Home Interesting ಹೆಣ್ಣಾಗಿ ಹುಟ್ಟಿ ಗಂಡಾಗಿ ಪರಿವರ್ತನೆ!! ಲಿಂಗ ಬದಲಾವಣೆಯ ಮೂಲಕ 47 ವರ್ಷದ ಅವಳು ಅವನಾಗಿದ್ದು ಯಾಕೆ!?

ಹೆಣ್ಣಾಗಿ ಹುಟ್ಟಿ ಗಂಡಾಗಿ ಪರಿವರ್ತನೆ!! ಲಿಂಗ ಬದಲಾವಣೆಯ ಮೂಲಕ 47 ವರ್ಷದ ಅವಳು ಅವನಾಗಿದ್ದು ಯಾಕೆ!?

Hindu neighbor gifts plot of land

Hindu neighbour gifts land to Muslim journalist

ಹೆಣ್ಣಿನ ಮೇಲಿನ ಶೋಷಣೆ, ಕಿರುಕುಳ ಇವೆಲ್ಲದರಿಂದ ಬೇಸತ್ತ 47 ವರ್ಷದ ಮಹಿಳೆಯೋರ್ವರು ತನ್ನೊಳಗಿನ ಹೆಣ್ಣನ್ನು ತೊರೆದು ಲಿಂಗ ಬದಲಾವಣೆ ಮಾಡಿಸಿಕೊಳ್ಳುವ ಮೂಲಕ ಗಂಡಾಗಿ ಪರಿವರ್ತನೆಯಾದ ಘಟನೆಯೊಂದು ಇಂದೋರ್ ನಲ್ಲಿ ವರದಿಯಾಗಿದೆ.

ಅಲ್ಕಾ ಸೋನಿ ಎನ್ನುವ ಹೆಸರಿನ ಮಹಿಳೆ ತನ್ನ ಲಿಂಗ ಬದಲಾವಣೆಯ ಬಳಿಕ ಅಸ್ವಿತ್ ಸೋನಿಯಾಗಿ ಬದಲಾಗಿದ್ದು, 20 ನೇ ವಯಸ್ಸಿನಲ್ಲಿ ಗಂಡಾಗಬೇಕು ಎಂದು ಬಯಸಿದ್ದ ಅಲ್ಕಾ, ಕೊನೆಗೂ ಹಲವಾರು ಅಡಕು ತೊಡಕುಗಳನ್ನು ಮೆಟ್ಟಿ ಗಂಡಾಗಿ ಪರಿವರ್ತನೆಯಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಈ ಜಗತ್ತಿಗೆ ಹೇಗೆ ಬಂದೆ ಎನ್ನುವುದಕ್ಕಿಂತಲೂ ಇಲ್ಲಿ ಹೇಗೆ ಇದ್ದೆ ಎನ್ನುವುದು ಮುಖ್ಯ. ಗಂಡಾಗಿ ಬದುಕಲು ಇಷ್ಟ ಇದ್ದ ಕಾರಣ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ.