Home Interesting ಇಂಥ ಮಹಿಳೆಯರನ್ನು ಎಂದೂ ನಂಬಬೇಡಿ ಎಂದು ಚಾಣಕ್ಯನ ನೀತಿ ಹೇಳುತ್ತದೆ!

ಇಂಥ ಮಹಿಳೆಯರನ್ನು ಎಂದೂ ನಂಬಬೇಡಿ ಎಂದು ಚಾಣಕ್ಯನ ನೀತಿ ಹೇಳುತ್ತದೆ!

Hindu neighbor gifts plot of land

Hindu neighbour gifts land to Muslim journalist

ಈ ಗುಣಗಳನ್ನು ಹೊಂದಿರುವ ಮಹಿಳೆಯರನ್ನು ಖಂಡಿತವಾಗಿಯೂ ನಾವು ದೂರವಿಡಬೇಕು ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.  ಮಹಿಳೆಯರಲ್ಲಿ ಇರಬಾರದ ಈ ಗುಣಗಳಾವುವು..? ಚಾಣಕ್ಯನ ಪ್ರಕಾರ  ಮಹಿಳೆಯರಲ್ಲಿ ಯಾವ ಗುಣವಿರಬಾರದು..?

ದುರಾಸೆಯ ಮಹಿಳೆಯರ ಬಗ್ಗೆ ಎಚ್ಚರದಿಂದಿರಿ:
ದುರಾಸೆಯ ಮಹಿಳೆಯರು ತಮ್ಮ ಆಸಕ್ತಿಯ ಮುಂದೆ ಮತ್ತು ತಮ್ಮ ಆಸೆಯ ಮುಂದೆ ಬೇರೆ ಏನನ್ನೂ ಯೋಚಿಸುವುದಿಲ್ಲ ಎಂದು ಚಾಣಕ್ಯ ನೀತಿ ಹೇಳುತ್ತದೆ. ಅಂತಹ ಮಹಿಳೆಯರು ಬೆಳೆಯುತ್ತಿದ್ದಂತೆ ಅವರ ದುರಾಸೆಗಳು ಕೂಡ ಹೆಚ್ಚಾಗುತ್ತಲೇ ಹೋಗುತ್ತದೆ. ದುರಾಸೆಯ ಮಹಿಳೆಯರು ತಮ್ಮ ದುರಾಸೆಯನ್ನು ಈಡೇರಿಸಿಕೊಳ್ಳಲು ಅದು ಎಂತಹುದ್ದೇ ಸುಳ್ಳಾದರೂ ಸರಿ ಅದನ್ನು ಆಶ್ರಯಿಸುವುದನ್ನು ತಪ್ಪಿಸುವುದಿಲ್ಲ. ಅಂತಹ ಮಹಿಳೆಯರು ಯಾವುದೇ ಸಮಯದಲ್ಲಿ ವಿಶ್ವಾಸದ್ರೋಹಿ ಆಗಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ ನೀವು ದುರಾಸೆಯ ಮಹಿಳೆಯರಿಂದ ದೂರವಿರಬೇಕು ಎಂದು ಹೇಳಲಾಗುತ್ತದೆ.

​ಕೆಟ್ಟ ಸ್ವಭಾವದ ಮಹಿಳೆ
ಕೆಟ್ಟ ಅಥವಾ ನೀಚ ಸ್ವಭಾವವನ್ನು ಹೊಂದಿರುವ ಮಹಿಳೆಯ ಖರ್ಚನ್ನು ಭರಿಸುತ್ತಿರುವ ಪುರುಷನು ತನ್ನ ಜೀವನದಲ್ಲಿ ಸಾಕಷ್ಟು ನಷ್ಟವನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದ ನೀವು ಯಾವಾಗಲೂ ಅಂತಹ ಮಹಿಳೆಯಿಂದ ದೂರವಿರಬೇಕು ಎಂದು ಚಾಣಕ್ಯನು ಪುರುಷರಿಗೆ ತನ್ನ ನೀತಿಯ ಮೂಲಕ ತಿಳಿಸಿದ್ದಾನೆ.

ಸೊಕ್ಕಿನ ಮಹಿಳೆ : ತಾಯಿ ಸರಸ್ವತಿ ಮತ್ತು ತಾಯಿ ಲಕ್ಷ್ಮಿ ಇಬ್ಬರೂ ಸೊಕ್ಕಿನ ಮಹಿಳೆಯನ್ನು ಇಷ್ಟಪಡುವುದಿಲ್ಲ. ಸೊಕ್ಕಿರುವ ಮಹಿಳೆ ತನ್ನ ಜ್ಞಾನವನ್ನು ಬುದ್ಧಿವಂತಿಕೆಯಿಂದ ಬಳಸಲು ಸಾಧ್ಯವಾಗುವುದಿಲ್ಲ. ಹಾಗೆ ಮನೆಯ ಸಂತೋಷ ಇವಳಿಂದ ಹಾಳಾಗುತ್ತದೆ. ಹಾಗಾಗಿ ಎಂದೂ ಸೊಕ್ಕಿನ ಮಹಿಳೆಯನ್ನು ನಂಬಬೇಡಿ ಎಂದು ಚಾಣಕ್ಯ ಹೇಳಿದ್ದಾರೆ.  

ಆಚಾರ್ಯ ಚಾಣಕ್ಯ ಹೇಳುವ ಪ್ರಕಾರ, ಈ ಮೇಲಿನ ಗುಣವಿರುವ ಮಹಿಳೆಯರನ್ನು ಎಂದಿಗೂ ನಂಬಬಾರದು ಮತ್ತು ಅವರನ್ನು ತಮ್ಮ ಜೀವನಸಂಗಾತಿಯನ್ನಾಗಿ ಮಾಡಿಕೊಳ್ಳಬಾರದು ಎಂದು ಹೇಳುತ್ತಾನೆ. ಇಂತಹ ಮಹಿಳೆಯರನ್ನು ಜೀವನಸಂಗಾತಿಯನ್ನಾಗಿಸಿಕೊಂಡರೆ ನಿಮ್ಮ ಜೀವನವೇ ಹಾಳು ಎನ್ನುತ್ತಾನೆ.