Home Food ಮೈಸೂರಿನಲ್ಲಿ ಪಿಎಂ ನರೇಂದ್ರ ಮೋದಿ ಊಟ ತಿಂಡಿಯ ಮೆನು ಹೀಗಿದೆ

ಮೈಸೂರಿನಲ್ಲಿ ಪಿಎಂ ನರೇಂದ್ರ ಮೋದಿ ಊಟ ತಿಂಡಿಯ ಮೆನು ಹೀಗಿದೆ

Hindu neighbor gifts plot of land

Hindu neighbour gifts land to Muslim journalist

ಯೋಗ ಕಾರ್ಯಕ್ರಮ ನಿಮಿತ್ತ ಮೈಸೂರು ನಗರಕ್ಕೆ ಆಗಮಿಸಿದ ಪಿಎಂ ನರೇಂದ್ರ ಮೋದಿ ಅವರ ಊಟ-ಉಪಹಾರದ ಮೆನು ಸಿದ್ದವಾಗಿದೆ. ಶುದ್ದ ಸಸ್ಯಹಾರಿ ಊಟ ಸೇವಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪಿಎಂ ರ್ಯಾಡಿಸನ್ ಹೋಟೆಲ್​ನಲ್ಲಿ ತಂಗಿದ್ದಾರೆ. ಊಟದ ಮೆನುವಿನಲ್ಲಿ ಶುದ್ದ ಸಸ್ಯಹಾರಿ ಊಟ ಇದೆ. ಬೆಳಗ್ಗಿನ ಉಪಾಹಾರಕ್ಕೆ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ-ಸಾಂಬರ್ ಸಿದ್ದಪಡಿಸಲಾಗುತ್ತದೆ. ಬ್ರೆಡ್ ಬಟರ್, ಮಿಕ್ಸ್ ಫ್ರೂಟ್, ಟೀ ಹಾಗೂ ಮಾರಿ ಬಿಸ್ಕಟ್ ಇದೆ.

ರಾತ್ರಿಯ ಊಟಕ್ಕೆ ಕಿಚಡಿ/ಗುಜರಾತಿ ಕರಿ, ರೋಟಿ, ದಾಲ್, ರೈಸ್, ಎರಡು ರೀತಿಯ ಸಬ್ಜಿ, ಮೊಸರು, ಮಿಕ್ಸ್ ಫ್ರೂಟ್ ಒಳಗೊಂಡ ಮೆನು ತಯಾರಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.