Home Interesting ಕನಸಲ್ಲಿ ನಿಧಿ ಇದೆ ಎಂದು ಹೇಳಿದ ದೇವರು | ಕಾಡಲ್ಲಿ ಬಂದು ಬಾವಿ ತೋಡಿದ ವ್ಯಕ್ತಿ,...

ಕನಸಲ್ಲಿ ನಿಧಿ ಇದೆ ಎಂದು ಹೇಳಿದ ದೇವರು | ಕಾಡಲ್ಲಿ ಬಂದು ಬಾವಿ ತೋಡಿದ ವ್ಯಕ್ತಿ, ಮುಂದೇನಾಯ್ತು?

Hindu neighbor gifts plot of land

Hindu neighbour gifts land to Muslim journalist

ಈ ದುಡ್ಡಿನ ಮೋಹ ಯಾವುದೇ ರೂಪದಲ್ಲಿ ಕಣ್ಣ ಮುಂದೆ ಬಂದರೂ ಜನ ಅದರ ಬೆನ್ನತ್ತಿ ಹೋಗುವುದಕ್ಕೆ ಈ ಘಟನೆಯೇ ಉದಾಹರಣೆ. ಅದರಲ್ಲೂ ಈ ನಿಧಿಯ ಕುರಿತು ಏನಾದರೂ ತಿಳಿದರಂತೂ ಮನುಷ್ಯ ಆತನಿಗೆ ಪರಿಜ್ಞಾನವೇ ಇಲ್ಲದ ರೀತಿಯಲ್ಲಿ ವರ್ತಿಸುವ ರೀತಿ ನಿಜಕ್ಕೂ ಯಾಕೆ ಈ ರೀತಿ ಎಂಬ ಪ್ರಶ್ನೆ ಮನಸ್ಸಲ್ಲಿ ಮೂಡದೇ ಇರದು. ಈ ನಿಧಿ ಪಡೆಯುವ ಕೆಲಸಕ್ಕೆ ಮಾಟ ಮಂತ್ರ, ತಂತ್ರಗಳಂಥ ಕೆಲಸಗಳು ನಡೆಯುವ ಕೆಲಸಗಳು ನಡೆಯುವುದನ್ನು ವರದಿಯಾಗಿರುವುದನ್ನು ಓದಿರಬಹುದು. ಈಗ ಇಲ್ಲೊಂದು ಕಡೆ ಅಂತಹುದೇ ನಿಧಿ ಇದೆ ಎಂದು ಕನಸಲ್ಲಿ ದೇವರು ಬಂದು ಹೇಳಿದ್ದಾರೆ ಎಂದು ಓರ್ವ ಮಾಡಿದ ಕೆಲಸ ನಿಜಕ್ಕೂ ಆಶ್ಚರ್ಯ ಪಡುವಂತೆ ಮಾಡಿದೆ. ಈತ ದೇವರು ಬಂದು ಕನಸಲ್ಲಿ ನಿಧಿ ಇದೆ ಎಂದು ಹೇಳಿದ್ದಕ್ಕೆ ಕಾಡಿನಲ್ಲಿ ಹೋಗಿ ಬಾವಿ ತೋಡಿದ್ದಾನೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೇಳೂರು ಗ್ರಾಮದ ಮೀಸಲು ಅರಣ್ಯಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ಕಾಡಿನಲ್ಲಿ ಬಾವಿ ತೋಡುತ್ತಿದ್ದ ಇಬ್ಬರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಲಾರಂಭಿಸಿದ್ದಾರೆ. ನಿಧಿಯ ಆಸೆಗೆ ಬಿದ್ದಿದ್ದ ಹಾಗೂ ಬಾವಿ ತೋಡಲು ಆತನಿಗೆ ಸಹಾಯ ಮಾಡುತ್ತಿದ್ದ ಇಬ್ಬರೂ ಸಿಕ್ಕಿಬಿದ್ದಿದ್ದಾರೆ.

ಸಿಕ್ಕಿಬಿದ್ದವರಲ್ಲಿ ಒಬ್ಬ ವ್ಯಕ್ತಿಗೆ ದೇವರು ಕನಸಿನಲ್ಲಿ ಬಂದು ಇಂಥ ಜಾಗದಲ್ಲಿ ನಿಧಿ ಇದೆ ಎಂದು ಹೇಳಿತ್ತಂತೆ. ಹೀಗಾಗಿ ಆತ ಇನ್ನೊಬ್ಬನ ಸಹಾಯದಿಂದ ಕಾಡಿಗೆ ಹೋಗಿದ್ದು, ಅಲ್ಲಿ ನಾಲೈದು ದಿನಗಳಿಂದ ಪೂಜೆ ಮಾಡಿ ಬಾವಿ ತೋಡಲಾರಂಭಿಸಿದ್ದರು. ಅರಣ್ಯಾಧಿಕಾರಿಗಳು ಈ ವಿಷಯ ತಿಳಿದು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಸಿಕ್ಕಿಬಿದ್ದವರ ಹೆಸರು-ವಿವರ ಇನ್ನಷ್ಟೇ ಬಹಿರಂಗವಾಗಬೇಕಿದೆ.