Home Interesting Chennai : 54 ವರ್ಷದ ಹಿಂದೆ ಕದ್ದ 37 ರೂ ಗಳನ್ನು ಇಂದು ಬಡ್ಡಿ ಸಮೇತ...

Chennai : 54 ವರ್ಷದ ಹಿಂದೆ ಕದ್ದ 37 ರೂ ಗಳನ್ನು ಇಂದು ಬಡ್ಡಿ ಸಮೇತ ಹಿಂದಿರುಗಿಸಿದ ವ್ಯಕ್ತಿ – ಈಗ ಕೊಟ್ಟ ಹಣವೆಷ್ಟು ಗೊತ್ತಾ ?

Hindu neighbor gifts plot of land

Hindu neighbour gifts land to Muslim journalist

Chennai: ಇಂದಿನ ದಿನಗಳಲ್ಲಿ ಸಾಲ ಪಡೆದ ಹೆಚ್ಚಿನವರು ಹಣವನ್ನು ಹಿಂದಿರುಗಿಸುವುದಿಲ್ಲ. ಸಾಲಕೊಟ್ಟವರಿಗೆ ಸತಾಯಿಸಿ ಸತಾಯಿಸಿ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ 54 ವರ್ಷಗಳ ಹಿಂದೆ ತಾನು ಕದ್ದ ಹಣವನ್ನು ಮರಳಿ ತನ್ನ ಮಾಲೀಕರಿಗೆ ನೀಡಿದ್ದಾರೆ. ಅದು ಕೂಡ ಬಡ್ಡಿ ಸಮೇತ.

ಹೌದು ಚೆನ್ನೈ(Chennai )ಪ್ರದೇಶ ಒಂದರಲ್ಲಿ 37 ರೂಪಾಯಿಯನ್ನು ಬಡ್ಡಿ ಸಮೇತ ಹಿಂದಿರುಗಿಸಿದ್ದಾರೆ. 54 ವರ್ಷದ ಹಿಂದೆ ಕಳೆದುಕೊಂಡಿದ್ದ 37 ರೂಪಾಯಿಗೆ ದೊಡ್ಡಮೊತ್ತ ಸ್ವೀಕರಿಸಿದ ವ್ಯಕ್ತಿ ಸಂತೋಷ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ 37 ರೂಪಾಯಿಗೆ 54 ವರ್ಷದ ನಂತರ ಆ ವ್ಯಕ್ತಿ ಕೊಟ್ಟ ಹಣ ಎಷ್ಟು ಗೊತ್ತಾ? ಇಲ್ಲಿದೆ ನೋಡಿ ಅಂದು ನಡೆದ ಘಟನೆಯ ವಿವರ ಹಾಗೂ ಇಂದು ರಂಜಿತ್ ಹಿಂದಿರುಗಿಸಿದ ದೊಡ್ಡ ಮೊತ್ತ.

ಅದು 1970ರ ಸಮಯ. ರಂಜಿತ್ ಎಂಬ ಯುವಕನ ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಶ್ರೀಲಂಕಾದ ನುವಾರಾ ಬಳಿಯಲ್ಲಿಯ ತೋಟವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡು ರಂಜಿತ್ ಜೀವನ ನಡೆಸುತ್ತಿದ್ದರು. ಒಂದು ದಿನ ತೋಟದ ಮಾಲೀಕರು ಮನೆಯ ಕೆಲಸಕ್ಕಾಗಿ ರಂಜಿತ್‌ ಅವರನ್ನು ಕರೆಸಿಕೊಂಡಿದ್ದರು. ಮಾಲೀಕರು ಹೊಸ ಮನೆಗೆ ಹೋಗುತ್ತಿರುವ ಕಾರಣ ವಸ್ತುಗಳನ್ನು ಸ್ಥಳಾಂತರಿಸುವ ಕೆಲಸಕ್ಕಾಗಿ ರಂಜಿತ್ ಹೋಗಿದ್ದರು. ಸಾಮಾನುಗಳನ್ನು ಶಿಫ್ಟ್ ಮಾಡುವ ಸಂದರ್ಭದಲ್ಲಿ ರಂಜಿತ್‌ಗೆ 37 ರೂಪಾಯಿ ಸಿಕ್ಕಿತ್ತು. ಅಂದಿನ ದಿನಕ್ಕೆ 37 ರೂ. ಅತಿದೊಡ್ಡ ಮೊತ್ತವಾಗಿತ್ತು. ಬಡತನದಲ್ಲಿ ಬೆಂದಿದ್ದ ರಂಜಿತ್ ಹಣವನ್ನು ಹಿಂದಿರುಗಿಸದೇ ಜೇಬಿಗೆ ಹಾಕಿಕೊಂಡಿದ್ದರು.

ಕೆಲ ದಿನಗಳ ಬಳಿಕ ತೋಟದ ಮಾಲೀಕ ಮಸ್ರೂಫ್ ಸಗುಯಿ ಅವರಿಗೆ ಹಾಸಿಗೆ ಕೆಳಗೆ ಹಣ ಇರಿಸೋದು ನೆನಪಾಗಿದೆ. ಕೂಡಲೇ ರಂಜಿತ್ ಅವರನ್ನು ಕರೆಸಿ ಹಣದ ಬಗ್ಗೆ ವಿಚಾರಣೆ ನಡೆಸಿದ್ದರು. ಆದ್ರೆ ರಂಜಿತ್ ಯಾವುದೇ ಉತ್ತರ ನೀಡದೇ ಹಣ ಸಿಕ್ಕಿಲ್ಲ ಎಂದು ಹೇಳಿದ್ದರು. ರಂಜಿತ್ ಪೋಷಕರು ಸಹ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬ ದೊಡ್ಡದಾಗಿದ್ದರಿಂದ ಯಾವ ಮಕ್ಕಳಿಗೂ ಶಿಕ್ಷಣ ಕೊಡಿಸಿರಲಿಲ್ಲ. 17ನೇ ವರ್ಷದಲ್ಲಿ ರಂಜಿತ್ ತಮಿಳುನಾಡಿಗೆ ಬಂದು ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದ್ದರು. 1977ರ ನಂತರ ರಂಜಿತ್ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲು ಶುರುವಾಯ್ತು. ವ್ಯಾಪಾರಗಳ ಮುಖಾಂತರ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಬೆಳೆಯುವಂತಾಯಿತು.

ಹೀಗಿರುವಾಗ ರಂಜಿತವರಿಗೆ ಬೈಬಲ್ ಓದುವ ಅಭ್ಯಾಸವಿರುತ್ತದೆ. ಅದರಲ್ಲಿ ಕದ್ದ ಹಣದ ಬಗ್ಗೆ ಕೆಲವು ಸಾಲುಗಳಿದ್ದು ಅದು ರಂಜಿತ್ ಅವರ ಮನಮುಟ್ಟುತ್ತದೆ. ಈ ಸಾಲುಗಳನ್ನು ಗಂಭೀರವಾಗಿ ತೆಗೆದುಕೊಂಡ ರಂಜಿತ್ ಅವರಿಗೆ 50 ವರ್ಷದ ಹಿಂದೆಯ 37 ರೂಪಾಯಿ ಕಳ್ಳತನ ಬೆಳಕಿಗೆ ಬಂದಿದೆ. ಅಂದೇ ಆ 37 ರೂಪಾಯಿ ಹಣ ಹಿಂದಿರುಗಿಸುವ ನಿರ್ಧಾರ ಮಾಡಿ, ಮಸ್ರೂಫ್ ಸಗುಯಿ ಅವರಿಗಾಗಿ ಹುಡುಕಾಟ ಆರಂಭಿಸಿದ್ದರು. ಗೆಳೆಯರ ಸಹಾಯದಿಂದ ಹುಡುಕಾಟ ಆರಂಭಿಸಿದಾಗ ಮಸ್ರೂಫ್ ಮತ್ತು ಅವರ ಪತ್ನಿ ನಿಧನವಾಗಿರುವ ವಿಷಯ ಗೊತ್ತಾಗಿದೆ. ಬಳಿಕ ಅವರ ಮಗನನ್ನು ಸಂಪರ್ಕಿಸಿ ಶ್ರೀಲಂಕಾಕ್ಕೆ ತೆರಳಿಝೆಡ್ ಭೇಟಿಯಾಗಿ, 1970ರ ಘಟನೆ ವಿವರಿಸಿ 37 ರೂಪಾಯಿಗೆ 70 ಸಾವಿರ ರೂಪಾಯಿ ಹಿಂದಿರುಗಿಸಿದ್ದಾರೆ.