Home Health ಕೋರೋನಾ ಜೂನ್ 21 ರಿಂದ 5 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ !!

ಜೂನ್ 21 ರಿಂದ 5 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ !!

Hindu neighbor gifts plot of land

Hindu neighbour gifts land to Muslim journalist

ವಿಶ್ವದಾದ್ಯಂತ ಕೊರೋನಾ ವೈರಸ್ ಹೆಚ್ಚಳವಾಗುತ್ತಿದೆ. ಹಾಗಾಗಿ ಆಯಾ ದೇಶಗಳು ಕೋವಿಡ್ ನಿಯಂತ್ರಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ. ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್ ಹಾಗೂ ಐಸಿಯು ಘಟಕಗಳನ್ನು ಸಿದ್ಧಪಡಿಸಿವೆ.

ಅಂತೆಯೇ ಅಮೆರಿಕದಲ್ಲೂ ಕೆಲ ದಿನಗಳಿಂದ ಕೋವಿಡ್ ಕೇಸ್ ಹೆಚ್ಚಳವಾಗುತ್ತಿದ್ದು, ಮಕ್ಕಳ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ. ಅದಕ್ಕಾಗಿ ಜೂನ್ 21 ರಿಂದ 5 ವರ್ಷದ ಮಕ್ಕಳಿಗೂ ಕೊರೋನಾ ಲಸಿಕೆ ನೀಡಲು ಅಮೆರಿಕದ ಆರೋಗ್ಯ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ ಜೂನ್ 15ರಂದೇ ಸ್ವತಂತ್ರ ತಜ್ಞರ ಸಮಿತಿಯು ಮಕ್ಕಳ ದತ್ತಾಂಶವನ್ನು ಕಲೆ ಹಾಕಲು ಸಭೆ ನಡೆಸಲಿದೆ.

ಈ ಕುರಿತು ಮಾಹಿತಿ ನೀಡಿರುವ ಶ್ವೇತಭವನದ ಕೋವಿಡ್ ಪ್ರತಿಕ್ರಿಯೆ ಸಂಯೋಜಕ ಡಾ.ಆಶಿಶ್ ಝಾ, ಬೈಡನ್ ನೇತೃತ್ವದ ಸರ್ಕಾರವು 10 ಮಿಲಿಯನ್ (ದಶಲಕ್ಷ) ನಷ್ಟು ಫಿಜರ್ ಮತ್ತು ಮೊಡೆರ್ನಾ ಲಸಿಕೆಗಳನ್ನು ರಾಜ್ಯಗಳ ಔಷಧಾಲಯಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಲಭ್ಯವಾಗುವಂತೆ ಮಾಡಿದೆ. ಆರೋಗ್ಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದ ನಂತರ ಲಸಿಕೆಯನ್ನು ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.