Home Interesting Bizarre Names: ಇಲ್ಲಿದೆ ವಿಚಿತ್ರ ಹೆಸರುಗಳು! ಇವು ಮನುಷ್ಯರ ಹೆಸರು ಅಂತ ನೀವು ನಂಬೋಕೆ ಸಾಧ್ಯವಿಲ್ಲ!

Bizarre Names: ಇಲ್ಲಿದೆ ವಿಚಿತ್ರ ಹೆಸರುಗಳು! ಇವು ಮನುಷ್ಯರ ಹೆಸರು ಅಂತ ನೀವು ನಂಬೋಕೆ ಸಾಧ್ಯವಿಲ್ಲ!

Bizarre Names

Hindu neighbor gifts plot of land

Hindu neighbour gifts land to Muslim journalist

Bizarre Names: ಒಬ್ಬರನ್ನು ಗುರುತಿಸೋದಿಕ್ಕೆ ಹೆಸರು ಬೇಕೇ ಬೇಕು. ಎಲ್ಲರು ತಮ್ಮ ಹೆಸರು ಚೆನ್ನಾಗಿರಬೇಕು. ಇನ್ನೊಬ್ಬರು ನಮ್ಮನ್ನು ಕರೆಯುವಾಗ ನಮ್ಮ ಹೆಸರು ಚೆನ್ನಾಗಿ ಕೇಳಿಸಬೇಕು. ಹೀಗೇ ಹಲವು ಭಾವನೆಗಳನ್ನು ಹೊಂದಿರುತ್ತಾರೆ. ಹಾಗೆಯೇ ದೇಶದಲ್ಲಿ ನಾನಾ ರೀತಿಯ ಜನರಿದ್ದಾರೆ. ಅವರಿಗೆ ವಿವಿಧ ವಿಭಿನ್ನವಾದ ಹೆಸರಿದೆ. ಆದರೆ ನೀವು ಈ ವಿಚಿತ್ರ ಹೆಸರು (Bizarre Names) ಮನುಷ್ಯರಿಗಿರೋದು ಕೇಳಿರಲಿಕ್ಕಿಲ್ಲ. ಹೌದು, ಇವು ಮನುಷ್ಯರ ಹೆಸರು ಅಂತ ನೀವು ನಂಬೋಕೆ ಸಾಧ್ಯವಿಲ್ಲ!. ಹಾಗಾದ್ರೆ ಹೇಗಿದೆ ಆ ಹೆಸರು? ನೋಡೋಣ.

ಈ ವಿಚಿತ್ರ ಹೆಸರು ಇರುವ ಜನರು ಕರ್ನಾಟಕದ (Karnataka) ಭದ್ರಪುರ್ ನಲ್ಲಿದ್ದಾರೆ. ಈ ಜನರು ಹಿಕ್ಕಿ-ಪಿಕ್ಕಿ ಬುಡಕಟ್ಟು ಜನಾಂಗಕ್ಕೆ ಸೇರಿದ್ದಾರೆ. ಇಲ್ಲಿನ ಜನರು ತಮ್ಮ ಮಕ್ಕಳಿಗೆ Google, Coffee, Mysore Pak, British, Train, Bus, Glucose, High Court, Two, America, Obama, Dollar ಇಂತಹ ಹೆಸರಿಡುತ್ತಾರೆ. Google, Coffee ಅಂದ್ರೆ ಇಲ್ಲಿನ ಮಕ್ಕಳ‌ ಹೆಸರು, ವಿಚಿತ್ರವಾಗಿದೆ ಅಲ್ವಾ?!!. ಅಲ್ಲಿ ಕಾಫಿ ಕೊಡಿ ಅಂದ್ರೆ ಆ ಹೆಸರಿರೋರು ಓಡಿ ಬರಬಹುದೇನೋ!!. ಹೀಗೇ ವಸ್ತು, ದಿನಬಳಕೆಯ ಪದಗಳ ಹೆಸರನ್ನು ಇಲ್ಲಿನ ಜನರು ಇಟ್ಟುಕೊಂಡಿದ್ದಾರೆ.

ಹಿಕ್ಕಿ-ಪಿಕ್ಕಿ ಸಮುದಾಯದ ಜನರು (Hikki-Pikki Tribe Of Karnataka) ಬೇಟೆಯಾಡಿ ಜೀವನ ನಡೆಸುತ್ತಾರೆ. ಇವರು ದೇಶದಾದ್ಯಂತ ಅಲೆದಾಟ ಮಾಡಿ ಬೇಟೆಯಾಡುತ್ತಾರೆ. ಈ ಭಾಗದ ಜನರು ಕನ್ನಡ (kannada), ಮಲಯಾಳಂ (Malayalam), ತೆಲುಗು (Telugu), ತಮಿಳು (Tamil) ಭಾಷೆ ಮಾತನಾಡುತ್ತಾರೆ. ಇವರುಗಳು ದೇಶಾದ್ಯಂತ ಬೇಟೆಗೆ ಅಲೆದಾಡುವುದರಿಂದ ವಿವಿಧ ಭಾಷೆಗಳನ್ನು ಕಲಿತುಕೊಂಡಿರುತ್ತಾರೆ. ಅಲ್ಲದೆ, ಈ ಸಮುದಾಯದ ಜನರ ಬಳಿ ಆಫೀಸಿಯಲ್ ರೆಕಾರ್ಡ್ ಇರುವುದಿಲ್ಲ. ಆದರೆ, ಇವರ ಬಳಿ ಮತದಾರರ ಗುರುತು ಚೀಟಿ ಇದೆ.

ಸದ್ಯ ಈ ಭಾಗದ ಜನರ ಹೆಸರು ವಿಚಿತ್ರವಾಗಿದ್ದು, ದೇಶವೇ ಒಂದು ಬಾರಿ ತಿರುಗಿ ನೋಡುವಂತಿದೆ. ನೀವೂ ಇಂತಹ ಹೆಸರು ಕೇಳಿರಲಿಲ್ಲವಲ್ಲ?. ನೀವು ನಿಮ್ಮ ಸ್ನೇಹಿತರ ಬಳಿ ಈ ವಿಚಾರ ಹಂಚಿಕೊಳ್ಳಿ. ಜ್ಞಾನ ಹೆಚ್ಚಾಗುತ್ತದೆ. ವಿಚಾರ ಗೊತ್ತಾದಂತಾಗುತ್ತದೆ.