Home Interesting ಪ್ಲೀಸ್ ಬ್ರೇಕಪ್ ಮಾಡಬೇಡ, ನನ್ನನ್ನು ಬಿಡಬೇಡ – ನಡು ರಸ್ತೆಯಲ್ಲಿ ಗೆಳತಿಯ ಕಾಲು ಹಿಡಿದು ಬೇಡಿಕೊಂಡ...

ಪ್ಲೀಸ್ ಬ್ರೇಕಪ್ ಮಾಡಬೇಡ, ನನ್ನನ್ನು ಬಿಡಬೇಡ – ನಡು ರಸ್ತೆಯಲ್ಲಿ ಗೆಳತಿಯ ಕಾಲು ಹಿಡಿದು ಬೇಡಿಕೊಂಡ ಹುಡುಗ – ಹುಡುಗನಿಗೆ ಸ್ಪಂದಿಸಿದ ಇಂಟರ್ನೆಟ್ !

Hindu neighbor gifts plot of land

Hindu neighbour gifts land to Muslim journalist

ಪ್ರತಿಯೊಬ್ಬರ ಜೀವನದಲ್ಲಿಯೂ ಮೊದಲ ಪ್ರೀತಿ ಅದ್ಭುತವಾಗಿರುತ್ತದೆ. ಅದೇ ಪ್ರೀತಿ ಒಂದು ವೇಳೆ ಲವ್ ಬ್ರೇಕ್ ಅಪ್ ಆದರೆ ಅದರ ನೋವು ಹೇಳಲು ಅಸಾಧ್ಯ. ಆ ಫಸ್ಟ್ ಲವ್ ನಲ್ಲಿರುವ ನವಿರು ಭಾವನೆಗಳಿಗೆ ಸಣ್ಣ ಗಾಯವಾದರೂ ಸಾಕು, ವಿಪರೀತ ತಡೆದುಕೊಳ್ಳಲಾಗದ ನೋವು ಖಚಿತ. ಇದು ಅಂತಹಾ. ಒಂದು ಬ್ರೇಕಪ್ ಅನ್ನು ಅನುಭವಿಸಿದ ಹುಡುಗನ ಬಗ್ಗೆಯ ಸ್ಟೋರಿ. ಆತ ತನ್ನ ಪ್ರೀತಿಯನ್ನು ಮರಳಿ ಪಡೆಯಲು ಹುಡುಗಿಯ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವ ಒಂದು ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದು ಆತನ ಬಗ್ಗೆ ಜನರಿಗೆ ಕನಿಕರ ಮೂಡುವಂತೆ ಮಾಡಿದೆ.

ಈ ವೀಡಿಯೋವನ್ನು ಫಂಟಾಪ್ ಎಂಬ ಹೆಸರಿನ ಇನ್‍ಸ್ಟಾಗ್ರಾಮ್ ಪೇಜ್‍ನಲ್ಲಿ ಹಂಚಿಕೊಳ್ಳಲಾಗಿದ್ದು, ವೀಡಿಯೋದಲ್ಲಿ ಹುಡುಗನೊಬ್ಬ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದ ಶಾಲಾ ಬಾಲಕಿಯ ಫುಟ್‍ಪಾತ್ ಮೇಲೆ ನಿಂತಿದ್ದಾಗ, ಆಕೆಯ ಹಿಡಿದುಕೊಂಡು ತನ್ನನ್ನು ಬಿಟ್ಟು ಹೋಗಬೇಡ, ನನ್ನನ್ನು ಕರೆದುಕೊಂಡು ಹೋಗು ಎಂದು ಬೇಡಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.

ಹುಡುಗಿಯ ಪಾದ ಹಿಡಿದು ಆಕೆಯ ಮನವೊಲಿಸಲು ಹುಡುಗ ಎಷ್ಟೇ ಪ್ರಯತ್ನಿಸುತ್ತಿದ್ದರೂ, ಆಕೆ ಮಾತ್ರ ಇಲ್ಲ ಎಂದು ತಲೆಯಾಡಿಸುತ್ತಿರುತ್ತಾಳೆ. ಸದ್ಯ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಇಲ್ಲಿಯವರೆಗೂ ಸುಮಾರು 73 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 4,600ಕ್ಕೂ ಹೆಚ್ಚು ಲೈಕ್ಸ್ ಹರಿದುಬಂದಿದೆ. ಮುಂದೆ ಏನಾಯಿತು ಗೊತ್ತಿಲ್ಲ. ತೀರಾ ಸಾಫ್ಟ್ ಅಂದುಕೊಂಡಿದ್ದ ಹುಡುಗಿಯ ಕಠೋರ ಮನಸ್ಸು ಕರಗಿತೆ ಎಂಬ ಪ್ರಶ್ನೆ ಮತ್ತು ಕರಗಿ ಮತ್ತೆ ಅವರಿಬ್ಬರೂ ಒಂದಾಗಲಿ ಎಂಬ ಆಶಾಭಾವನೆಯನ್ನು ಆ ವೀಡಿಯೊ ಕಂಡವರು ವ್ಯಕ್ತಪಡಿಸಿದ್ದಾರೆ.