Home Food Mutton : ಚಳಿ ಎಫೆಕ್ಟ್ – 1000 ರೂಪಾಯಿಯತ್ತ ಮಟನ್ ದರ !!

Mutton : ಚಳಿ ಎಫೆಕ್ಟ್ – 1000 ರೂಪಾಯಿಯತ್ತ ಮಟನ್ ದರ !!

Hindu neighbor gifts plot of land

Hindu neighbour gifts land to Muslim journalist

Mutton : ರಾಜ್ಯಾದ್ಯಂತ ವಿಪರೀತ ಚಳಿ ಆವರಿಸಿಕೊಂಡಿದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಚಳಿಯಿಂದ ಜನ ನಡುಗುತ್ತಿದ್ದಾರೆ. ಇದು ಆಹಾರಪ್ರಿಯರಿಗೂ ಕೂಡ ದೊಡ್ಡ ಎಫೆಕ್ಟ್ ಕೊಟ್ಟಿದೆ. ಅದರಲ್ಲೂ ತುಸು ಹೆಚ್ಚು ಮಾಂಸಾಹಾರಿಗಳಿಗೆ ಎನ್ನಬಹುದು. ಇತ್ತೀಚಿಗೆ ಮೊಟ್ಟೆ ದರದಲ್ಲಿ ಸಿಕ್ಕಾಪಟ್ಟೆ ಏರಿಕೆ ಕಂಡಿತ್ತು. ಇದೀಗ ಮಟನ್ ಸರದಿ. ಕಾರಣ ಚಳಿಯ ಎಫೆಕ್ಟ್ ನಿಂದಾಗಿ ಮಟನ್ ಕೆಜಿಗೆ ಸಾವಿರ ರೂಪಾಯಿಯತ್ತ ಮುಖ ಮಾಡಿದೆ.

ಹೌದು, ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಚಳಿ (Cold)ಹಾಗೂ ಶೀತಗಾಳಿ ಶುರುವಾಗಿದೆ. ಚಳಿ ಮತ್ತು ಗಾಳಿಗೆ ಥರಗುಟ್ಟುತ್ತಿರುವ ಜನರು ಮಾಂಸಹಾರಕ್ಕೆ (Non-Veg) ಹೆಚ್ಚು ಮೊರೆ ಹೋಗುತ್ತಿದ್ದಾರೆ. ರಾಜ್ಯದಲ್ಲಿ ಅತಿಯಾದ ಚಳಿ ಹಿನ್ನೆಲೆ ಮಟನ್, ಚಿಕನ್ ದರ ಏರಿಕೆಯಾಗಿದೆ. ಸಾವಿರ ಗಡಿಯತ್ತ ಮಟನ್ ದರ ಏರಿಕೆಯ ಸಾಧ್ಯತೆ ಇದ್ದು, ಕೋಳಿ ಬೆಲೆಯೂ ಏರಿಕೆ ಕಂಡಿರುವುದು ನಾನ್‌ವೆಜ್‌ ಪ್ರಿಯರಿಗೆ ಬೇಸರ ಉಂಟಾಗಿದೆ.

ಅಂದಹಾಗೆ ಕಳೆದೊಂದು ತಿಂಗಳಿನಿಂದ ಚಿಕನ್ ಹಾಗೂ ಮಟನ್​​ ದರದಲ್ಲಿ ಗರಿಷ್ಠ ಏರಿಕೆ ಕಂಡಿದೆ. ಚಳಿಯಿಂದ ಕುರಿ ಬೆಳವಣಿಗೆ ಕುಸಿತವಾದ ಹಿನ್ನಲೆ ಕೆಜಿ ಮಟನ್​​ಗೆ 900 ರೂ. ಇದ್ದು, ಮುಂದಿನ ವಾರ ಒಂದು ಸಾವಿರ ರೂ. ಆಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ 230 ರಿಂದ 240 ರೂ. ರವರಗೆ ಇರುತ್ತಿದ್ದ ಚಿಕನ್ ದರ ಇದೀಗ ಕೆಜಿಗೆ  300 ರಿಂದ 310 ರೂ. ಗೆ ಏರಿಕೆ ಕಂಡಿದೆ.