Home Interesting ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿದ ಬಸ್, ಬಸ್ ನಡಿಗೆ ಸಿಲುಕಿ ಬೈಕ್ ಸವಾರ ಸಾವು

ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿದ ಬಸ್, ಬಸ್ ನಡಿಗೆ ಸಿಲುಕಿ ಬೈಕ್ ಸವಾರ ಸಾವು

Hindu neighbor gifts plot of land

Hindu neighbour gifts land to Muslim journalist

ಕುಂಬಳೆ : ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್ ಒಂದು ನಿಯಂತ್ರಣ ತಪ್ಪಿ ಹಿಂದಕ್ಕೆ ಚಲಿಸಿದ ಪರಿಣಾಮ, ಹಿಂದಿನಿಂದ ಬಂದ ಬೈಕ್ ಗೆ ಬಸ್‌ ಡಿಕ್ಕಿ ಹೊಡೆದು ಬೈಕ್ ಸವಾರ ಬಸ್‌ನ ಅಡಿಯಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಕೇರಳದ ಕುಂಬಳೆಯಲ್ಲಿ ಸಂಭವಿಸಿದೆ.

ಮೃತಪಟ್ಟ ವ್ಯಕ್ತಿ ಈಟಿತಟ್ ನಿವಾಸಿ, ರಬ್ಬರ್ ಟ್ಯಾಪಿಂಗ್ ಕಾರ್ಮಿಕನಾದ ಕಪ್ಪಲ್ ಮಾಕೆಲ್ ಜೋಶಿ (45) ಎಂದು ತಿಳಿದು ಬಂದಿದೆ.

ಇಲ್ಲಿನ ಮಲೆನಾಡ ಹೆದ್ದಾರಿಯ ಕಾಟ್ಟುಂಕವಲ ಚುರುತ್ತಿಲ್‌ನಲ್ಲಿ ಶನಿವಾರ ಬೆಳಗ್ಗೆ ಘಟನೆ ಸಂಭವಿಸಿದೆ. ಗಾಳಿ ಮಳೆಗೆ ಕೆಲ ದಿನಗಳ ಹಿಂದೆ ರಸ್ತೆಯ ಒಂದು ಭಾಗ ಕುಸಿತಕ್ಕೊಳಗಾಗಿರುವುದರಿಂದ ವಾಹನ ಸಂಚಾರವನ್ನು ಬಂದ್ ಮಾಡಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಇಲ್ಲಿ ಬಸ್ ಏರಲು ಪ್ರಯಾಣಿಕರು ಎತ್ತರದ ಪ್ರದೇಶದಲ್ಲಿ ನಿಂತಿದ್ದರು.

ಬಸ್ ಎತ್ತರದ ಪ್ರದೇಶದಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಡುವಾಗ ಮುಂದೆ ಹೋಗದೆ ಹಿಂದಕ್ಕೆ ಚಲಿಸಿದೆ. ಈ ವೇಳೆ ಹಿಂದೆ ಇದ್ದ ಬೈಕ್‌ ಗೆ ಬಸ್‌ ಡಿಕ್ಕಿಯಾಗಿದ್ದು, ಬೈಕ್‌ ಸವಾರ ಬಸ್‌ನಡಿಗೆ ಸಿಲುಕಿದ್ದಾರೆ. ತಕ್ಷಣ ಆತನನ್ನು ಸ್ಥಳೀಯರು ಹೊರಗೆಳೆದು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆಗೆ ಸ್ಪಂದಿಸದೆ, ಆತ ಕೊನೆಯುಸಿರೆಳೆದಿದ್ದಾರೆ.