Home Interesting ಕನಸಿನ ಲೋಕದಲ್ಲಿ ಬೀಳುವ ಮುತ್ತಿನ ಅರ್ಥವೇನು? ಹಣೆಗೆ ಮುತ್ತು ನೀಡಿದರೆ ಇದರ ಅರ್ಥ ಏನೆಂದು ಗೊತ್ತೇ?...

ಕನಸಿನ ಲೋಕದಲ್ಲಿ ಬೀಳುವ ಮುತ್ತಿನ ಅರ್ಥವೇನು? ಹಣೆಗೆ ಮುತ್ತು ನೀಡಿದರೆ ಇದರ ಅರ್ಥ ಏನೆಂದು ಗೊತ್ತೇ? ತಿಳಿದುಕೊಳ್ಳಿ

Hindu neighbor gifts plot of land

Hindu neighbour gifts land to Muslim journalist

ನಾವು ಮಲಗಿದ್ದ ಸಂದರ್ಭದಲ್ಲಿ ನಮಗೆ ಕನಸು ಬೀಳುವುದು ಸಹಜ. ಪ್ರತಿದಿನ ಸುಖವಾಗಿ ಕನಸು ಕಾಣುವ ಜನರು ನಿಜಕ್ಕೂ ಪುಣ್ಯವಂತರು. ಏಕೆಂದರೆ ಅಂತಹವರು ನಿಜ ಜೀವನದಲ್ಲಿ ಕೂಡಾ ತುಂಬಾ ಖುಷಿಯಾಗಿರುತ್ತಾರೆ ಎಂದು ಹೇಳುತ್ತಾರೆ.

ನಿಜ ಜೀವನದಲ್ಲಿ ನಾವು ಯಾರಿಗಾದರೂ ಪ್ರೀತಿಯಿಂದ ಮುತ್ತನ್ನು ನೀಡಿ ಆ ಮೂಲಕ ಅವರ ಕಡೆಗೆ ನಮ್ಮ‌ ಪ್ರೀತಿಯನ್ನು ವ್ಯಕ್ತಪಡಿಸುತ್ತೇವೆ. ಅದು ತಂದೆಗೆ ಮಗಳಿಗೆ ನೀಡುವ ಮುತ್ತಾಗಿರಬಹುದು, ಮಗನಿಗೆ ತಾಯಿ ನೀಡುವ ಮುತ್ತಾಗಿರಬಹುದು‌ ಅಥವಾ ಗೆಳೆಯ ಗೆಳತಿಗೆ ನೀಡುವ ಮುತ್ತಾಗಿರಬಹುದು. ಇದು ನಿಜ ಜೀವನದಲ್ಲಿ ಆದರೆ ನಾವೀಗ ಕನಸಿನ ಲೋಕಕ್ಕೆ ಹೋಗುವ. ಅಲ್ಲಿ ನಿಮಗೆ ಬೀಳುವ ಮುತ್ತಿನ ಕನಸಿನ ಅರ್ಥ ತಿಳಿಯೋಣ ಬನ್ನಿ !

ಕನಸಿನಲ್ಲಿ ನೀವು ಯಾರಿಗಾದರೂ ಕೈಗೆ ಮುತ್ತು ನೀಡುವ ಬಗ್ಗೆ ಕಂಡರೆ ಇದರರ್ಥ ಆ ವ್ಯಕ್ತಿಯ ಕಡೆಗೆ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿಸುವುದು ಎಂದರ್ಥ. ಕೈಗೆ ಮುತ್ತು ಕೊಡುವುದು ಗೌರವದ ಸಂಕೇತ.

ಕನಸಿನಲ್ಲಿ ಯಾರದಾದರೂ ಪಾದಗಳನ್ನು ಚುಂಬಿಸುವ ಕನಸು ಕಂಡರೆ ಆ ವ್ಯಕ್ತಿಯ ಬಗ್ಗೆ ನಿಮಗೆ ಮೃದುವಾದ ಭಾವನೆ ಇದೆ ಎಂದರ್ಥ. ಹೃದಯದಿಂದ ಆ ವ್ಯಕ್ತಿಗೆ ವಿಶೇಷ ಗೌರವವನ್ನು ಹೊಂದಿದ್ದೀರಿ ಎಂದರ್ಥ.

ಕನಸಿನಲ್ಲಿ ಪ್ರೀತಿಪಾತ್ರರ ಹಣೆಯ ಮೇಲೆ ಚುಂಬಿಸಿದರೆ ಅಥವಾ ಅವರು ನಿಮ್ಮ‌ ಹಣೆಯ ಮೇಲೆ ಚುಂಬಿಸಿದರೆ ಇಂಥಹ ಕನಸು ಬಂದರೆ ಆ ವ್ಯಕ್ತಿಗೆ ನಿಮ್ಮ ಬಗ್ಗೆ ಏನು ಇಷ್ಟವಿಲ್ಲ ಎಂದು. ಹಾಗಾಗಿ ಒಮ್ಮೆ ಮುಕ್ತವಾಗಿ ಮಾತನಾಡಬೇಕೆಂದರ್ಥ.

ಕನಸಿನಲ್ಲಿ ಯಾರದಾದರೂ ಕೆನ್ನೆಯ ಮೇಲೇನಾದರೂ ಚುಂಬಿಸಿದರೆ ನೀವು ಅವರನ್ನು ಇಷ್ಟ ಪಡುತ್ತಿದ್ದೀರಿ ಎಂದರ್ಥ.ಇದು ಸ್ನೇಹ, ವಾತ್ಸಲ್ಯ, ಗೌರವ ಮತ್ತು ಅವರ ಕಡೆ ಉತ್ತಮ ನಡವಳಿಕೆಯನ್ನು ತೋರಿಸುತ್ತದೆ.

ಕುತ್ತಿಗೆಯನ್ನು ಚುಂಬಿಸುವ ಕನಸು ಕಂಡರೆ ಇದು ಲೈಂಗಿಕತೆಯನ್ನು ಪ್ರತಿಬಿಂಬಿಸುತ್ತದೆ. ಇದು ಆ ವ್ಯಕ್ತಿ ನಿಮ್ಮ ಜೊತೆ ಇರಲು ಬಯಸುತ್ತಾರೆ ಮತ್ತು ಆತ್ಮೀಯವಾಗಿರಲು ಬಯಸುತ್ತಾರೆಂದು ಅರ್ಥ.

ಕನಸಿನಲ್ಲಿ ತುಟಿಗಳನ್ನು ಚುಂಬಿಸುವ ಕನಸು ಕಂಡರೆ ಭವಿಷ್ಯದಲ್ಲಿ ನೀವು ಆ ವ್ಯಕ್ತಿಯೊಂದಿಗಿನ ನಿಮ್ಮ‌ಸಂಬಂಧವನ್ನು ದೃಢೀಕರಿಸಲು ಇಚ್ಛೆ ಪಡುತ್ತೀರಿ ಎಂದರ್ಥ.