Home Interesting Diamond Ring: ಸೂರ್ಯಕಾಂತಿ ಉಂಗುರ ಅಂದ್ಕೊಂಡಿದ್ದೀರಾ? ಇದರಲ್ಲಿದೆ ಭರ್ಜರಿ 50,907 ವಜ್ರಗಳು!

Diamond Ring: ಸೂರ್ಯಕಾಂತಿ ಉಂಗುರ ಅಂದ್ಕೊಂಡಿದ್ದೀರಾ? ಇದರಲ್ಲಿದೆ ಭರ್ಜರಿ 50,907 ವಜ್ರಗಳು!

Diamond Ring
Image source: udayavani

Hindu neighbor gifts plot of land

Hindu neighbour gifts land to Muslim journalist

Diamond Ring: ವಜ್ರದ ಉಂಗುರವನ್ನು (Diamond Ring) ಹಲವರಲ್ಲದಿದ್ದರೂ ಕೆಲವರು ನೋಡಿರುತ್ತೀರಾ!!. ಉಂಗುರ ಅಥವಾ ವಜ್ರದ ಉಂಗುರ ಅಂದರೆ ಅದರಲ್ಲಿ ಹೆಚ್ಚಾಗಿ ಒಂದು ಹರಳು ಇರುತ್ತವೆ. ಇಲ್ಲವೇ ಎರಡು ಅಷ್ಟೇ. ಆದರೆ, ಒಂದು ಉಂಗುರದಲ್ಲಿ 50,907 ವಜ್ರಗಳಿವೆ ಎಂದರೆ ನಂಬುತ್ತೀರಾ??.

ಹೌದು, ಭಾರತದ (india) ಆಭರಣ ತಯಾರಿ ಸಂಸ್ಥೆಯಾದ ಎಚ್‌ಕೆ ಡಿಸೈನ್ಸ್‌ ಆ್ಯಂಡ್‌ ಹರೀಕೃಷ್ಣ ಎಕ್ಸ್‌ಪೋರ್ಟ್ಸ್ ಲಿಮಿಟೆಡ್‌ ಒಂದೇ ಉಂಗುರದಲ್ಲಿ 50,907 ವಜ್ರಗಳನ್ನು ಅಳವಡಿಸಿ, ಉಂಗುರ ತಯಾರಿಸಿದೆ. ಅಷ್ಟೇ ಅಲ್ಲ, ಈ ಉಂಗುರವನ್ನು, ಮರುಬಳಕೆಯ ಸಂಪೂರ್ಣ ಚಿನ್ನವನ್ನು (gold) ಬಳಸಿ ತಯಾರಿಸಲಾಗಿದೆ.

ಈ ಉಂಗುರ ಅತಿ ಅದ್ಭುತವಾಗಿದ್ದು, ನೋಡಲು ಸೂರ್ಯಕಾಂತಿ ಹೂವಿನ ಮೇಲೆ ಚಿಟ್ಟೆಯೊಂದು ಕೂತಿರುವಂತೆ ಕಾಣಿಸುತ್ತದೆ. ಹಾಗೇ ವಿನ್ಯಾಸ ಮಾಡಲಾಗಿದೆ. ಇಷ್ಟೊಂದು ವಜ್ರವಿರುವ ಈ ಉಂಗುರದ ಬೆಲೆ ಎಷ್ಟು ಗೊತ್ತಾ? ಆದರೆ ಬೆಲೆ ಬರೋಬ್ಬರಿ 6.42 ಕೋಟಿ ರೂ.ಗಳಾಗಿವೆ. ಸದ್ಯ ಈ 50,907 ವಜ್ರಗಳ ಉಂಗುರ ಗಿನ್ನೆಸ್‌ ದಾಖಲೆ (guinness world records) ಪುಟ ಸೇರಿದೆ. ಗಿನ್ನೆಸ್‌ ರೆಕಾರ್ಡ್‌ ಪೇಜ್‌ನಲ್ಲಿ ಈ ಬಗ್ಗೆ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಭಾರತದ ಈ ನಗರವನ್ನು ನ್ಯೂಯಾರ್ಕ್ ನಗರಕ್ಕೆ ಹೋಲಿಸಿದ ಸೂಪರ್ ಸ್ಟಾರ್ ರಜನಿಕಾಂತ್ !