಟು ಕುಡಿದು ಗಿನ್ನಿಸ್ ದಾಖಲೆ ಬರೆದಿದ್ದಾನೆ.

ನಾಥನ್ ಕ್ರಿಂಪ್ ಎಂಬ ಹೆಸರಿನ 22 ವರ್ಷದ ಬ್ರಿಟಿಷ್ ವ್ಯಕ್ತಿಯೆ ಕುಡಿತದ ಕೆಡುಕಿನ ಜತೆಯೂ ಸಾಧನೆ ಮಾಡಬಹುದೆಂದು ತೋರಿಸಿದವ. ಕ್ರಿಂಪ್ ಇಂಗ್ಲೆಂಡ್ ನ ಬೈಟನ್ ಪ್ರದೇಶದಲ್ಲಿರುವ 17 ಗಂಟೆಯಲ್ಲಿ 67 ಪಬ್ ಗಳಿಗೆ ಓಡಿ ಓಡಿ ಭೇಟಿ ನೀಡಿ ಕಂಠಪೂರ್ತಿ ಕುಡಿಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಆಗ ಆತನ ಜೊತೆಗೆ ಅವರ ಸ್ನೇಹಿತರ ಬಳಗವು ಕೂಡಾ ಇತ್ತು. ಸ್ನೇಹಿತರು ಜತೆಗಿದ್ದರೆ ತಾನೇ, ಮದ್ಯ ಮಸ್ತಾಗಿ ಇಳಿಯುವುದು ?!

ಆತ ಹಾಗೆ ಸುಮಾರು 17 ಗಂಟೆಗಳಲ್ಲಿ 30 ಲೀಟರ್ ಶರಾಬನ್ನು  ಶರಬತ್ತಿಗಿಂತ ಸುಲಭವಾಗಿ ಸೇವಿಸಿದ್ದ. ಪದೇ ಪದೇ ಶೌಚಾಲಯಕ್ಕೆ ಹೋಗುತ್ತಾ ಜತೆಗೆ ಜ್ಯೂಸನ್ನು ಕೂಡಾ ಹೀರುತ್ತಾ ಕುಡಿದು ಗೆದ್ದಿದ್ದಾನೆ.

ಈ ದಾಖಲೆಯಲ್ಲಿ ಇನ್ನೊಂದು ವಿಶೇಷವಿದೆ. ಈತನು 22 ವರ್ಷದ ಯುಕೆ ಯ ಬ್ರ್ಯೆಟನ್ ನಗರದಲ್ಲಿ ನೇಥನ್ ಕ್ರಿಂಪ್ ನಿರ್ಮಿಸಿದ ದಾಖಲೆ ಮುರಿಯಲು ಈ ಸಾಹಸಕ್ಕೆ ಕೈ ಹಾಕಿದ್ದಾನೆ. ಇವನು ಆಗಸ್ಟ್‌ನಲ್ಲಿ GofundMe  ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದು, ಅದರಲ್ಲಿ ಶ್ವಾನಗಳ ಟ್ರಸ್ಟ್ ಗೆ ಹಣವನ್ನು ದಾನ ಮಾಡಲು ಜನರಲ್ಲಿ ಮನವಿ ಕೂಡಾ ಮಾಡಿದ್ದಾನೆ. ಅಕ್ಟೋಬರ್ 2020 ರಲ್ಲಿ ಕ್ಯಾನ್ಸರ್ ನಿಂದ ಮೃತಪಟ್ಟ ತನ್ನ ದಿವಂಗತ ನಾಯಿ ಕಾರಾಗಾಗಿ ನೇಥನ್‌ ಕ್ರಿಂಪ್ ಈ ಸವಾಲನ್ನು ಸ್ವೀಕರಿಸಿದ್ದಾನೆ ಎನ್ನಲಾಗಿದೆ.