Home Interesting China: ಚೀನಾದಲ್ಲಿ ಬಾಲಕರ ಮೂತ್ರಕ್ಕೆ ಹೆಚ್ಚಿದ ಡಿಮ್ಯಾಂಡ್- ಶಾಲೆಗಳಲ್ಲಿ ಬಕೆಟ್ ಇಟ್ಟು ಸಂಗ್ರಹ – ಕಾರಣ...

China: ಚೀನಾದಲ್ಲಿ ಬಾಲಕರ ಮೂತ್ರಕ್ಕೆ ಹೆಚ್ಚಿದ ಡಿಮ್ಯಾಂಡ್- ಶಾಲೆಗಳಲ್ಲಿ ಬಕೆಟ್ ಇಟ್ಟು ಸಂಗ್ರಹ – ಕಾರಣ ಕೇಳಿದ್ರೆ ದಂಗಾಗುತ್ತೀರಾ

Hindu neighbor gifts plot of land

Hindu neighbour gifts land to Muslim journalist

China: ಎರಡು ಕಾಲಿನವುಗಳಲ್ಲಿ ಮನುಷ್ಯರನ್ನು, ಮೂರು, ನಾಲ್ಕು ಕಾಲಿನವರಲ್ಲಿ ಮೇಜು, ಖುರ್ಚಿಗಳನ್ನು ಬಿಟ್ಟರೆ ಚೀನಿಯರು ಮತ್ತೆಲ್ಲಾ ಪ್ರಾಣಿ, ಪಕ್ಷಿ, ಕ್ರಿಮಿ ಕೀಟಗಳನ್ನೆಲ್ಲಾ ತಿಂದು ಅರಗಿಸಿಕೊಳ್ಳುತ್ತಾರೆ. ಆದರೀಗ ಇವರು ಹೊಸದೊಂದು ಖಾದ್ಯವನ್ನು ಕಂಡುಕೊಂಡಿದ್ದು, ಅದರ ಬಗ್ಗೆ ಏನಾದರೂ ನೀವು ತಿಳಿದರೆ ಗರಬಡಿದಂತಾಗುತ್ತೀರಿ. ಯಾಕೆಂದರೆ ಅದನ್ನು ತಯಾರಿಸುವುದು ಬಾಲಕರ ಮೂತ್ರದಿಂದಂತೆ.

ಹೌದು, ನಾವು ಹೇಳಹೊರಟಿರುವ ಚೀನಿಯರ ಪ್ರಮುಖ ಪ್ರಸಿದ್ಧ ಹಾಗೂ ಫೇವರಿಟ್ ಖಾದ್ಯವಾದ ‘ವರ್ಜಿನ್ ಎಗ್ಸ್’ ಬಗ್ಗೆ. ಇದನ್ನು ಚಿಕ್ಕ ಬಾಲಕರ ಮೂತ್ರವನ್ನು ಬಳಸಿ ತಯಾರಿಸಲಾಗುತ್ತದೆ.ಈ ‘ವರ್ಜಿನ್ ಎಗ್ಸ್'(Virgin Eggs) ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ವಸಂತಕಾಲ ಪ್ರಾರಂಭವಾಗುತ್ತಿದ್ದಂತೆ, ಅಲ್ಲಿನ ಜನರು ಈ ಖಾದ್ಯವನ್ನು ತಿನ್ನಲು ಕುತೂಹಲದಿಂದ ಎದುರು ನೋಡುತ್ತಾರೆ.

ವಿಶೇಷವೆಂದರೆ ಈ ಖಾದ್ಯವನ್ನು ಚಿಕ್ಕ ಹುಡುಗರ ಮೂತ್ರವನ್ನು ಬಳಸಿ ತಯಾರಿಸಲಾಗುತ್ತದೆ. ಈ ಖಾದ್ಯದಲ್ಲಿ ಬಳಸುವ ಮೊಟ್ಟೆಗಳನ್ನು ಮೂತ್ರದಲ್ಲಿ ನೆನೆಸಲಾಗುತ್ತದೆ, ಅದಕ್ಕಾಗಿಯೇ ಈ ಖಾದ್ಯವನ್ನು “ವರ್ಜಿನ್ ಎಗ್ಸ್” ಎಂದು ಕರೆಯಲಾಗುತ್ತದೆ.

ಈ ಖಾದ್ಯದ ತಯಾರಿ ಹೇಗೆ?
ಈ ಖಾದ್ಯವನ್ನು ತಯಾರಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೆಚ್ಚಿನ ಪ್ರಮಾಣದ ಮೂತ್ರದ ಅಗತ್ಯವಿರುತ್ತದೆ. ವರ್ಜಿನ್ ಎಗ್ಸ್ ತಯಾರಿಸಲು, ಮೊಟ್ಟೆಗಳನ್ನು ಮೊದಲು ಚಿಕ್ಕ ಹುಡುಗರ ಮೂತ್ರದಲ್ಲಿ ಬೇಯಿಸಲಾಗುತ್ತದೆ. ಆದ್ದರಿಂದ ಮಕ್ಕಳಿಂದ ಮೂತ್ರವನ್ನು ಸಂಗ್ರಹಿಸಲು ಶಾಲೆಗಳಲ್ಲಿ ಬಕೆಟ್ ಗಳನ್ನು ಇರಿಸಲಾಗುತ್ತದೆ. ಈ ಮೂತ್ರವನ್ನು ನಂತರ ದೊಡ್ಡ ಪಾತ್ರೆಗಳಿಗೆ ವರ್ಗಾಯಿಸಲಾಗುತ್ತದೆ, ಅಲ್ಲಿ ಮೊಟ್ಟೆಗಳನ್ನು ದಿನವಿಡೀ ನಿಧಾನವಾಗಿ ಬೇಯಿಸಲಾಗುತ್ತದೆ. ಮೊಟ್ಟೆಗಳನ್ನು ಮೂತ್ರದಲ್ಲಿ ಚೆನ್ನಾಗಿ ಬೇಯಿಸಿದ ನಂತರ, ಅವುಗಳನ್ನು ಒಡೆದು ತಿನ್ನಲಾಗುತ್ತದೆ. ಸ್ಥಳೀಯರು ಈ ಖಾದ್ಯವನ್ನು ಆನಂದಿಸುತ್ತಾರೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಂಬುತ್ತಾರೆ.